• Thu. Sep 28th, 2023

ರಸ್ತೆ ಬದಿ ನಿರ್ಗತಿಕರಿಗೆ ಸಿಎಂಆರ್‌ ಶ್ರೀನಾಥ್‌ ರಿಂದ ಕಂಬಳಿ ವಿತರಣೆ

PLACE YOUR AD HERE AT LOWEST PRICE

ಕೋಲಾರ ನಗರದ ರಸ್ತೆ ಬದಿಯಲ್ಲಿ ರಾತ್ರಿ ಹೊತ್ತಿನಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಸಿಎಂಆರ್ ಫೌಂಡೇಶನ್ ವತಿಯಿಂದ ಭಾನುವಾರ ಕಂಬಳಿ ನೀಡುವ ಮೂಲಕ ಸಿಎಂಆರ್ ಶ್ರೀನಾಥ್ ಅವರು ಮಾನವೀಯತೆ ಮೆರೆದಿದ್ದಾರೆ.

ಭಾನುವಾರ ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ನಗರದ ಹೊಸ ಬಸ್ ನಿಲ್ದಾಣ, ಅಮ್ಮವಾರಿಪೇಟೆ, ಎಂಜಿ ರಸ್ತೆ, ಅರಹಳ್ಳಿ ರಸ್ತೆ, ಕಾಳಮ್ಮಗುಡಿಬೀದಿ ಕ್ಲಾರ್ಕ್ ಟವರ್ ದರ್ಗಾ ಸೇರಿದಂತೆ ನಗರದಲ್ಲಿನ ರಸ್ತೆಗಳು ದೇವಾಲಯಗಳ ಬಳಿ ಮಲಗಿದ್ದ ಸುಮಾರು 400 ಕ್ಕೂ ಹೆಚ್ಚು ನಿರಾಶ್ರಿತರಿಗೆ ಕಂಬಳಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ ಚಳಿಯಿಂದಾಗಿ ಬಹಳಷ್ಟು ನಿರಾಶ್ರಿತ ವೃದ್ಧರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದು ಅದನ್ನು ಮನಗೊಂಡು ಸುಮಾರು ಆರು ವರ್ಷಗಳಿಂದ ಸತತವಾಗಿ ನಿರಾಶ್ರಿತರಿಗೆ ಕಂಬಳಿ ಸೇರಿದಂತೆ ಕೆಲವು ಅಗತ್ಯ ಸೇವೆಗಳನ್ನು ವಿತರಣೆ ಮಾಡುಕೊಂಡು ಬಂದಿದ್ದೇನೆ ಈ ನಿಟ್ಟಿನಲ್ಲಿ ಯಾರೇ ಆಗಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಕಿವಿಮಾತು ಹೇಳಿದರು.

ಕೋಲಾರ ವಿಧಾನಸಭಾ ಕ್ಷೇತ್ರದ ಕೆಲವು ರಾಜಕಾರಣಿಗಳು ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ ಸಂಕಷ್ಟದಲ್ಲಿ ಇದ್ದ ಜನಸಾಮಾನ್ಯರ ಬದುಕಿಗೆ ಅಸರೆಯಾಗಿ ನಿಲ್ಲಲಿಲ್ಲ ಮನೆಯಿಂದ ಹೊರಬರಲಿಲ್ಲ ಅಂತಹ ಸಂದರ್ಭದಲ್ಲಿ ನನ್ನ ಆರೋಗ್ಯವನ್ನು ಲೆಕ್ಕಿಸದೆ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಕೊರೊನಾ ಸೋಂಕಿತರಿಗೆ ಔಷಧೀ ಕಿಟ್ ಗಳು, ಆಹಾರ ಕಿಟ್ ನೀಡಿ ಅವರ ಬದುಕಿಗೆ ಅಸರೆಯಾಗಿ ನಿಂತಿದ್ದೇನೆ ಮುಂದಿನ 2023 ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ವರ್ಧೆ ಮಾಡಲಿದ್ದು ಕ್ಷೇತ್ರದ ಜನರು ನನಗೆ ರಾಜಕೀಯವಾಗಿ ಬೆಂಬಲಿಸುವಂತೆ ಮನವಿ ಮಾಡಿದರು.

ರೋಟರಿ ಸೆಂಟ್ರಲ್‌ ಕಾರ್ಯದರ್ಶಿ ಮಾತನಾಡಿ ಬಡವರನ್ನು ನಿರಾಶ್ರಿತರನ್ನು ಗುರುತಿಸಿ ಸಿಎಂಆರ್ ಫೌಂಡೇಶನ್ ವತಿಯಿಂದ ಕೈಲಾದಷ್ಟು ಸೇವೆ ಮಾಡಿಕೊಂಡು ಬಂದಿದ್ದಾರೆ ಕಂಬಳಿ ವಿತರಣೆಗೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಬಂದಿದ್ದು ಸಾರ್ವಜನಿಕರು ಇಂತಹ ನಿರ್ಗತಿಕರು ಯಾರಾದರೂ ಕಂಡುಬಂದಲ್ಲಿ ನಮ್ಮ ಸಿಎಂಆರ್ ಫೌಂಡೇಶನ್ ತಂಡಕ್ಕೆ ಮಾಹಿತಿ ನೀಡಿದರೆ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಹೇಳಿದರು.

 

ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ನಗರಸಭೆ ಸದಸ್ಯ ರಫೀಕ್, ರಾಜ್ಯ ಕುರುಬರ ಸಂಘದ ಮಾಜಿ‌ ನಿರ್ದೇಶಕ ಅಶೋಕ್, ಹಿದಾಯತ್, ಆರೀಫ್, ಉಮರ್ ಉಲ್ಲಾ ಖಾನ್, ಶಿವು, ಮುಂತಾದವರು ಇದ್ದರು

Leave a Reply

Your email address will not be published. Required fields are marked *

error: Content is protected !!