PLACE YOUR AD HERE AT LOWEST PRICE
ಡಿಸಿಸಿ ಬ್ಯಾಂಕ್ ವತಿಯಿಂದ ನೀಡುತ್ತಿರುವ ಬಡ್ಡಿ ರಹಿತ ಸಾಲ ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯ ಹಣವಾಗಿದ್ದು, ಜನ ಶಾಸಕರ ಅಥವಾ ಕಾಂಗ್ರೆಸ್ ಸರ್ಕಾರದ ಹಣವಲ್ಲ ಎಂಬುದನ್ನು ತಿಳಿದುಕೊಳ್ಳಬೇಕೆಂದು ಆರ್.ಕೆ
ಪೌಂಡೇಶನ್ ಸಂಸ್ಥಾಪಕ ವಿ.ಮೋಹನ್ ಕೃಷ್ಣ ಹೇಳಿದರು.
ತಾಲ್ಲೂಕಿನ ಕಂಗಾಡ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಕಣ್ಣೂರು ಗ್ರಾಮದಲ್ಲಿ ಓಂ ಶಕ್ತಿ ಮಾಲಾಧಾರೆಗಳಿಗೆ ಉಚಿತವಾಗಿ 2 ಬಸ್ ವ್ಯವಸ್ಥೆ ಮಾಡಿದ್ದು, ಸ್ಥಳೀಯ ನಾಯಕರ ಸಮ್ಮುಖದಲ್ಲಿ ಬಸ್‍ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಸಕರು ಕೇವಲ ಡಿಸಿಸಿ ಬ್ಯಾಂಕ್ ನಿಂದ ಸಾಲ ಕೊಡುವುದರಲ್ಲಿ ತಲ್ಲಣರಾಗಿ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇದು ಬಿಜೆಪಿಯ ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯ ಹಣವೆಂದು ಸ್ಪಷ್ಟನೆ ನೀಡಿದರು.
ನಾವು ರಾಜಕೀಯ ಮಾಡಕ್ಕೆ ಭಕ್ತಾಧಿಗಳಿಗೆ ಬಸ್ ಸೌಕರ್ಯ ಕಲ್ಪಿಸುತ್ತಿಲ್ಲ. ಕ್ಷೇತ್ರಕ್ಕೆ ಮತ್ತು ನಿಮ್ಮಗಳ
ಸಂಕಲ್ಪ ಈಡೇರಲಿ ಎಂಬ ಉದ್ದೇಶದಿಂದ ಸ್ಥಳೀಯರ ಮನವಿಯಂತೆ ಉಚಿತ ಬಸ್ ಒದಗಿಸಲಾಗಿದೆ ಎಂದರು.
ಕ್ಷೇತ್ರದ ಮಣ್ಣಿನ ಮಗನಾಗಿ ಕೆಜಿಎಫ್‍ನಲ್ಲಿ ಅನೇಕ ದೇಗುಲಗಳಿಗೆ ಆರ್ಥಿಕವಾಗಿ ಸಹಕಾರ ನೀಡಿದ್ದೇನೆ.
ಮುಂದುವರಿದ ಭಾಗವಾಗಿ ಓಂ ಶಕ್ತಿ ಭಕ್ತರಿಗೆ ವ್ಯವಸ್ಥೆ ಮಾಡಿದ್ದೇನೆ. ಕ್ಷೇತ್ರದ ಒಳತಿಗಾಗಿ ಆಶೀರ್ವಾದ ಮಾಡಿ ಸದಾ ನಿಮ್ಮೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ಭರವಸೆ ನೀಡಿದರು.
ನಂತರ ನೂತನ 2023ರ ಕ್ಯಾಲೆಂಡರ್‍ಗಳನ್ನು ವಿ.ಮೋಹನ್ ಕೃಷ್ಣ ಗ್ರಾಮದಲ್ಲಿ ಬಿಡುಗಡೆಗೊಳಿಸಿ ಜನರಿಗೆ ಹಂಚಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಜಯಪ್ರಕಾಶ್ ನಾಯ್ಡು, ನಗರಾಧ್ಯಕ್ಷ ಕಮಲನಾಥನ್, ನವೀಣ್ ರಾಮ್, ಕಂಗಾಡ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜುಳ ಸೋಮನಾಥ್, ಶ್ರೀನಿವಾಸಸಂದ್ರ ಅಧ್ಯಕ್ಷ ರಘು, ತಾಪಂ ಮಾಜಿ ಸದಸ್ಯ ಬಾಬು, ಮುಖಂಡರಾದ ಶೆಟ್ಟಿಕುಂಟೆ ಸೀನಪ್ಪ, ವೆಂಕಟರಾಮೇಗೌಡ, ಚಲಪತಿ ನಾಯ್ಡು, ಪ್ರಕಾಶ್ ನಾಯ್ಡು, ಮೂರ್ತಿ, ರಮೇಶ್, ಸೀನಪ್ಪ, ಶ್ರೀರಾಮಗೌಡ, ಸುಬ್ಬು, ಕೃಷ್ಣಪ್ಪ, ಗಂಗಿ ರೆಡ್ಡಿ, ನಂದೀಶ್, ತೇಜು, ಶ್ರೀನಾಥ್, ವಿಜಿ ಉಪಸ್ಥಿತರಿದ್ದರು.