• Fri. Apr 26th, 2024

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅವರನ್ನು ಬೆಂಬಲಿಸಿ – ಯಾದವ ಸಮುದಾಯಕ್ಕೆ ಎಂಎಲ್‌ಸಿ ನಾಗರಾಜಯಾದವ್ ಮನವಿ

PLACE YOUR AD HERE AT LOWEST PRICE

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ನಾಯಕರಾಗಿದ್ದು,ಅವರಿಗೆ ಯಾದವ ಸಮುದಾಯ ಬೆಂಬಲ ನೀಡಬೇಕು, ಅವರು ಕೋಲಾರಕ್ಕೆ ಬಂದರೆ ಸಮುದಾಯ ಅವರ ನೆರವಿಗೆ ನಿಲ್ಲಬೇಕು ಎಂದು ಮನವಿ ವಿಧಾನಪರಿಷತ್ ಸದಸ್ಯ ನಾಗರಾಜಯಾದವ್ ಮನವಿ ಮಾಡಿದರು.

ಕೋಲಾರ ನಗರಕ್ಕೆ ಜ.೯ ರಂದು ಸಿದ್ದರಾಮಯ್ಯ ಆಗಮಿಸುವ ಹಿನ್ನಲೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಕರೆದಿದ್ದ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಸಭೆಯಲ್ಲಿ ಜಿಲ್ಲೆಯ ಸಮುದಾಯ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜ.೯ ರಂದು ಕೋಲಾರಕ್ಕೆ ಬರುತ್ತಿದ್ದು, ಅಂದು ಎಲ್ಲಿ ಸ್ಪರ್ಧಿಸುತ್ತಾರೆ ಎಂದು ಘೋಷಿಸುವ ಸಾಧ್ಯತೆ ಇದೆ, ಕೋಲಾರದಲ್ಲಿ ಕಣಕ್ಕಿಳಿಯುವುದಾದರೆ ತಾಲೂಕಿನ ಯಾದವ ಸಮುದಾಯ ಒಗ್ಗಟ್ಟಾಗಿ ಅವರ ಕೆಲಸ ನಿಲ್ಲಬೇಕು, ಅವರ ಆಯ್ಕೆಯಿಂದ ಹಿಂದುಳಿದ ನಮ್ಮ ಸಮುದಾಯಕ್ಕೆ ಶಕ್ತಿ ಬರುತ್ತದೆ ಎಂದರು.

ಯಾದವರನ್ನು
ಎಸ್ಟಿಗೆ ಸೇರಿಸಿ
ಯಾದವ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಕ್ರಮವಹಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿ ಕೊಳ್ಳುವುದಾಗಿ ವಿಧಾನಪರಿಷತ್ ಸದಸ್ಯ ನಾಗರಾಜ ಯಾದವ್ ಎಚ್ಚರಿಸಿದರು.

ಬೊಮ್ಮಾಯಿ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ, ಕಾಡು ಗೊಲ್ಲರ ಅಭಿವೃದ್ದಿ ನಿಗಮ ಸ್ಥಾಪಿಸಿ ನಿಗಮಕ್ಕೆ ೧೭ ಕೋಟಿ ರೂ ನೀಡುವುದಾಗಿ ಘೋಷಿಸಿದ್ದರೂ ಇದುವರೆಗೂ ಕಾರ್ಯಗತವಾಗಿಲ್ಲ ಎಂದು ಟೀಕಿಸಿದ ಅವರು, ಕೂಡಲೇ ಈ ಕಾರ್ಯ ನಡೆಯಬೇಕು ಎಂದು ಒತ್ತಾಯಿಸಿದರು.

ಪ್ರವರ್ಗ-೧ನಲ್ಲಿ ಶೇ.೪ ರಷ್ಟು ಮೀಸಲಾತಿ ಇದೆ, ಈ ವರ್ಗದಲ್ಲಿ ೯೬ ಜಾತಿಗಳಿದ್ದು, ಇರುವ ಮೀಸಲಾತಿ ಸಾಲದು, ಅದನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ ಅವರು, ರಾಜಕೀಯವಾಗಿ,ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಯಾದವ ಸಮುದಾಯಕ್ಕೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಯಾದವ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಸರ್ಕಾರದೊಂದಿಗೆ ಸೇತುವೆಯಾಗಿ ನಾನು ಕೆಲಸ ಮಾಡುತ್ತೇನೆ ಎಂದ ಅವರು, ನೀವು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸಂಘಟಿತರಾದರೆ ಮಾತ್ರ ನಾವು ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಗೋಕುಲ್ ನಾರಾಯಣಸ್ವಾಮಿ, ಸಮುದಾಯದ ಮುಖಂಡ ಹಾಗೂ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ಶ್ರೀನಿವಾಸಯಾದವ್, ಮಾಲೂರು ತಾಲ್ಲೂಕು ಅಧ್ಯಕ್ಷ ಗೋವಿಂದಪ್ಪ,ಬಂಗಾರಪೇಟೆ ಅಧ್ಯಕ್ಷ ಶ್ರೀನಿವಾಸಯಾದವ್, ಯಾದವ ಯುವವೇದಿಕೆ ಅಧ್ಯಕ್ಷ ಸುಧಾಕರಯಾದವ್, ಮುಖಂಡರಾದ ಅರುಣಕುಮಾರಿ, ಮಾಲತಿ, ವಕೀಲ ದಿವಾಕರ್ ಯಾದವ್,ಮಾರ್ಕಂಡಪುರ ರವಿಶಂಕರ್,ಗ್ರಾ.ಪಂ ಅಧ್ಯಕ್ಷ ಸುರೇಶ್‌ಬಾಬು, ಉಮೇಶ್,ರಾಕೇಶ್, ರಾಜೇಶ್, ಸುದರ್ಶನ್, ಗೋಪಾಲಕೃಷ್ಣ, ನಾಗೇಶ್, ಮನೋಹರ್, ಹರೀಶ್, ವೆಂಕಟರೆಡ್ಡಿ,ಆನಂದಪ್ಪ, ಚಂದ್ರು ಮತ್ತಿತರರಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರ ಭೇಟಿ ಜ.೯ ರ ಟಿ ಪಿ ಪ್ರಕಟ-ಗುಂಪುಗಳ ಮುಖಾಮುಖಿ ಆಗದ ಹೊರತು ಸಭೆ ಮುಂದೂಡಲು ಒತ್ತಡ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!