• Sat. Jul 27th, 2024

ಬಂಗಾರಪೇಟೆ ಪಟ್ಟಣದಲ್ಲಿ ರಸ್ತೆ ವಿಭಜಕಗಳಲ್ಲಿ ಜಹೀರಾತು ಅಳವಡಿಸಲು ಶಾಸಕರಿಗೆ ನೀಡಿದ್ದ ಟೆಂಡರ್ ರದ್ದು.

PLACE YOUR AD HERE AT LOWEST PRICE

ಬಂಗಾರಪೇಟೆ ಪಟ್ಟಣದಲ್ಲಿ ರಸ್ತೆ ವಿಭಜಕಗಳಲ್ಲಿ ಜಹೀರಾತು ಅಳವಡಿಸಲು ಶಾಸಕರಿಗೆ ನೀಡಿದ್ದ ಟೆಂಡರ್ ರದ್ದು.
ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿಯಿಂದ ಕೋಲಾರದ ರೈಲ್ವೆ ಗೇಟ್‍ವರೆಗಿನ ರಸ್ತೆ ವಿಭಜಕಗಳಲ್ಲಿನ ಜಾಹಿರಾತು ಫಲಕಗಳನ್ನು ಅಳವಡಿಸಲು ಶಾಸಕ ಎಸ್.ಎನ್.ನಾರಾಯಣಸ್ವಾಮಿ ರವರ ಸನ್ಮಾರ್ಗ ಶೆಲ್ಟರ್ಸ್ ಹಾಗೂ ಎಸ್‍ಎನ್ ಇಂಡಿಯನ್ ಗಾರ್ಮೆಂಟ್ಸ್‍ಗೆ ನೀಡಿದ್ದ ಅನುಮತಿಯನ್ನು ಜಿಲ್ಲಾಧಿಕಾರಿ ಡಾ.ವೆಂಕಟ ರಾಜಾ ರದ್ದುಪಡಿಸಿದ್ದಾರೆ.
 
ಈ ಹಿಂದೆ ಮೊದಲ ಬಾರಿ ಎಸ್.ಎನ್.ನಾರಾಯಣಸ್ವಾಮಿ ಶಾಸಕರಾಗಿದ್ದಾಗ ಡಬಲ್ ರಸ್ತೆ ನಿರ್ಮಾಣ ಮಾಡಿದ್ದರು, ಬಳಿಕ ದೇಶಿಹಳ್ಳಿಯಿಂದ ಕೋಲಾರ ರಸ್ತೆಯ ರೈಲ್ವೆ ಗೇಟ್‍ವರೆಗೂ ರಸ್ತೆ ವಿಭಜಕಗಳಲ್ಲಿನ ವಿದ್ಯುತ್ ಕಂಬಗಳ ಮೇಲೆ ಜಾಹೀರಾತು ಅಳವಡಿಸಲು ಐದು ವರ್ಷಗಳಿಗೆ ಪುರಸಭೆಯಿಂದ ಟೆಂಡರ್ ಪಡೆದಿದ್ರು.
ಅದು ಅವದಿ ಮುಗಿದ ನಂತರ  ಸೆ. 8ರಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ 11 ತಿಂಗಳಿಗೆ ಕೇವಲ 1 ಲಕ್ಷಕ್ಕೆ ಪುರಸಭೆಯಿಂದ ಅನುಮತಿ ಪಡೆದಿದ್ದರು.
ಸೆ. 8ರಂದು ಪುರಸಭೆ ಅಧ್ಯಕ್ಷೆ ಫರ್ಜಾನಾ ಸುಹೇಲ್ ಅಧ್ಯಕ್ಷತೆಯಲ್ಲಿ ನಡೆದಿರುವ ಸಭೆಯಲ್ಲಿ ಕೈಗೊಂಡಿರುವ ಈ ತೀರ್ಮಾನವು ಕರ್ನಾಟಕ ಪೌರಸೇವಾ ಅಧಿನಿಯಮಗಳ ನಿಯಮ 1964 72(2) ಇದರ ವಿರುದ್ದವಾಗಿರುವುದರಿಂದ ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ದಿ ಇಲಾಖೆಯ ಆದೇಶದಂತೆ ಜಿಲ್ಲಾಧಿಕಾರಿಗಳಿಗೆ ಇರುವ ಅಧಿಕಾರವನ್ನು ಉಪಯೋಗಿಸಿ ರದ್ದುಪಡಿಸಲಾದೆ.
ಪಟ್ಟಣದ ಡಬಲ್ ರಸ್ತೆಯ ಮಧ್ಯೆದಲ್ಲಿರುವ ವಿದ್ಯುತ್ ಕಂಬಗಳ ಮೇಲೆ ಪ್ರಚಾರದ ಬ್ಯಾನರ್‍ಗಳನ್ನು ಹಾಗೂ ಕಟೌಟ್‍ಗಳನ್ನು ಹಾಕಿಕೊಳ್ಳಲು ಐದು ವರ್ಷಗಳ ಹಿಂದೆ ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬೆಂಬಲಿತ ಎಸ್‍ಎನ್ ಗ್ರೂಪ್‍ನ ಸನ್ಮಾರ್ಗ ಶೆಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಎಸ್‍ಎನ್ ಇಂಡಿಯನ್ ಗಾರ್ಮೆಂಟ್ಸ್ ಎಂಬ ಎರಡು ಸಂಸ್ಥೆಗಳ ಮೂಲಕ ಪ್ರತಿ ತಿಂಗಳ ಒಂದು ಲಕ್ಷದಂತೆ ಐದು ವರ್ಷಗಳಿಗೆ ಮಂಜೂರಾತಿ ನೀಡಿದ್ದ ಬಗ್ಗೆ ಸೆ. 8 ರಂದು ನಡೆದ ಸಭೆಯಲ್ಲಿ ಈ ವಿಚಾರವನ್ನು ಪ್ರಶ್ನಿಸಿದ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹಾಗೂ ಪುರಸಭೆ ಅಧ್ಯಕ್ಷೆ ಫರ್ಜಾನಾ ಸುಹೇಲ್ ನಡುವೆ ವಾಗ್ವಾದ ನಡೆದಿತ್ತು.
ಹತ್ತು ಲಕ್ಷಕ್ಕೆ ಟೆಂಡರ್ ಹೋಗುತ್ತಿತ್ತು,ಆದರೆ ಶಾಸಕರು ಪುರಸಭೆ ಸದಸ್ಯರನ್ನು ಬೆದರಿಸಿ ಅಗ್ಗದ ಬೆಲೆಗೆ ಪಡೆಯುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರಾಭೀವೃದ್ದಿ ಇಲಾಖೆಗೆ ದೂರು ನೀಡಿ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಪುರಸಭೆ ಶಾಸಕರ ಬೆಂಬಲಿತ ಸಂಸ್ಥೆಗಳಿಗೆ ರಸ್ತೆ ವಿಭಜಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡಿದೆ, ಇದನ್ನು ರದ್ದುಗೊಳಿಸಲುವಂತೆ ದೂರು ನೀಡಿದ್ದರು.
ಪುರಸಭೆ ಸಾಮಾನ್ಯ ಸಭೆಯಲ್ಲಿಯೂ ಇದರ ಬಗ್ಗೆ ಧ್ವನಿ ಎತ್ತಿ ವಿರೋಧವ್ಯಕ್ತಪಡಿಸಿದ್ರುದರು, ಪುರಸಭೆ ಕಾಯ್ದೆಗೆ ವಿರುದ್ದವಾಗಿ ಬಂಗಾರಪೇಟೆ ಪುರಸಭೆ ಶಾಸಕರಿಗೆ ಟೆಂಡರ್ ನೀಡಿರುವುದು ಸರಿಯಿಲ್ಲ ಎಂದು ಅಭಿಪ್ರಾಯಿಸಿ ಕೂಡಲೇ ಜಿಲ್ಲಾಧಿಕಾರಿಗಳು ಶಾಸಕರಿಗೆ ನೀಡಿರುವ ಟೆಂಡರ್ ರದ್ದುಪಡಿಸಿ ಅವರು ಪಾವತಿ ಮಾಡಿರುವ 1 ಲಕ್ಷ ರೂಗಳನ್ನು ಹಿಂತಿರುಗಿಸಬೇಕೆಂದು ಸೂಚಿಸಲಾಗಿದೆ.
ಅದರಂತೆ ಪುರಸಭೆ ಮುಖ್ಯಾಧಿಕಾರಿಗಳು ಸನ್ಮಾರ್ಗ ಶೆಲ್ಟರ್ಸ್‍ಗೆ ಹಾಗೂ ಎಸ್.ಎನ್. ಇಂಡಿಯನ್ ಗಾರ್ಮೆಂಟ್ಸ್ ನೋಟಿಸ್ ನೀಡಿ ತಮ್ಮ ಟೆಂಡರ್ ರದ್ದಾಗಿದ್ದು ಈ ಕೂಡಲೇ ರಸ್ತೆ ವಿಭಜಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ತೆರವು ಮಾಡುವಂತೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!