• Sun. Apr 28th, 2024

ವಿವಿದ ಬೇಡಿಕೆಗಾಗಿ ಜ.13ರಂದು ರೈತ ಸಂಘದಿಂದ ಮುಳಬಾಗಿಲು ತಾಲ್ಲೂಕು ಕಛೇರಿ ಮುತ್ತಿಗೆ.

PLACE YOUR AD HERE AT LOWEST PRICE

ಮುಳಬಾಗಿಲು  ತಾಲೂಕಿನಾದ್ಯಂತ ಅಕ್ರಮ ಸಾಗುವಳಿ ಹಾಗೂ ಭೂ ಒತ್ತುವರಿ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕು ಮತ್ತು ಹದಗೆಟ್ಟಿರುವ ತಾಲೂಕು ಆಡಳತವನ್ನು ಸರಿಪಡಿಸುವಂತೆ ಒತ್ತಾಯಿಸಿ ಜನವರಿ.13ರಂದು ಜಾನುವಾರುಗಳ ಸಮೇತ ತಾಲೂಕು ಕಚೇರಿ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಳಬಾಗಿಲು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಪಾಷ, ತಾಲೂಕು ಕಚೇರಿ ರಿಯಲ್ ಎಸ್ಟೇಟ್ ಭೂಗಳ್ಳರ, ದಲ್ಲಾಳಿಗಳ ಇಲಾಖೆಯಾಗಿ ಮಾರ್ಪಟ್ಟು ಹೆಜ್ಜೆ ಹೆಜ್ಜೆಗೂ ಜನಸಾಮಾನ್ಯರನ್ನು ಶೋಷಣೆ ಮಾಡುವ ಇಲಾಖೆಯಾಗಿ ಮಾರ್ಪಟ್ಟಿದೆ ಎಂದು ಅವ್ಯವಸ್ಥೆ ವಿರುದ್ಧ ಕಿಡಿಕಾರಿದರು.
ಗ್ರಾಮೀಣ ಪ್ರದೇಶದಲ್ಲಿ ಜನ ಸೇವಕರಾಗಿ ಕೆಲಸ ಮಾಡಬೇಕಾದ ಕಂದಾಯ ಅಧಿಕಾರಿಗಳು ನಗರದ ಜೀವನಕ್ಕೆ ಹೊಂದಿಕೊಂಡು ಕೆರೆ, ರಾಜಕಾಲುವೆ ಗೋಮಾಳವನ್ನು ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಸ್ಥಳೀಯ ಅಮಾಯಕ ರೈತರ ಹೆಸರಿನಲ್ಲಿ ಬೆಂಗಳೂರು ಮೂಲದ ಭೂಗಳ್ಳರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು.
ಸರ್ಕಾರ ಭೂಮಿ ಇಲ್ಲದ ಬಡವರಿಗೆ ಅನುಕೂಲವಾಗಲಿ ಎಂದು ಸರ್ಕಾರಿ ಗೋಮಾಳದಲ್ಲಿ ಹತ್ತಾರು ವರ್ಷಗಳಿಂದ
ಸ್ವಾಧೀನದಲ್ಲಿರುವ ರೈತರನ್ನು ಗುರುತಿಸಿ ಸರ್ಕಾರ ನೇಮಕ ಮಾಡಿರುವ ದರಖಾಸ್ತು ಸಮಿತಿ ಮುಖಾಂತರ ಕಂದಾಯ, ಸರ್ವೇ ಅಧಿಕಾರಿಗಳ ವರದಿ ಮೇರೆಗೆ ಪಾರದರ್ಶಕವಾದ ದಾಖಲೆಗಳಿದ್ದರೆ ಭೂಮಿ ಇಲ್ಲದ ರೈತರಿಗೆ ನೀಡಬೇಕಾಗಿದ್ದ ಸಾಗುವಳಿ ಗಲ್ಲಿಗಲ್ಲಿಯಲ್ಲಿ ಲಕ್ಷ ಲಕ್ಷಕ್ಕೆ ಮಾರಾಟವಾಗುವ ವಸ್ತುವಾಗಿ ಮಾರ್ಪಟ್ಟಿದೆ ಎಂದು ಆರೋಪ ಮಾಡಿದರು.
ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಪ್ರಧಾನ ಕಾರ್ಯದರ್ಶಿ ಬಾಬು, ಭಾಸ್ಕರ್, ಗುರುಸ್ವಾಮಿ, ಸುನೀಲ್‍ಕುಮಾರ್, ವಿಜಯ್‍ಪಾಲ್, ವಿಶ್ವ, ಜುಬೇರ್ ಪಾಷ, ಆದಿಲ್ ಪಾಷ, ಹೆಬ್ಬಣಿ ಆನಂದರೆಡ್ಡಿ, ಹೆಬ್ಬಣಿ ರಾಮಮೂರ್ತಿ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!