ದೇಶ ಉಳಿಯಬೇಕಾದರೆ, ದೇಶದ ಸಂಸ್ಕೃತಿ ಉಳಿಯಬೇಕಾದರೆ, ನಮ್ಮ ನಿಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕು ಎಂದು ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ಹೇಳಿದರು.
ಭಾನುವಾರ ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಚನ್ನಸಂದ್ರ ಗ್ರಾಮದಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷ ತೊರೆದು ಬಂದ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದವರು ಹಣಕೊಟ್ಟು ಮತ ಖರೀದಿಸಲು ಪ್ಲಾನ್ ರೂಪಿಸಿಕೊಂಡಿದ್ದಾರೆ ಅವರು ನಿಮ್ಮ ಮತಕ್ಕೆ ಹಣ ಕೊಟ್ಟು ಖರೀದಿಸುತ್ತಾರೆ ಯಾವುದೇ ಕಾರಣಕ್ಕೂ ಅವರನ್ನು ನಂಬಬೇಡಿ ೭೦ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ದೇಶಕ್ಕೂ ಏನು ಮಾಡಲಿಲ್ಲ ಗ್ರಾಮ ಅಭಿವೃದ್ಧಿಕ್ಕೂ ಏನು ಮಾಡಲಿಲ್ಲ ಕೇವಲ ಮುಖಂಡರನ್ನು ಅಭಿವೃದ್ಧಿಪಡಿಸುತ್ತಾ ಹೋಗುತ್ತಿದೆ, ದೇಶಕ್ಕಾಗಿ ಜೈ ಎನ್ನುವ ಪದ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಧೂಳಿಪಟವಾಗಿ ಹೋಗುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಎಂದು ತಿಳಿಸಿದರು.
ಮುಂದಿನ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿದರೆ ಕೋಲಾರ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲೇ ಅಲ್ಲ ದೇಶದಲ್ಲೇ ನಂಬರ್ ಒನ್ ಕ್ಷತ್ರವನ್ನಾಗಿ ಮಾರ್ಪಾಡು ಮಾಡುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಜೆಡಿಎಸ್ ತೊರೆದ ಮುಖಂಡರಾದ ಅಪ್ಪಯ್ಯನ್ನ, ಆಂಜನೇಯ, ವೆಂಕಟದಾಸಪ್ಪ, ರಾಮಣ್ಣ, ಆದ್ಯಪ್ಪ, ಡೈರಿ ಅಧ್ಯಕ್ಷ ಮುನಿರಾಜು, ಸಿಎನ್ ರಮೇಶ್, ನಾಗರಾಜಪ್ಪ, ರಮೇಶ್, ಅಂಜಿನಪ, ಮುರಳಿ, ರವಿ, ಶಂಕರ್, ಆನಂದ್, ನರಸಿಂಹ, ರಾಜಣ್ಣ, ಟಿ ಸಿ ನಾರಾಯಣಸ್ವಾಮಿ, ದಳಸಗೆರೆ ರವಿ, ವೆಂಕಟರೆಡ್ಡಿ, ನಾರಾಯಣಸ್ವಾಮಿ ಶೆಟ್ಟಿ, ಚಿಕ್ಕನಾರಾಯಣಸ್ವಾಮಿ, ಆಟೋ ಮುನೇಗೌಡ, ಸತೀಶ, ಸಿ ಎಸ್ ನಾಗೇಶ್, ಮನೋಜ್, ಕೃಷ್ಣಪ್ಪ ಹೆಗಡೆ, ಹೋಟೆಲ್ ಸುರೇಶ್, ರಾಮಕೃಷ್ಣ, ನಾಗರಾಜ್, ನಾರಾಯಣಪ್ಪ, ಮಧು, ಮುನಿರಾಜು, ಮಂಜುನಾಥ್, ಕೆಂಚಪ್ಪ, ರಮೇಶ್, ಸುನಿಲ್, ವಿನೋದ್, ಮುಖಂಡರುಗಳಾದ ಬೆಗ್ಲಿ ಸೂರ್ಯ ಪ್ರಕಾಶ್. ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ. ಕುರುಬರ ಸಂಘದ ಜಿಲ್ಲಾಧ್ಯಕ್ಷ ತಂಬಳ್ಳಿ ಮುನಿಯಪ್ಪ, ಚನ್ನಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುರಳಿ ಭವ್ಯಶ್ರೀ,.ಕಡುಗಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್, ಮಾಜಿ ತಾಲೂಕು ಅಧ್ಯಕ್ಷ ಸೂಲೂರು ಆಂಜನಪ್ಪ, ಅಗ್ರಹಾರ ಪಿ ವೆಂಕಟೇಶ್, ದಿಲೀಪ್, ಚನ್ನಕೇಶವ, ರವಿ, ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.