• Sat. Jul 13th, 2024

PLACE YOUR AD HERE AT LOWEST PRICE

ಬಂಗಾರಪೇಟೆ: ನವಯುಗ ಪ್ರತಿಷ್ಠಾಪನ ಚಾರ್ಯ ಗೌತಮ ಬುದ್ಧ ಜಾತಿ ಧರ್ಮ, ಪಾಪ ಪುಣ್ಯ ಕರ್ಮ,  ಶ್ರೀಮಂತ ಬಡತನ, ಲಿಂಗ ತಾರತಮ್ಯದ ಅಂಧಕಾರದಲ್ಲಿ ಮುಳುಗಿದ ವಿಶ್ವವನ್ನು ಸಮ-ಸಮಾಜದ ಬೆಳಕೆಂಬ ಜ್ಞಾನದ ಕಡೆ ಕೊಂಡೊಯ್ಯುವ ನವಯುಗವನ್ನು ಪ್ರತಿಷ್ಠಾಪನೆ ಮಾಡಿದ ಚೇತನ  ಎಂದು ದಲಿತ ಸಂಘರ್ಷ ಸಮಿತಿ-ಕರ್ನಾಟಕ ರಾಜ್ಯ ಕಲಾಮಂಡಳಿ ಸಂಚಾಲಕ ಕಲಾವಿದ ಯಲ್ಲಪ್ಪ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ, ಅವರು ನೇಪಾಳದ ಲುಂಬಿಣಿಯಲ್ಲಿ ರಾಜಕುಮಾರನಾಗಿ ಜನಿಸಿದ ಸಿದ್ದಾರ್ಥ ತದನಂತರ ಮೋಕ್ಷ ಮಾರ್ಗವನ್ನು ಪಡೆಯಲು ಸುದೀರ್ಘ ತಪಸ್ಸನ್ನು ಮಾಡಿ ಬೋದಿ ವೃಕ್ಷದ ನೆರಳಿನಲ್ಲಿ ಜ್ಞಾನೋದಯ ಪಡೆದು ಬುದ್ಧನಾಗಿ ಜಗತ್ತಿಗೆ ಬೆಳಕನ್ನು ಚೆಲ್ಲಿದನು ಎಂದರು.

ದಮ್ಮ ಎಂದರೆ ಪದವಲ್ಲ ಅದು ಪ್ರಕೃತಿಯ ನಿಯಮ ಮತ್ತು ತಾಯಿಯ ಮಮತೆಯ ಕರುಳಿದ್ದಂತೆ, ಮಾನವನು ಮಾಡುವ ಪಾಪ, ಪುಣ್ಯ, ಕರ್ಮ, ದುರಾಸೆ, ದೌರ್ಜನ್ಯಗಳೆಲ್ಲವನ್ನು ತನ್ನ ಒಡಲಿನಲ್ಲಿ ಕೂದಿಟ್ಟು ಪೀತಿ, ವಿಶ್ವಾಸ, ನಂಬಿಕೆ, ಬ್ರಾತುತ್ವ ಕರುಣಾಶೀಲ ತತ್ವಗಳನ್ನು ಜಗತ್ತಿಗೆ ಸಾರುವ ಸಂದೇಶದ ಮಹಾನ್‌ಸಾಗರವಿದ್ದಂತೆ, ಪ್ರತಿಯೊಂದು ಧರ್ಮದ ಮೂಲ ಆಶಯ ಮಾನವೀಯ ಮೌಲ್ಯಗಳನ್ನು ಕ್ರೂಢಿಕರಿಸಿ ವಿಶ್ವಕ್ಕೆ ಸಮ-ಸಮಾಜ ನಿರ್ಮಾಣ ಮಾಡುವುದಾಗಿದೆ. ವಿಪರ್ಯಾಸ ಅನಾಧಿಕಾಲದಿಂದಲೂ ಧರ್ಮದ ನೈಜ ತತ್ವವನ್ನು ಮರೆತು ಅದರ ವಿರುದ್ದ ದಿಕ್ಕಿನಲ್ಲಿ ಸಾಗಿ ಮಾನವ ಸಂಕುಲವನ್ನು ವಿನಾಶದತ್ತ ಕೊಂಡ್ಯೂಯುವ ಷಡ್ಯಂತ್ರ ರೂಪಿಸಿ ಅಶಾಂತಿ ಸೃಷ್ಠಿಸುತ್ತಿರುವುದು ಸಮಂಜಸವಲ್ಲ ಎಂದರು.

