• Thu. Apr 25th, 2024

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದಲೂ ನಾಗೇಂದ್ರಪ್ರಸಾದ್ ಅವರಿಗೆ ಅಭಿನಂದನೆ

PLACE YOUR AD HERE AT LOWEST PRICE

ಕೋಲಾರ ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿಯಾಗಿದ್ದು, ಜಿಲ್ಲೆಯ ಫಲಿತಾಂಶದಲ್ಲಿ ಕ್ರಾಂತಿಯುಂಟು ಮಾಡಿ ಇತ್ತೀಚೆಗೆ ನಿವೃತ್ತರಾದ ಎ.ಎನ್.ನಾಗೇಂದ್ರಪ್ರಸಾದ್ ಅವರನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯದರ್ಶಿ ರೇವಣಸಿದ್ದಪ್ಪ ಹಾಗೂ ಉಪನಿರ್ದೇಶಕ ಕೃಷ್ಣಮೂರ್ತಿ ಆತ್ಮೀಯವಾಗಿ ಸನ್ಮಾನಿಸಿದರು.

ಮೊದಲು ಕೋಲಾರದ ಡಿಡಿಪಿಐ ಆಗಿಯೂ ಸೇವೆ ಸಲ್ಲಿಸಿದ್ದ ರೇವಣಸಿದ್ದಪ್ಪ ಈ ಸಂದರ್ಭದಲ್ಲಿ ಮಾತನಾಡಿ, ಕೋಲಾರದ ಎಸ್ಸೆಸ್ಸೆಲ್ಸಿ ಫಲಿತಾಂಶ ೨೭ನೇ ಸ್ಥಾನದಲ್ಲಿತ್ತು. ಅದನ್ನು ತಮ್ಮ ಕ್ರಿಯಾಯೋಜನೆ, ವಿವಿಧ ಕೆಲಸಗಳ ಮೂಲಕ ೪ನೇ ಸ್ಥಾನಕ್ಕೆ ತಂದು ಇಲಾಖೆ ಹಾಗೂ ಜಿಲ್ಲೆಯ ಗೌರವ ಹೆಚ್ಚಿಸಿದ ಕೀರ್ತಿ ನಾಗೇಂದ್ರಪ್ರಸಾದ್‌ರಿಗೆ ಸಲ್ಲುತ್ತದೆ ಎಂದರು.

ನಾಗೇಂದ್ರಪ್ರಸಾದ್ ಅವರದ್ದು, ಕಳಂಕ,ವಿವಾದ ರಹಿತ ವ್ಯಕ್ತಿತ್ವ, ೧೭ ವರ್ಷಗಳಲ್ಲಿ ಒಬ್ಬರೊಂದಿಗೂ ಜಗಳವಾಡದೇ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉನ್ನತಿಗಾಗಿ ಸೂಚಿಸಿದ ಕೆಲವನ್ನು ಯೋಜನಾಬದ್ದವಾಗಿ ನಿರ್ವಹಿಸಿರುವ ಅವರ ಪರಿಶ್ರಮಕ್ಕೆ ಸಾಟಿಯಿಲ್ಲ ಎಂದರು.
ನಿವೃತ್ತಿ ನಂತರವೂ ಅವರ ಶೈಕ್ಷಣಿಕ ಸೇವೆ ಮುಂದುವರೆಯಲಿ, ಅವರು ಮಾಡಿದ ಆತ್ಮತೃಪ್ತಿಯ ಕೆಲಸ ಅವರನ್ನು ನಿವೃತ್ತಿಯ ನಂತರವೂ ಅತ್ಯಂತ ಸುಖಕರವಾಗಿ ನೆಮ್ಮದಿಯಾಗಿ ಇಡಬಲ್ಲುದಾಗಿದೆ ಎಂದರು.

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಉಪನಿರ್ದೇಶಕರಾದ ಕೃಷ್ಣಮೂರ್ತಿ ಮಾತನಾಡಿ, ನಾಗೇಂದ್ರಪ್ರಸಾದ್ ಅವರ ಬಹುಮುಖ ಸಾಧನೆ ನಿಜಕ್ಕೂ ಪ್ರಶಂಸನೀಯ, ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಅವರು ಹೊರ ತಂದ ಪ್ರಶ್ನೋತ್ತರ ಮಾಲಿಕೆಗಳು ಹೆಚ್ಚು ಪರಿಣಾಮಕಾರಿಯಾಗಿದ್ದವು ಎಂದು ತಿಳಿಸಿದರು.

ಕೊನೆ ಸ್ಥಾನದಲ್ಲಿದ್ದ ಕೋಲಾರವನ್ನು ಸತತ ೧೧ ವರ್ಷಗಳಿಂದ ೧೦ರೊಳಗಿನ ಸ್ಥಾನದಲ್ಲಿ ಬರುವಂತೆ ಮಾಡಿದ್ದಾರೆ, ಇವರು ಬಹುಭಾಷಾ ಪರಿಣಿತಿ, ಬಹುಮುಖ ಪ್ರತಿಭೆಗೆ ಸಾಟಿಯಿಲ್ಲ, ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶ್ಲೇಷಣೆಯಲ್ಲಿ ಇವರನ್ನು ಮೀರಿಸುವವರು ಯಾರೂ ಇಲ್ಲ ಎಂದರು.

ಕ್ರಿಯಾಶೀಲ ಸ್ಪೂರ್ತಿಯ ಚೇತನವಾದ ಅವರು, ರಾಜ್ಯಮಟ್ಟದ ಪ್ರತಿಭಾ ಕಾರಂಜಿಯನ್ನು ಅತ್ಯದ್ಬುತವಾಗಿ ನಡೆಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದರು. ಕ್ರಿಯಾಯೋಜನೆ ಮಾಡುವಲ್ಲಿ ನಿಪುಣರು ಎಂದರು.

ಕೋಲಾರ ಜಿಲ್ಲೆಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪಟ್ಟಿಯಲ್ಲಿ ಕೊನೆ ಸ್ಥಾನ ಎಂಬ ಕಳಂಕದಿಂದ ದೂರ ಮಾಡಿದವರು ನಾಗೇಂದ್ರಪ್ರಸಾದ್ ಎಂದರು.

ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ ಮತ್ತಿತರರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!