• Fri. Apr 19th, 2024

ಸಂವಿಧಾನ ಸಂರಕ್ಷಣಾ ಜಾಥಾಗೆ ಬಂಗಾರಪೇಟೆಯಲ್ಲಿ ಅದ್ದೂರಿ ಸ್ವಾಗತ.

PLACE YOUR AD HERE AT LOWEST PRICE

ಜನಾಂದೋಲನ ಮಹಾ ಮೈತ್ರಿ, ಸಿಟಿಜನ್ ಫಾರ್ ಡೆಮೊಕ್ರಸಿ, ಜನತಂತ್ರ ಪ್ರಯೋಗ ಶಾಲೆ ಮತ್ತು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯಲ್ಲಿ ನಡೆಯುತ್ತಿರುವ ಸಂವಿಧಾನ ಸಂರಕ್ಷಣಾ ಜಾಥಾವನ್ನು ವಿವಿದ ದಲಿತ ಸಂಘಟನೆಗಳು ಬಂಗಾರಪೇಟೆಯಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡರು.

ಸಂವಿಧಾನದ ಹಕ್ಕುಗಳು ಯಥಾವತ್ತಾಗಿ ಜಾರಿಯಾಗಬೇಕು ಮತ್ತು ಸಂವಿಧಾನ ಆಶಯಗಳು ಈಡೇರಬೇಕು. ಪಿ.ಟಿ.ಸಿ.ಎಲ್. ಕಾಯ್ದೆಯ ಆಶಯಗಳನ್ನು ಈಡೇರಿಸಬೇಕು.1962ರ ಕಾಲಮಿತಿ ಕಾಯ್ದೆಯ ನಿಯಮಾವಳಿಗಳು ಸದರಿ ಕಾಯ್ದೆಗೆ ಅನ್ವಯಿಸದಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು.

ಇತ್ತೀಚಿಗೆ ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಸಲ್ಲಿಸುವ ಮೂಲಕ ಸಮುದಾಯದ ಹಿತ ಕಾಪಾಡಬೇಕು. ಶೋಷಿತ ಸಮುದಾಯಗಳ ಹಿತಕ್ಕಾಗಿ ಒಳಮೀಸಲಾತಿ ಜಾರಿಗೊಳಿಸಬೇಕು. ಎನ್‌ಇಪಿ ಶಿಕ್ಷಣ ವ್ಯವಸ್ಥೆಯನ್ನು ರದ್ದುಗೊಳಿಸಬೇಕು. ಹಳೆ ಶಿಕ್ಷಣ ವ್ಯವಸ್ಥೆಯನ್ನೇ ಮುಂದುವರಿಸಬೇಕು.

ಸುಮಾರು 28 ಸಾವಿರಕ್ಕೂ ಹೆಚ್ಚಿರುವ ಬ್ಯಾಕ್ ಲಾಕ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಅನ್ನದಾತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳು ರದ್ದಾಗ ಬೇಕು. ದಲಿತರ ಮೇಲೆ ನಡೆದಿರುವ ದೌರ್ಜನ್ಯಗಳ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟುಗಳನ್ನು ಎಲ್ಲಾ ಜಿಲ್ಲಾ ಮತ್ತು ತಾಲೂಕುಗಳಲ್ಲಿ ಸ್ಥಾಪಿಸಬೇಕು.

ಎಸ್. ಸಿ.ಎಸ್.ಪಿ. ಮತ್ತು ಟಿ ಎಸ್ ಪಿ ಕಾಯ್ದೆ ಸಂಪೂರ್ಣ ಜಾರಿಯಾಗಬೇಕು ಮತ್ತು ಕಾಲಂ 7 ಡಿ ರದ್ದಾಗ ಬೇಕು. 2018 ರಿಂದ 2022ರವರೆಗೂ ಸದರಿ ಕಾಯ್ದೆಯ ಅಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು.

ಈ ಅನುದಾನವನ್ನು ದುರ್ಬಲಕೆ ಮಾಡಿಕೊಂಡಿರುವ ರಾಜಕಾರಣಿಗಳು ಸೇರಿದಂತೆ ಅಧಿಕಾರಿಗಳ ಮೇಲೆ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮೊದಲಾದ ಬೇಡಿಕೆಗಳ ಈಡೇರಿಕೆಗೆ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ಸಾರ್ವಜನಿಕರು ಆಗಮಿಸಬೇಕೆಂದು ಮುಖಂಡರು ಕೋರಿದರು.

ಈ ವೇಳೆ ಮುಖಂಡರಾದಬಿ.ಚನ್ನಕೃಷ್ಣಪ್ಪ ಡಾ. ಮುನಿರಾಂಜಪ್ಪ, ಕೆ ಎಮ್ ರಾಜಪ್ಪ, ನವೀನ್ ಕುಮಾರ್, ಎಪಿಲ್ ರಘುನಾಥ್, ಮುಬಾರಕ್ ಬಾಗ್ ಬಾನ್, ಕೆ.ಮದಿವಣ್ಣನ್, ಕದಿರೇನಹಳ್ಳಿ ಕುಮಾರ್, ಪಿವಿಸಿ ಮಣಿ, ಪಿವಿಸಿ ರವಿ, ರವಿ ಬಾಬು, ಕಲಾಮಂಡಳಿ ಜಿಲ್ಲಾಧ್ಯಕ್ಷ ರವಿಚಂದ್ರ, ಚನ್ನ ಕೃಷ್ಣಪ್ಪ, ಕೂಡುಗಲ್ ಬಾಬು, ಕಳವಂಚಿ ಶ್ರೀನಿವಾಸ್, ಬಿ. ನಾರಾಯಣಪ್ಪ, ವೆಂಕಟರಾಮ್, ಪ್ರಭುದೇವ, ಗೊಲ್ಲಳ್ಳಿ ಬಾಲಪ್ಪ, ಶ್ರೀ ರಾಮ, ಫಿಲ್ಟರ್ ಶ್ರೀನಿವಾಸ್, ಮುಬಾರಕ್, ಚೌಡಪ್ಪ, ಮುಂತಾದವರು ಭಾಗವಹಿಸಿದ್ದರು.

 

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!