ಬುದ್ದನನ್ನು ತೆರೆಮರೆಗೆ ಸರಿಸುವ ಹುನ್ನಾರ:
ಬುದ್ದನ ಸಂದೇಶಗಳು ವಿಶ್ವ ಮಾನವತಾ ಸಂದೇಶವಾಗಿದೆ, ಹಾಗೆಯೇ ಗೌತಮಬುದ್ದನು ಹಿಂದು ಧರ್ಮದ ಒಂದು ಭಾಗ ಮತ್ತು ವಿಷ್ಣುವಿನ ಅವತಾರವೆಂದು ಪ್ರತಿಬಿಂಬಿಸಲಾಗಿದೆ. ಆದರೆ ಸಾಹಿತಿಗಳು, ಚಿಂತಕರು, ರಾಜಕಾರಣಿಗಳು ಬುದ್ದನ ಸಿದ್ದಾಂತಗಳನ್ನು ಜಗತ್ತಿಗೆ ಪಸರಿಸುವಲ್ಲಿ ವಿಫಲವಾಗಿದ್ದಾರೆ. ಇವರ ಈ ದಂದ್ವ ನಿಲುವುಗಳು ಬುದ್ದನನ್ನು ತೆರೆಮರೆಗೆ ಸರಿಸುವ ಹುನ್ನಾರವೆಂಬುವುದು ತಿಳಿಯಬಹುದಾಗಿದೆ. ಆದ್ದರಿಂದ ಪ್ರಜ್ಞಾವಂತ ಜನತೆ ಬೌದ್ದಧರ್ಮವನ್ನು ಸ್ವೀಕರಿಸಬೇಕು, ಆ ಮೂಲಕ ರಕ್ಷಿಸಿ ಬೆಳೆಸಬೇಕೆಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ಮೌರ್ಯ ಸಾಮ್ರಾಜ್ಯದ ಪ್ರಸಿದ್ದ ದೊರೆ ಅಶೋಕ ಚಕ್ರವರ್ತಿ ತಮ್ಮ ಆಡಳಿತಾವಧಿಯಲ್ಲಿ ಬೌದ್ದ ಧರ್ಮವನ್ನು ಸ್ವೀಕರಿಸಿ, ಜಗತ್ತಿನಾದ್ಯಂತ ೯೦ಸಾವಿರಕ್ಕೂ ಹೆಚ್ಚು ಶಿಲಾಶಾಸನಗಳನ್ನು ಕೆತ್ತಿಸಿ ಬೌದ್ದ ಧರ್ಮದ ತತ್ವ ಸಿದ್ದಾಂತವನ್ನು ಸಾರಿದರು. ಹಾಗೂ ಕರ್ನಾಟಕದ ಕೊಪ್ಪಳ, ಗವಿಮಠ, ಮಸ್ಕಿ, ಪಾಲ್ಕೆಗೊಂಡ ಪ್ರದೇಶಗಳಲ್ಲಿ ಬೌದ್ದ ಧರ್ಮದ ಶಿಲಾಶಾಸನಗಳು ದೊರೆತಿರುವುದು ನಮ್ಮ ಹೆಗ್ಗಳಿಕೆಯಾಗಿದೆ. ವಿಪರ್ಯಾಸ ಅಶೋಕ ಚಕ್ರವರ್ತಿಯ ನಂತರ ದೇಶಕ್ಕೆ ಆಗಮಿಸಿದ ಪರಕೀಯರ ದಾಳಿಯಿಂದ ಬೌದ್ದ ಧರ್ಮ ಅವನತಿಯ ಹಂತಕ್ಕೆ ತಲುಪಿತ್ತು. ಅಂತಹ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಬೌದ್ದ ಧರ್ಮವನ್ನು ಸ್ವೀಕರಿಸಿ, ೫ಲಕ್ಷಕ್ಕಿಂತ ಹೆಚ್ಚು ಜನರಿಗೆ ದಮ್ಮ ದೀಕ್ಷೆಯನ್ನು ಪ್ರಾಪ್ತಿಮಾಡಿ ಬೌದ್ದ ಧರ್ಮದ ಪುನಃಚ್ಚೇತನಕ್ಕೆ ಅಸಿತ್ವ ಹಾಕಿದರು, ಪ್ರತಿಯೊಬ್ಬ ವ್ಯಕ್ತಿಯು ಪ್ರಮುಖವಾಗಿ ಬುದ್ದನ ಸಂದೇಶಗಳು ಮತ್ತು ಬಾಬಾ ಸಾಹೇಬರು ರಚಿಸಿರುವಂತಹ ಸಂವಿಧಾನದ ತತ್ವಗಳನ್ನು ರೂಪಿಸಿಕೊಳ್ಳಬೇಕು, ಇದೇ ಜೀವನದ ನೈಜ ಸಂದೇಶ ಎಂದರು.

ದಲಿತ ಮುಖಂಡ ಹುಣಸನಹಳ್ಳಿ ವೆಂಕಟೇಶ್ ಮಾತನಾಡಿ, ಸರ್ಕಾರ ಎಲ್ಲೋ ಒಂದು ಕಡೆ ಬುದ್ದನ ಇರುವಿಕೆಯನ್ನು ಮರೆಮಾಚುವ ಹುನ್ನಾರ ನಡೆಸುತ್ತಿದೆ. ಆದ್ದರಿಂದ ಇನ್ನುಮುಂದಾದರೂ ಪಠ್ಯಪುಸ್ತಕದಲ್ಲಿ ಬುದ್ದನ ಪಾಠಗಳನ್ನು ಪ್ರಾಥಮಿಕ ಹಂತದಿoದ ಅಳವಡಿಸಬೇಕು. ಇದರೊಟ್ಟಿಗೆ ಸರ್ಕಾರ ಬುದ್ದ ಜಯಂತಿಯAದು ಸರ್ಕಾರಿ ರಜೆಯನ್ನು ಘೋಷಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮದಿವಣ್ಣನ್, ರಘು, ಪ್ರವೀಣ್, ಹಿರೇಕರಪನಹಳ್ಳಿ ಮುನಿರಾಜು, ಹುಳದೇನಹಳ್ಳಿ ವೆಂಕಟೇಶ್, ಗುಲ್ಲಹಳ್ಳಿ ಬಸಪ್ಪ, ಹುಣಸನಹಳ್ಳಿ ಸತೀಶ್, ನವೀನ್, ಗೌತಮ್, ಗಂಗಮ್ಮನಪಾಳ್ಯ ಶೇಖರನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!