• Fri. Mar 1st, 2024

ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲು ಹೆಮ್ಮೆ ಎನಿಸುತ್ತದೆ-ಸಿಎಂಆರ್‌ ಶ್ರೀನಾಥ್

PLACE YOUR AD HERE AT LOWEST PRICE

ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ವರ್ಧೆ ಮಾಡುವುದನ್ನು ಸ್ವಾಗತಿಸುತ್ತೇನೆ ಅಂತಹವರ ವ್ಯಕ್ತಿಯ ವಿರುದ್ದ ಸ್ವರ್ಧೆ ಮಾಡುವುದಕ್ಕೆ ನನಗೆ ಹೆಮ್ಮೆಯಿದೆ. ನಮ್ಮ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಸೈನಿಕರಂತೆ ಪಕ್ಷದ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮಾಜಿ ಪ್ರಧಾನಿ ಎಚ್.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರನ್ನು ಎದುರಿಸುವ ಶಕ್ತಿ ಕಾರ್ಯಕರ್ತರಿಗೆ ಕೊಟ್ಟಿದ್ದಾರೆ ಜೆಡಿಎಸ್ ಪಕ್ಷ ಕ್ಷೇತ್ರದಲ್ಲಿ ಪ್ರಾರಂಭದಿಂದಲೂ ಬಲಿಷ್ಠವಾಗಿದೆ ಎರಡು ರಾಷ್ಟ್ರೀಯ ಪಕ್ಷಗಳನ್ನು ಕ್ಷೇತ್ರದ ಜನತೆ ತಿರಸ್ಕರಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಬೆಂಬಲಿಸಿ ರಾಜ್ಯದಲ್ಲಿ ಹಾಗೂ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ ಎಂದರು.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ‌ ರಾಜ್ಯದ ಮಾಜಿ ಮುಖ್ಯಮಂತ್ರಿ ಒಂದು ಕಡೆ ಸ್ವರ್ಧೆಯಾದರೆ ಮತ್ತೊಂದು ಕಡೆ ಮಾಜಿ ಸಚಿವ ಎರಡು ಬಾರಿ ಶಾಸಕರು ನಮ್ಮ ಎದುರಾಳಿಗಳು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಭದ್ರಕೋಟೆಯಾಗಿದೆ ಜನರ ಮನಸ್ಸಿನಲ್ಲಿ ಸ್ಥಳೀಯರಿಗೆ ಹಾಗೂ ಕ್ಷೇತ್ರದ ಜನತೆಯ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ಆರಿಸಬೇಕೆಂದು ಈಗಾಗಲೇ ತೀರ್ಮಾನ ಮಾಡಿದ್ದಾರೆ ಜೊತೆಗೆ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳು ಜನಪರವಾಗಿದ್ದು ನನ್ನ ಗೆಲುವಿಗೆ ಸಹಕಾರಿಯಾಗಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದರು.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ವ್ಯಕ್ತಿಗೆ ಮಾನ್ಯತೆ ಸಿಗುತ್ತದೆ ಕ್ಷೇತ್ರ ಜನತೆ ಪ್ರಬುದ್ದರಾಗಿದ್ದು,ಎಲ್ಲಾ ವಿಷಯಗಳ ಬಗ್ಗೆ ತೀರ್ಮಾನ ಮಾಡಿ ಮತ ನೀಡಲಿದ್ದಾರೆ ಈಗಾಗಲೇ ಜೆಡಿಎಸ್ ಪಕ್ಷದ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ ಕುಮಾರಸ್ವಾಮಿಯವರೇ ಯಾವುದೇ ಕಾರಣಕ್ಕೂ ಎದುರಾಳಿಯಾಗಿ ಯಾರೇ ಸ್ವರ್ಧೆ ಮಾಡಿದರೂ ನಮ್ಮ ಪಕ್ಷದ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಆಗಿರುತ್ತಾರೆ ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು

ಕ್ಷೇತ್ರದ ಎಲ್ಲಾ ವರ್ಗಗಳ ಹಾಗೂ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು,ಕೋವಿಡ್ ಸಂದರ್ಭದಲ್ಲಿ ನನ್ನ ನಿರಂತರವಾಗಿ ಜನಸೇವೆ ಮಾಡಿದ್ದೇವೆ ಇವತ್ತು ಕ್ಷೇತ್ರದಲ್ಲಿ ಸ್ವರ್ಧೆ ಮಾಡಲು ಬಂದಿರುವ ವ್ಯಕ್ತಿಗಳು ಕೋವಿಡ್ ಸಂದರ್ಭದಲ್ಲಿ ನಾಪತ್ತೆಯಾಗಿದ್ದರೂ ಸಿಎಂಆರ್ ಶ್ರೀನಾಥ್ ಮಾತ್ರ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ ಜೊತೆಗೆ ನಾನು ಕೂಡ ಕೃಷಿಕನಾಗಿ,ರೈತರು ಬೆಳೆಯುವ ಟಮೋಟ ವ್ಯಾಪಾರಸ್ಥನಾಗಿ ