• Fri. Oct 18th, 2024

PLACE YOUR AD HERE AT LOWEST PRICE

ಬಂಗಾರಪೇಟೆ: ಸಂಸದನಾಗಿ ಆಯ್ಕೆಯಾಗಲು ಬಂಗಾರಪೇಟೆ  ಕ್ಷೇತ್ರದ ಜನತೆಯ ಆಶೀರ್ವಾದ ಮುಖ್ಯ ಪಾತ್ರ ವಹಿಸಿದೆ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿರುವ ಅಭಿವೃದ್ದಿ ಯೋಜನೆಗಳ ಕುರಿತು ಈಗಾಗಲೇ ಸಂಬಂದಿಸಿದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಲಾಗಿದೆ ಹಂತ ಹಂತವಾಗಿ ಅಭಿವೃದ್ದಿಗೆ ಆದ್ಯತೆ ನೀಡುವ ಜೊತೆಗೆ ಕ್ಷೇತ್ರದ ಜನತೆಯ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು  ಕೋಲಾರ ಸಂಸದ ಎಂ ಮಲ್ಲೇಶ್ ಬಾಬು ಭರವಸೆ ನೀಡಿದರು. 

ಪಟ್ಟಣದ ದೇಶಿಹಳ್ಳಿಯ ಆರ್.ಆರ್. ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ  ಅಭಿನಂದನೆ ಸಮಾರಂಭ ಹಾಗೂ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ. ಬಂಗಾರಪೇಟೆ ಕ್ಷೇತ್ರದ ಜನತೆಗೆ ಮೊಟ್ಟ ಮೊದಲ ಬಾರಿಗೆ ಕೃತಜ್ಞತೆ ಅರ್ಫಿಸುತ್ತೇನೆ ಮದನಪಲ್ಲಿಯಿಂದ ಹೊಸಕೋಟೆ ರಸ್ತೆಯನ್ನು ರಾಷ್ಡ್ರೀಯಾ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ವಹಿಸಿ ಅಧಿವೇಶನದಲ್ಲಿ ಚರ್ಚಸಿ ಪ್ರಸ್ಥಾಪಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಕೈಗಾರಿಕಾ ಟೌನ್ ಶಿಪ್ ವರ್ಗಾವಣೆ ಮಾಡಿ ಕೈಗಾರಿಕಾ ಟೌನ ಶಿಪ್ ಮಾಡಲು ಮುಂದಾಗಿರುವುದು ರಾಜ್ಯ ಸರ್ಕಾರವೇ ವಿನಃ ಕೇಂದ್ರ ಸರ್ಕಾರವಲ್ಲ ಈ ವಿಷಯವನ್ನು ನಾವು ಎಲ್ಲೂ ಹೇಳಿಕೊಂಡಿಲ್ಲ ಅದನ್ನು ನೀವೆ ಪ್ರಚಾರಕ್ಕಾಗಿ ಆರೋಪಿಸುತ್ತಿದ್ದೀರಾ  ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರಿಗೆ ತಿರುಗೇಟು ನೀಡಿದರಲ್ಲದೆ ಈ ವಿಷಯ ಮಾಧ್ಯಮಗಳ ಸೃಷ್ಡಿಯಷ್ಟೆ ಎಂದು ಸ್ಪಷ್ಟಣೆ ನೀಡಿದರು.

 

ಕೋಲಾರದಲ್ಲಿ ಎರಡು ಮೂರು ತಿಂಗಳಲ್ಲಿ ಇಂಡೋರ್ ಸ್ಟೇಡಿಯಂ ಮಾಡಲು ಕ್ರಮ ವಹಿಸಲಾಗುವುದು ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕಿಂತ ದೆಹಲಿಯಲ್ಲಿ ಕೆಲಸ ಮಾಡುವುದು ಹೆಚ್ಚಿದೆ, ಇಲ್ಲಿನ ಎರಡು ಪಕ್ಷದ  ಮುಖಂಡರು ಒಗ್ಗಟ್ಟಾಗಿ  ಹೋಗುವ ಭರವಸೆ ಇದೆ ನಿಮ್ಮೊಟ್ಟಿಗೆ ನನ್ನ ಸಹಕಾರವೂ ಸಹ ಇರುತ್ತದೆ ಮುಂದಿನ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮೈತ್ರಿ ಪಾಲನೆ ಮಾಡುವುದರ ಜೊತೆಗೆ ಎಲ್ಲಾ ಚುನಾವಣೆಗಳಲ್ಲಿ ಕ್ಲೀನ್ ಸ್ವೀಪ್ ಮಾಡಿ ಅಧಿಕಾರ ಗದ್ದಗೆ ಏರುತ್ತೇವೆ ಎನ್ನುವ ಭರವಸೆ ಇದೆ ಎಂದು ತಿಳಿಸಿದರು.

ಎರಡು ಬಾರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರೂ ಮೂರನೇ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ದಿಸುವ  ಅವಕಾಶವನ್ನು ಕುಮಾರಸ್ವಾಮಿ ಅವರು ನೀಡಿದ್ದರು ಅದರಂತೆ ಕ್ಷೇತ್ರದ ಮತದಾರರು ಆಶಿರ್ವದಿಸುವ ಮೂಲಕ ಜವಾಬ್ದಾರಿಯನ್ನು ನೀಡಿದ್ದೀರಿ ಮುಂದಿನ ಐದು ವರ್ಷ ಅಭಿವೃದ್ದಿಗೆ ಆದ್ಯತೆ ನೀಡುವ ಜೊತೆಗೆ ಬಿಜೆಪಿ ಜೆಡಿಎಸ್  ಪಕ್ಷದ ಮುಖಂಡರು ಒಗ್ಗಟ್ಟಿನ ಮಂತ್ರ ಪಾಲನೆ ಮಾಡಬೇಕು ಎಂದು ವಿವರಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಹಿರಿಯ ಮುಖಂಡ ಚಂದ್ರರೆಡ್ಡಿ ಮಾತನಾಡಿ  ಕೋಲಾರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬಂಗಾರಪೇಟೆಯಲ್ಲಿ‌  ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ನೀಡಿ ಆಶೀರ್ವದಿಸಿದಿ ಮಲ್ಲೇಶ್ ಬಾಬುರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ, ಹಾಗೂ  ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಕುಮಾರಸ್ವಾಮಿ ಅವರು ಬೃಹತ್ ಕೈಗಾರಿಕಾ ಸಚಿವರಾಗಿದ್ದು, ಬಂಗಾರಪೇಟೆ ಕೆಜಿಎಫ್ ಭಾಗದಲ್ಲಿ ಕೈಗಾರಿಕೆಯನ್ನು ಸ್ಥಾಪಿಸಬೇಕು ಎಂದು ಸಂಸದರಲ್ಲಿ‌ ಮನವಿ ಮಾಡಿದರು. 

ಸಂಸದರಾಗಿ ಎಂ ಮಲ್ಲೇಶ್ ಬಾಬು ಗೆದ್ದ ನಂತರ ಬಿಡುವಿಲ್ಲದೇ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಿದ್ದು ಈಗಾಗಲೇ  ಹೆದ್ದಾರಿ  ಸಚಿವ ನಿತಿನ್ ಗಡ್ಕರಿ ಹಾಗೂ ರೈಲ್ವೆ ಸಚಿವ ವಿ ಸೋಮಣ್ಣ ಅವರನ್ನು ಭೇಟಿ ಮಾಡಿ  ಅಭಿವೃದ್ದಿಗೆ ಮುಂದಾಗಿದ್ದಾರೆ ದೇಶದಲ್ಲಿ ಗೆದ್ದ ಸಂಸದರೊಬ್ಬರು ಸಚಿವರನ್ನು ಭೇಟಿ ಮಾಡಿ ಅಭಿವೃದ್ದಿಗಾಗಿ ಚರ್ಚಿಸಿರುವ ಮೊದಲಿಗರು ಹಾಗಾಗಿ ಬಂಗಾರಪೇಟೆ ಕ್ಷೇತ್ರಕ್ಕೆ ಹೆಚ್ಚನ ಆದ್ಯತೆ ನೀಡುತ್ತಾರೆ ಎನ್ನುವ ಭರವಸೆ ಇದೆ  ಎಂದು ತಿಳಿಸಿದರು.

ಕೋಚಿಮುಲ್ ನಿರ್ದಶಕ ಡಿವಿ ಹರೀಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿವಿ ಮಹೇಶ್ ಮಾಜಿ ಶಾಸಕರುಗಳಾದ ಬಿಪಿ ವೆಂಕಟಮುನಿಯಪ್ಪ ಎಂ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಮೊದಲಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಂಪಂಗಿ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪ, ಕನ್ನಡ ಸಂಘದ ಅಧ್ಯಕ್ಷ ಡಾ. ಪಲ್ಲವೀ ಮಣಿ, ಟಿಎಪಿಎಂಎಸ್‌ ಕೋಲಾರ ಅಧ್ಯಕ್ಷ ವಡಗೂರು ರಾಮು, ಎಸ್.ಸಿ.ಮೋರ್ಚಾ ಜಿಲ್ಲಾದ್ಯಕ್ಷ ಕಪಾಲಿ ಶಂಕರ್ ಸೇರಿದಂತೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಉಸ್ಥಿತರಿದ್ದರು.

Related Post

ಒಂದು ವರ್ಗಕ್ಕೆ ಸೀಮಿತವಲ್ಲದ ವಾಲ್ಮೀಕಿ, ಎಲ್ಲಾ ಸಮುದಾಯಗಳಿಗೆ ಆದರ್ಶ: ಬೈರತಿ ಸುರೇಶ್
ನ್ಯಾಯಾಲಯದ ಆದೇಶ ಧಿಕ್ಕರಿಸಿ ಡಿಸಿ ಅಕ್ರಂಪಾಷಾರಿoದ ಸ್ವಜನಪಕ್ಷಪಾತ – ವಾಲ್ಮೀಕಿ ನಾಯಕ ಸಂಘಟನೆಗಳ ಆರೋಪ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ಕೇಳಲು ಗುತ್ತಿಗೆದಾರರಿಗೆ ನೈತಿಕತೆ ಇಲ್ಲ – ಎಂ.ಎಸ್.ನಾರಾಯಣಸ್ವಾಮಿ

Leave a Reply

Your email address will not be published. Required fields are marked *

You missed

error: Content is protected !!