ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಬಿಜೆಪಿ ಪಕ್ಷದಿಂದ ಸಮರ್ಥವಾಗಿ ಚುನಾವಣೆಯನ್ನು ಎದುರಿಸಲು ಸಿದ್ದರಿದ್ದೇವೆ ಎಂದು ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.
ಕೋಲಾರ ನಗರದ ಕಾರಂಜಿಕಟ್ಟೆಯ ಧರ್ಮರಾಯಸ್ವಾಮಿ ದೇವಾಲಯದ ಬಳಿ ಮಂಗಳವಾರ ಓಂಶಕ್ತಿ ಫೌಂಡೇಶನ್ ವತಿಯಿಂದ ಮೇಲ್ ಮರವತ್ತೂರು ಓಂಶಕ್ತಿ ದೇವಸ್ಥಾನಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಬಿಜೆಪಿ ಎಲ್ಲಿದೆ ಎಂದು ಕೇಳುವ ಸಿದ್ದರಾಮಯ್ಯ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದೇವೆ ಪ್ರತಿಯೊಂದು ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದಾರೆ 70 ವರ್ಷ ದೇಶವನ್ನು ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಬೂತ್ ಏಜೆಂಟ್ ಗಳು ಇಲ್ಲ ಎಂಬುದನ್ನು ಅರ್ಥಮಾಡಿಕೊಂಡು ಮಾತಾಡಬೇಕು ಎಂದರು
ಬಿಜೆಪಿ ಪಕ್ಷದಲ್ಲಿ ಬೆಳೆದ ವ್ಯಕ್ತಿಗಳಿಗೆ ಮೊದಲು ಭಾರತೀಯ, ನಂತರ ಹಿಂದೂ, ಕೊನೆಯದಾಗಿ ಜಾತಿ ಬರುತ್ತದೆ ಸಿದ್ದರಾಮಯ್ಯ ಅವರು ಮೊದಲೇ ಹಿಂದು ವಿರೋಧಿ ಅಂತವರಿಗೆ ಕ್ಷೇತ್ರದ ಜನ ಮತ ನೀಡಲ್ಲ ಜೊತೆಗೆ ನೆನ್ನೆಯ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮುಳಬಾಗಿಲು ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಜನರನ್ನು ಕರೆ ತಂದು ಸಮಾವೇಶ ಮಾಡಿದ್ದಾರೆ ಹೊರತು ಕೋಲಾರ ವಿಧಾನಸಭಾ ಕ್ಷೇತ್ರದ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಲ್ಲ ಇನ್ನೂ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಖಚಿತ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಗುಣಶೇಖರನ್ ಮಾತನಾಡಿ ಓಂಶಕ್ತಿ ದೇವಸ್ಥಾನಕ್ಕೆ ಪ್ರತಿನಿತ್ಯ ಬಸ್ ವ್ಯವಸ್ಥೆ ಮಾಡಿದ್ದು ಇದೇ ರೀತಿಯಲ್ಲಿ ಓಂಶಕ್ತಿ ಫೌಂಡೇಶನ್ ಸೇವೆಯೂ ಮುಂದುವರೆಯಲಿ ಎಂದು ಆಶಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಾ.ಮಾ ಬಾಬು, ಭರತ್ ಕುಮಾರ್, ಅಶೋಕ್, ಕಾವ್ಯ, ಮುಂತಾದವರು ಇದ್ದರು