PLACE YOUR AD HERE AT LOWEST PRICE
ಕೋಲಾರ ಜಿಲ್ಲಾ ಕಾಂಗ್ರೆಸ್ ಎರಡು ಗುಂಪುಗಳ ಮುಖಾಮುಖಿ ಭೇಟಿ ಸಾಧ್ಯವಾಗದ ಹೊರತು ಜ.೯ ಸಿದ್ದರಾಮಯ್ಯ ಕೋಲಾರ ಭೇಟಿ ಕಾರ್ಯಕ್ರಮವನ್ನು ಮುಂದೂಡುವಂತೆ ಕಾಂಗ್ರೆಸ್ ಕೆ.ಎಚ್.ಮುನಿಯಪ್ಪ ಬಣ ಇಂಗಿತ ವ್ಯಕ್ತಪಡಿಸಿದೆ.
ಆದರೆ, ಶನಿವಾರ ಸಂಜೆ ೫ ಗಂಟೆ ವೇಳೆಗೆ ಸಿದ್ದರಾಮಯ್ಯರ ಕೋಲಾರ ಪ್ರವಾಸ ಕಾರ್ಯಕ್ರಮದ ಅಧಿಕೃತ ವೇಳಾಪಟ್ಟಿ ಪ್ರಕಟಗೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ.
ಪ್ರವಾಸ ಕಾರ್ಯಕ್ರಮದ ಪ್ರಕಾರ ಸಿದ್ದರಾಮಯ್ಯ ಜ.೯ರಂದು ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನಿಂದ ರಸ್ತೆಮಾರ್ಗವಾಗಿ ಕೋಲಾರ ತಲುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟು ನಂತರ ಮಿನಿ ಕ್ರೀಡಾಂಗಣ ವೇದಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ ೩.೩೦ ಕ್ಕೆ ಕೋಲಾರದಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದ್ದಾರೆ.
ಇವೆಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆ.ಎಚ್.ಮುನಿಯಪ್ಪ ಬಣದ ಮುಖಂಡರಾದ ಶೇಷಾಪುರ ಗೋಪಾಲ್, ಕೆ.ಜಯದೇವ್‌ಇತರರು ವ್ಯಾಟ್ಯಾಪ್ ಸಂದೇಶವನ್ನು ಪತ್ರಕರ್ತರಿಗೆ ತಲುಪಿಸಿದ್ದು, ಇದರ ಅನ್ವಯ ಸಿದ್ದರಾಮಯಯ್ಯರ ಕೋಲಾರ ಭೇಟಿಗೂ ಮುನ್ನ ಎರಡೂ ಗಂಪುಗಳ ಮುಖಾಮುಖಿ ಶನಿವಾರ ಸಂಜೆ ಆಗಬೇಕಿತ್ತು. ಈ ಕುರಿತು ಖುದ್ದು ಸಿದ್ದರಾಮಯ್ಯನವರೇ ರಮೇಶ್‌ಕುಮಾರ್‌ಗೆ ಮಾಹಿತಿ ನೀಡಿದ್ದರು.
ಆದರೆ, ಜ.೮ ಚಿತ್ರದುರ್ಗ ಪರಿಶಿಷ್ಟ ಜಾತಿವರ್ಗದ ಸಮಾವೇಶಕ್ಕೆ ಕೆ.ಎಚ್.ಮುನಿಯಪ್ಪ ತೆರಳಿದ್ದಾರೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯಉಸ್ತುವಾರಿ ಸುರ್ಜೇವಾಲಾ, ವೇಣುಗೋಪಾಲ್ ಸದ್ಯ ಬೆಂಗಳೂರಿನಲ್ಲಿ ಲಭ್ಯವಿಲ್ಲದೇ ಇರುವುದರಿಂದ ಎರಡೂ ಗುಂಪುಗಳ ಭೇಟಿ ಸಾಧ್ಯವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಜ.೯ ರ ಸಿದ್ದರಾಮಯ್ಯ ಭೇಟಿ ಮುಂದೂಡಬೇಕಾಗುತ್ತದೆಯೆಂಬ ಇಂಗಿತವನ್ನು ಖುದ್ದು ಸಿದ್ದರಾಮಯ್ಯನವರೇ ವ್ಯಕ್ತಪಡಿಸಿದ್ದರೆಂದು ವ್ಯಾಟ್ಸಾಪ್ ಸಂದೇಶದ ಮಾಹಿತಿ ತಿಳಿಸಿದೆ.
ಜ.೮ ಭಾನುವಾರ ಚಿತ್ರದುರ್ಗದಲ್ಲಿ ಸಮಾವೇಶದ ನಂತರ ಕೋಲಾರ ಜಿಲ್ಲಾ ಎರಡು ಗಂಪುಗಳ ಮುಖಾಮುಖಿ ಚರ್ಚೆ ಆಗದೇ ಇದ್ದಲ್ಲಿ ಕೋಲಾರದ ಜ.೯ ರ ಕಾರ್ಯಕ್ರಮ ರದ್ದುಗೊಳಿಸುವ ಕುರಿತ ತೀರ್ಮಾನವನ್ನುಪಕ್ಷದ ಐಕ್ಯತೆ ಮತ್ತು ಶಿಷ್ಟಾಚಾರವನ್ನು ಗಮನದಲ್ಲಿಟ್ಟುಕೊಂಡು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರೇ ತೀರ್ಮಾನ ತೆಗೆದುಕೊಳ್ಳಬೇಕೆಂದು ಕೋರಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರವಾಸ ಕಾರ್ಯಕ್ರಮ ಅಧಿಕೃತವಾಗಿ ಪ್ರಕಟಗೊಂಡಿದ್ದರೂ, ಕೋಲಾರದ ಜ.೯ರ ಕಾರ್ಯಕ್ರಮದ ರದ್ದಾಗುವ ಸಾಧ್ಯತೆ ಇದೆ ಎಂದು ಕೆ.ಎಚ್.ಮುನಿಯಪ್ಪ ಬಣದ ಸ್ಥಳೀಯ ಮುಖಂಡರು ಅಭಿಪ್ರಾಯಪಡುತ್ತಿದ್ದಾರೆ.
ರಮೇಶ್‌ಕುಮಾರ್ ಬಣವು ಶನಿವಾರವು ಕೋಲಾರ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜ.೯ ರ ಸಮಾವೇಶದ ಪೂರ್ವ ಸಿದ್ಧತಾ ಸಭೆಗಳಲ್ಲಿ ಪಾಲ್ಗೊಂಡು ಜನರನ್ನು ಆಹ್ವಾನಿಸುತ್ತಿದ್ದಾರೆ. ಇದರಿಂದ ಜ.೯ ರ ಸಮಾವೇಶದ ಮೇಲೆ ಗೊಂದಲದ ತೂಗುಗತ್ತಿ ತೂಗುವಂತಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಆಗಮನಕ್ಕೆ ಕೋಲಾರ ಜಿಲ್ಲಾ ಕುರುಬರ ಸಂಘ ಸ್ವಾಗತ : ಜೆ.ಕೆ.ಜಯರಾಂ