• Sat. Apr 20th, 2024

ರೈತರ ಮದುವೆಯಾದರೆ ಸರಕಾರದಿಂದ ೨೫ ಲಕ್ಷ ಪ್ರೋತ್ಸಾಹ ಧನ ನೀಡಿ : ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಗೌಡ ಮನವಿ

PLACE YOUR AD HERE AT LOWEST PRICE

ರೈತರನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ, ಆದ್ದರಿಂದ ರೈತ ಮಕ್ಕಳನ್ನು ಮದುವೆ ಮಾಡಿಕೊಂಡರೆ ಸರಕಾರದಿಂದ ೨೫ ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ನೀಡುವ ಕನ್ಯಾ ಯೋಜನೆಯನ್ನು ಜಾರಿಗೆ ತರಬೇಕೆಂದು ಕೋಲಾರ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿ ಸಮ್ಮುಖದಲ್ಲಿ ಮನವಿ ಮಾಡಿದರು

ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಿಶ್ವ ರೈತ ದಿನಾಚರಣೆ ಮತ್ತು ಕೆ.ಎಸ್ ಪುಟ್ಟಣ್ಣಯ್ಯರ ಜನ್ಮದಿನಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರ ಕುಟುಂಬದ ಪರಿಸ್ಥಿತಿಯನ್ನು ಈ ವಿಶಿಷ್ಟವಾದ ಮನವಿ ಮೂಲಕ ವಿವರಿಸುವ ಪ್ರಯತ್ನ ಮಾಡಿದರು.

ದೇಶ ಕಾಯುವ ಸೈನಿಕ ಅನ್ನ ನೀಡುವ ಅನ್ನದಾತ ನೆಮ್ಮದಿಯಾಗಿದ್ದರೆ ದೇಶ ಸುಭಿಕ್ಷವಾಗಿರುತ್ತದೆ ರೈತರ ಒಡನಾಡಿಗಳಾದ ಕಂದಾಯ ,ರೇಷ್ಮೆ, ತೋಟಗಾರಿಕೆ, ಹೈನುಗಾರಿಕೆ ಕೃಷಿ ಇಲಾಖೆಯಲ್ಲಿನ ರೈತ ಪರ ಇಲಾಖೆಗಳಾಗಿ ಮಾರ್ಪಾಡಾಗುವ ಜೊತೆಗೆ ಮಾರುಕಟ್ಟೆಯ ಅವ್ಯವಸ್ಥೆ ಸರಿಪಡಿಸಬೇಕು, ರೈತ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಮನವಿ ಮಾಡಿಕೊಂಡರು.


ಜಿಲ್ಲಾಧಿಕಾರಿ ವೆಂಕಟರಾಜಾ ರಾಗಿ ಭತ್ತ ತರಕಾರಿ ಹಂಚುವ ಮೂಲಕ ಹಾಗೂ ಪ್ರಗತಿಪರ ರೈತರನ್ನು ಸನ್ಮಾನಿಸಿ ವಿಶ್ವ ರೈತ ದಿನಾಚರಣೆ ಮತ್ತು ಕೆ.ಎಸ್ ಪುಟ್ಟಣ್ಣಯ್ಯರ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿ, ರೈತ ದಿನಾಚರಣೆ ಚರಣ್‌ಸಿಂಗ್‌ರ ಜನ್ಮ ದಿನ ದೇಶದಲ್ಲಿ ೨೦೦೧ ರಿಂದ ರೈತ ದಿನಾಚರಣೆ ಮಾಡುತ್ತಿದ್ದೇವೆ ಪ್ರತಿಯೊಬ್ಬರ ದಿನಚರಿ ಪ್ರಾರಂಭ ಮತ್ತು ಅಂತ್ಯ ರೈತರಿಂದಲೇ ಆಗಿರುತ್ತದೆ, ದೇಶದಲ್ಲಿ ರಾಜ್ಯದಲ್ಲಿ ರೈತರಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ ರೈತರಿಂದ ದೇಶದ ಆರ್ಥಿಕತೆಗೆ ಬೆನ್ನೇಲುಬು ರೈತರು ಒಂದು ದಿನಕ್ಕೆ ಮಾತ್ರ ರೈತ ದಿನಾಚರಣೆ ಸೀಮಿತವಾಗಬಾರದು, ಇತ್ತೀಚೆಗೆ ಮಳೆಯಿಂದ ನಷ್ಟ ಆಗಿರುವ ರೈತರ ಸಮೀಕ್ಷೆ ನಡೆಸಲಾಗುತ್ತಿದೆ, ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆಗಳಿಗೆ ಪರಿಹಾರ ಕಲ್ಪಿಸಲಾಗುವುದು, ರಾಗಿ ಖರೀದಿಗೆ ನೋಂದಣಿಯೂ ಸಹ ಪ್ರಾರಂಭ ಮಾಡಲಾಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಡಳಿತ ಸದಾ ಸಿದ್ದವಾಗಿದೆ. ರೈತರೊಂದಿಗೆ ಸದಾ ಜಿಲ್ಲಾಡಳಿತ ಇರಲಿದೆ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಾಣಾಧಿಕಾರಿ ಏಡುಕೊಂಡಲು ಮಾತನಾಡಿ ಎ.ಪಿ.ಎಂಸಿ ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಜಂಈನು ದೊರೆಯಲಿದ್ದು, ಇದರಿಂದ ಮಾರುಕಟ್ಟೆ ಅಭಿವೃದ್ದಿಗೆ ಅನುಕೂಲವಾಗಲಿದೆ ಎಂದು ಭರವಸೆ ನೀಡಿದರು.
ಸಮರ್ಪಕವಾಗಿ ಇಳುವರಿ ಬರದಿದ್ದ ಸಂದರ್ಭದಲ್ಲಿ ಹಾಗೂ ಸಮರ್ಪಕವಾಗಿ ಇಳುವರಿ ಬಂದರೂ ಮಾರುಕಟ್ಟೆ ಸಂದರ್ಭದಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಅದರಂತೆ ಎಲ್ಲಾ ರೈತರು ರಸಗೊಬ್ಬರಗಳ ಬಳಕೆ ಹೆಚ್ಚಾದ ಬಳಿಕವೇ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ, ಬೆಳೆಗಳಿಗೆ ರೋಗಬಾದೆ ಶುರುವಾಗಿದೆ. ಹೀಗಾಗಿ ರೈತರು ಸಾವಯುವ ಗೊಬ್ಬರ ಬಳಕೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು.

ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮೀ ಮಾತನಾಡಿ ರೈತರ ಕೈ ಕೆಸರಾದರೆ ಮಾತ್ರವೇ ನಮ್ಮ ಬಾಯಿ ಮೊಸರಾಗುತ್ತದೆ.ಗಡಿಯಲ್ಲಿ ಸೈನಿಕರು ನಮ್ಮನ್ನು ರಕ್ಷಿಸಿದರೆ ನಾಡಿನಲ್ಲಿ ರೈತರು ನಮ್ಮನ್ನು ಕಾಯುತ್ತಾರೆ ರೈತರು ಇಲ್ಲದಿದ್ದರೆ ದೇಶದಲ್ಲಿ ಆಹಾರದ ಕೊರತೆ ಎದುರಾಗುವ ಆಂತಕವಿದೆ ಎಂದು ಹೇಳಿದರು. ದೇಶದ ಅಭಿವೃದ್ದಿಯಲ್ಲಿ ರೈತರ ಪಾತ್ರ ಪ್ರಮುಖವಾಗಿದ್ದು, ರೈತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಮಾಣಿಕವಾಗಿ ಪ್ರಯತ್ನಿಸಲಾಗುತ್ತದೆಂದು ಭರವಸೆ ನೀಡಿದರು.

ಪತ್ರಕರ್ತರ ಜಿಲ್ಲಾಧಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ದಕ್ಷಿಣಾ ಏಷ್ಯಾದ ಎರಡನೇ ಮಾರುಕಟ್ಟೆ ಆಗಿರುವ ಎ.ಪಿ.ಎಂಸಿ ಮಾರುಕಟ್ಟೆಯ ಜಮೀನಿಗೆ ಸುಮಾರು ೧೫ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ ಅರಣ್ಯ ಇಲಾಖೆರವರು ಜಮೀನು ಕೊಡಲು ಒಪ್ಪಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳಾದ ನಿಮ್ಮ ಅವದಿಯಲ್ಲಾದರೂ ಇದಕ್ಕೆ ಮುಕ್ತಿ ಸಿಗಲಿ ಭರವಸೆಗಳಲ್ಲಿಯೇ ಉಳಿಯದೇ ಮಾರುಕಟ್ಟೆ ಜಮೀನು ಸಿಗುವಂತಾಗಲಿ ಎಂದು ಹೇಳಿದರು.

ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್ ಹಾಗೂ ಕೆ.ಎನ್.ಎನ್. ಪ್ರಕಾಶ್ ಮಾತನಾಡಿ ರೈತರಿಗೆ ಹವಮಾನ ಇಲಾಖೆಯಿಂದ ಪ್ರಕೃತಿ ಬಗ್ಗೆ ಮಾಹಿತಿ ನೀಡುವ ಸೌಲಭ್ಯ ಆಗಿಲ್ಲ ಬೆಳೆ ನಷ್ಟ ಆಗುತ್ತಿದೆ.ಕೈಗಾರಿಕೆಗಳು ಜಮೀನು ಕೇಳಿದರೆ ಕೇಲವೇ ದಿನಗಳಲ್ಲಿ ಕೊಡುತ್ತಾರೆ. ಮಾರುಕಟ್ಟೆಗೆ ಮಾತ್ರ ಜಮೀನು ಸಿಗುತ್ತಿಲ್ಲ. ರಾಜ್ಯದ ಹೊರ ದೇಶಗಳಿಗೆ ಕೃಷಿ ಉತ್ಪನ್ನಗಳನ್ನು ಸರಬರಾಜು ಮಾಡಿ ಉನ್ನತಿಕರಣ ರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಮಾಡಬೇಕು, ಗ್ರಾಮಗಳಲ್ಲಿ ಗೋದಾಮು ಶೇಖರಣಾ ಘಟಕ ಮಾಡಿದರೆ ನಷ್ಟ ಕಡಿಮೇ ಮಾಡಬಹುದು ಹವಮಾನ ಇಲಾಖೆಯಿಂದ ರೈತರಿಗೆ ಮಾಹಿತಿ ಸಿಗುವಂತಾಗಬೇಕು, ಮೇ ತಿಂಗಳಲ್ಲಿ ಸುಗ್ಗಿಕಾಲ ಪ್ರಾರಂಭವಾಗುತ್ತದೆ ಅಷ್ಟರೊಳಗೆ ಮಾರುಕಟ್ಟೆ ಅಭಿವೃದ್ದಿ ಮಾಡಿದರೆ ಅನುಕೂಲವಾಗುತ್ತದೆ, ರೈತರು ಮಿಶ್ರ ಮಿಶ್ರ ಬೆಳೆ ಬೆಳೆಯಲು ರೈತರು ಮುಂದಾಗಬೆಕೆಂದು ಸಲಹೆ ನೀಡಿದರು.

 

ಕೃಷಿ ಇಲಾಖೆ ರೂಪದೇವಿ ಮತ್ತು ತೋಟಗಾರಿಕೆ ಇಲಾಖೆ ಕುಮಾರಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಅವರು ಜಮಿನ್ದಾರಿ ಪದ್ದತಿಯ ವಿರುದ್ದ ಹೋರಾಟ ನಡೆಸಿದ ಪರಿಣಾಮ ಅವರ ಜನ್ಮದಿನಾಚರನೆಯನ್ನು ರೈತ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆಂದು ತಿಳಿಸಿದರು.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ರಸಗೊಬ್ಬರಗಳ ಬಳಕೆ ಮಾಡುತ್ತಿರುವುದರಿಂದ ಭೂಮಿ ಆಹಾರ ಪಧಾರ್ಥಗಳು ಹಾಗೂ ನೀರು ಕಲುಷಿತಗೊಂಡಿವೆ.ಇದೇ ಕಾರಣದಿಂದಾಗಿ ಕೇವಲ ೪೫ ಕ್ಕೆಲ್ಲಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ರೈತರು ಸಾವಯುವ ಕೃಷಿಯ ಕಡೆ ಮುಖ ಮಾಡಬೇಕು ಮತ್ತು ಇಲಾಖೆಯಿಂದ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕೋಲಾರ ತಹಶೀಲ್ದಾರ್ ನಾಗರಾಜ್, ಎ.ಪಿ.ಎಂ.ಸಿ ವಿಜಯಕ್ಷ್ಮೀ, ಪರ್ತಕರ್ತ ಕೆ.ಎಸ್.ಗಣೇಶ್, ನರೇಶ್ ಬಾಬು ರೇಷ್ಮೇ ಇಲಾಖೆಯ ಉಪನಿರ್ದೇಶಕರು ಕಾರ್ಯಕ್ರದಲ್ಲಿ ಮಾತನಾಡಿದರು.

 

ಕಾರ್ಯಕ್ರಮದಲ್ಲಿ ಕೃಷಿ ,ತೋಟಗಾರಿಕೆ, ರೇಷ್ಮೇ, ಕಂದಾಯ ಅಧಿಕಾರಿಗಳು ಮತ್ತು ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಕಾರ್ಯಾಧ್ಯಕ್ಷ ಹನುಮಯ್ಯ, ಜಿಲ್ಲಾದ್ಯಕ್ಷ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಶ್ರೀನಿವಾಸಪುರ ತಾ.ಅ.ಆಂಜಿನಪ್ಪ, ಮುಳಬಾಗಿಲು ತಾ.ಅ.ಯಲುವಳ್ಳಿ ಪ್ರಭಾಕರ್, ನವೀನ್, ಚಂದ್ರಪ್ಪ ರಾಮಸಾಗರ ವೇಣು, ಪಾರಂಡಹಳ್ಳಿ ಮಂಜುನಾಥ, ಹೆಬ್ಬಣಿ ಆನಂದ್‌ರೆಡ್ಡಿ, ಬಂಗಾರಿ ಮಂಜುನಾಥ್, ಪಾರುಕ್‌ಪಾಷ, ಪುತ್ತೇರಿ ರಾಜು, ಮಂಜುಳಾ, ಶೈಲ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರೈತ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.

ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ:

ಒದನ್ನೂ ಓದಿ: ಕೃಷಿಯಲ್ಲಿ ಲಾಭಗಳಿಸುತ್ತಿರುವ ಪದವೀಧರ ಮಹಿಳೆ

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!