• Fri. Oct 11th, 2024

ಪಾರೇಹೊಸಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಜಾನಪದ ಕಲಾ ಸಂಭ್ರಮ

PLACE YOUR AD HERE AT LOWEST PRICE

ನಮ್ಮ ಪೂರ್ವಿಕರು ದಿನಪೂರ್ತಿ ದುಡಿದು ಸಂಜೆ ಮನೆ ತಲುಪಿ ತಮ್ಮ ನೋವು ಮರೆಯಲು ಕೋಲಾಟ, ನಾಟಕ, ಇತರ ಜಾನಪದ ಪ್ರಕಾರಗಳನ್ನು ಆಯಾ ಭಾಗದ ಸಂಸ್ಕೃತಿಯ ಕಲೆಗಳನ್ನು ಪ್ರದರ್ಶನ ಮಾಡಿ ನೋವು ಮರೆಯುತ್ತಿದ್ದರು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾರೇಹೊಸಹಳ್ಳಿ ರವಿಕುಮಾರ್ ತಿಳಿಸಿದರು.

ಕೋಲಾರ ತಾಲೂಕಿನ ಪಾರೇಹೊಸಹಳ್ಳಿ ಗ್ರಾಮದ ಹರಳಿಕಟ್ಟೆಯ ಬಳಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಪರಿಣಿತ ಸಂಸ್ಥೆಯಾದ ಪ್ರಕೃತಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ವಿಶೇಷ ಘಟಕ ಯೋಜನೆಯಡಿಯಲ್ಲಿ ಜಿಲ್ಲಾ ಮಟ್ಟದ ಜಾನಪದ ಕಲಾ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈಗಿನ ಪರಿಸ್ಥಿತಿ ವಿಭಿನ್ನವಾಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಮೊಬೈಲ್ ಅವಳಿಯಿಂದ ನಮ್ಮ ಸಂಸ್ಕೃತಿ ಹಾಳಾಗಿದೆ ಎಂದರು.

ಕಲಾವಿದ ಮತ್ತಿಕುಂಟೆ ಕೃಷ್ಣ ಮಾತನಾಡಿ ನಮ್ಮ ಭಾರತ ದೇಶ ಸುಸಂಸ್ಕೃತ ದೇಶವಾಗಿದ್ದು, ಆ ಸಂಸ್ಕೃತಿಯನ್ನು ನಮ್ಮ ಯುವಕ ಯುವತಿಯರು ಉಳಿಸಿ ಬೆಳೆಸಬೇಕು ಎಂದರು.

ನಾಡಗೀತೆಯನ್ನು ಜನ್ನಘಟ್ಟ ಕೃಷ್ಣಮೂರ್ತಿ, ಸುಗಮ ಸಂಗೀತವನ್ನು ಮತ್ತಿಕುಂಟೆ ಕೃಷ್ಣ, ಡೊಳ್ಳು ಕುಣಿತ ಸಂತೋಕುಮಾರ್ ಮತ್ತು ತಂಡ, ಜನಪದ ಗಾಯನ ಬಿ.ವೆಂಕಟಾಚಲಪತಿ ಮತ್ತು ತಂಡ, ಭರತನಾಟ್ಯ ಶ್ರಾವಣಿ, ಪ್ರಕೃತಿ ತಂಡ, ಜಾನಪದ ಗಾಯನ ದೊಡ್ಡಮಲ್ಲೆ ರವಿಕುಮಾರ್, ಜನಪರ ಗೀತೆ ಯಲ್ಲಪ್ಪ ಮತ್ತು ತಂಡ, ತಮಟೆ ವಾದನ ಚಿನ್ನಾಪುರ ಮಂಜು ಮತ್ತು ರಾಮರಾಜು ಮತ್ತು ತಂಡ, ಜಾನಪದ ನೃತ್ಯ ವೈಷ್ಣವಿ ಅರ್ಪಿತ ಮತ್ತು ತಂಡ, ತತ್ವಪದ ತಿಮ್ಮಪ್ಪ ಮತ್ತು ತಂಡ, ಸೋಬಾನೆ ಪದಗಳು ಸೊಣ್ಣಮ್ಮ ಮುನಿವೆಂಕಟಮ್ಮ ತಂಡ, ಭಜನೆ ಹಾಡುಗಳು ಜಯಲಕ್ಷ್ಮಮ್ಮ,ಗುರಮ್ಮ, ಟಿ.ವೆಂಕಟಸ್ವಾಮಿ, ರೇಣುಕಾ ಮತ್ತು ತಂಡ, ಚಲನಚಿತ್ರ ಗೀತೆಗಳು ಸುಕನ್ಯಾ ಮತ್ತು ತಂಡ, ಕೋಲಾಟ ರವಿ ಮತ್ತು ತಂಡ, ಭಜನೆ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾನಪದ ಮತ್ತು ತತ್ವಪದ ಕಲಾ ಮಂಡಳಿ ನಡೆಸಿಕೊಟ್ಟಿತು.

ಕಾರ್ಯಕ್ರಮದಲ್ಲಿ ಪ್ರಕೃತಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಆರ್.ಮುನಿಸ್ವಾಮಿ, ಮಾಜೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ ಪ್ರವೀಣ್, ಸದಸ್ಯರುಗಳಾ ಗೋಪಾಲ್, ನಯನ ನಾಗೇಶ್, ಎಂ.ಶಂಕರ್, ನಾಗರಾಜ್ ಚಿನ್ನಾಪುರ, ವಿದ್ಯಾ ಮಂಜುನಾಥ್, ಭವ್ಯ ಮಂಜುನಾಥ್ ಗ್ರಾಮಸ್ಥರು ಹಾಜರಿದ್ದರು.

ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ:

ಒದನ್ನೂ ಓದಿ: ರೈತರ ಮದುವೆಯಾದರೆ ಸರಕಾರದಿಂದ ೨೫ ಲಕ್ಷ ಪ್ರೋತ್ಸಾಹ ಧನ ನೀಡಿ : ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಗೌಡ ಮನವಿ

Related Post

ಗಾಂಧೀವನದಲ್ಲೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಕನ್ನಡ ಪರ ಸಂಘನೆಗಳ ಒಕ್ಕೂರಲಿನ ತೀರ್ಮಾನ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹತ್ತು ಲಕ್ಷ ಸಸಿ ನೆಡುವ ಯೋಜನೆ : ಸಿದ್ದಗಂಗಯ್ಯ
ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿವಿಧ  ನ್ಯಾಯಯುತ ಬೇಡಿಕೆಗಳನ್ನು  ಈಡೇರಿಸುವಂತೆ  ಒತ್ತಾಯಿಸಿ, ನಗರದ ಜಿಲ್ಲಾ ಪಂಚಾಯತಿ ಕಚೇರಿ ಮುಂದೆ ಜಿಲ್ಲಾ ಪಿಡಿಒ ಹಾಗೂ ಸಿಬ್ಬಂದಿಗಳ  ವೃಂದ ಸಂಘಟನೆಗಳ ವತಿಯಿಂದ ಅನಿರ್ದಿಷ್ಟವಾಧಿ ಪ್ರತಿಭಟನೆ

Leave a Reply

Your email address will not be published. Required fields are marked *

You missed

error: Content is protected !!