• Tue. Oct 22nd, 2024

ಬಂಗಾರಪೇಟೆ ಬಿಜೆಪಿ ಅಭ್ಯರ್ಥಿ ಬಿ.ವಿ.ಮಹೇಶ್:ಕೆ.ಚಂದ್ರಾರೆಡ್ಡಿ.

PLACE YOUR AD HERE AT LOWEST PRICE

ಈ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಮಹೇಶ್ ರವರನ್ನು ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಭೂತ್ ಅಭಿಯಾನ ಸಂಚಾಲಕ ಕೆ.ಚಂದ್ರಾರೆಡ್ಡಿ ಮನವಿ ಮಾಡಿದರು.

ಅವರು ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಹೋಬಳಿ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಯರಗೋಳ ಗ್ರಾಮದಲ್ಲಿ ನಡೆದ ಭೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜನರಿಗಾಗಿ ರೂಪಿಸಲ್ಪಟ್ಟಿರುವ ಯೋಜನೆಗಳ ಬಗ್ಗೆ ತಿಳುವಳಿಕೆ ಮೂಡುಸುವ ಉದ್ದೇಶದಿಂದ ಭೂತ್ ವಿಜಯ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈಗಾಗಲೆ ಅನೇಕರು ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಅಂತಹವರಿಗೆ ಸರ್ಕಾರಗಳ ಸಾಧನೆಗಳ ಬಗ್ಗೆ ಮನವರಿಕೆ ಮಾಡಬೇಕು ಎಂಬುದೇ ಈ ಅಭಿಯಾನದ ಉದ್ದೇಶ ಎಂದರು.

ಈ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕ್ಷೇತ್ರದ 259 ಭೂತ್ ಗಳಲ್ಲಿ ಭೂತ್ ಕಮಿಟಿ ಮಾಡಿ, ಸರ್ಕಾರದ ಸೌಲಭ್ಯಗಳ ಬಗ್ಗೆ ಜನತೆಗೆ ತಿಳಿಸುವ ಕೆಲಸ ಆಗಬೇಕು ಎಂದರು.

ಭೂತ್ ಕಮಿಟಿಯ ಎಲ್ಲ 36 ಸದಸ್ಯರು ಪ್ರತಿ ದಿನ ಮತದಾರರ ಬಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ತಿಳುವಳಿಕೆ ಮೂಡಿಸಿ ಬಿಜೆಪಿಯ ಕಮಲದ ಗುರುತಿಗೆ, ಅಭ್ಯರ್ಥಿ ಮಹೇಶ್ ರವರಿಗೆ ಮತ ಹಾಕಿಸಬೇಕು ಎಂದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ಬಸವರಾಜ ಬೊಮ್ಮಾಯಿರ ನೇತೃತ್ವದ ರಾಜ್ಯ ಸರ್ಕಾರದ ಉಚಿತ ಅಕ್ಕಿ, ರೈತರಿಗೆ ಫಸಲ್ ಭಿಮಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಬಗ್ಗೆ ಕಾಂಗ್ರೇಸ್ ಪಕ್ಷ ಅಪಪ್ರಚಾರದಲ್ಲಿ ತೊಡಗಿದೆ.

ಉಚಿತ ಅಕ್ಕಿ ಯೋಜನೆ ನಾವು ಕೊಟ್ಟಿದ್ದು ಎಂದು ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರ್ಕಾರ ಇರುವಾಗ ಕಾಂಗ್ರೇಸ್ ಪಕ್ಷದವರು ಹೇಗೆ ಯೋಜನೆಗಳನ್ನು ಕೊಡಲು ಸಾದ್ಯ ಎಂದು ಪ್ರಶ್ನಿಸಿದರು.

ಆದ್ದರಿಂದ ಭೂತ್ ಕಮಿಟಿಯ ಸದಸ್ಯರು ಮನೆ ಮನೆಗೆ ತೆರಳಿ ಮೋದಿ ಸರ್ಕಾರದಲ್ಲಿ ದೇಶ ಸುರಕ್ಷಿತವಾಗಿರುವ ಬಗ್ಗೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ವಿ.ಮಹೇಶ್ ಮಾತನಾಡಿ, ಬಿಜೆಪಿ ನೇತೃತ್ವದ ನರೇಂದ್ರ ಮೋದಿರ ಮತ್ತು ಬಸವರಾಜ ಬೊಮ್ಮಾಯಿರ ಡಬಲ್ ಇಂಜಿನ್ ಸರ್ಕಾರದಲ್ಲಿ ದೇಶ ಮತ್ತು ರಾಜ್ಯ ಉತ್ತಮವಾಗಿ ಅಭಿವೃದ್ಧಿಯಾಗುತ್ತಿದೆ.

ಎರಡೂ ಸರ್ಕಾರಗಳು ರೈತರ, ಮಹಿಳೆಯ, ಬಡವರ, ದಲಿತರ ಮತ್ತು ಅಲ್ಪಸಂಖ್ಯಾತರ ಅಭವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ರೂಪಿಸಿದ್ದು ಈ ಯೋಜನೆಗಳಿಂದ ಅನೇಕರಿಗೆ ಅನುಕೂಲವಾಗಿದೆ ಎಂದರು.

ಭೂತ್ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ ಮಾಡಿ ಸರ್ಕಾರದ ಸಾಧನೆಗಳ ಪ್ರಚಾರ ಮಾಡಬೇಕು, ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಂಡಲ ಅದ್ಯಕ್ಷ ನಾಗೇಶ್, ಜಿಪಂ ಆಕಾಂಕ್ಷಿ  ಬತ್ತಲಹಳ್ಳಿ ಮಂಜುನಾಥ್, ತಾಪಂ ಮಾಜಿ ಸದಸ್ಯೆ ಅಂಬೂಬಾಯಿ, ಬಿಜೆಪಿ  ಕಾರ್ಯದರ್ಶಿ ಪಾರ್ಥಸಾರಥಿ, ಮುಂಖಂಡರಾದ ಮಂಜುನಾಥ್, ದುರ್ಗಾಜಿರಾವ್, ಕೃಷ್ಣೋಜಿರಾವ್, ಮುನಿಯಪ್ಪ ಮೊದಲಾದವರಿದ್ದರು.

 

Related Post

ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ನೀಡಿದ್ದಾರೆ. ಆದರೆ,‌ ರಾಜೀನಾಮೆ ನೀಡಲು ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ : ಮಾಜಿ ಸಂಸದ ಎಸ್.ಮುನಿಸ್ವಾಮಿ
ನಾವು ಆಸೆಗಳಿಗೆ ಮಿತಿಯಿಲ್ಲದೆ ಬದುಕುತ್ತೇವೆ,ಸಮಾಜಕ್ಕೆ ಒಂದಷ್ಟು ಕೊಡುಗೆಯಾಗಿ ನೀಡಿದಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ: ಶಿಕ್ಷಕ ಕೆ.ಹೆಚ್.ಸಂಪತ್ ಕುಮಾರ್
ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ: ನರಸಿಂಹಯ್ಯ 

Leave a Reply

Your email address will not be published. Required fields are marked *

You missed

error: Content is protected !!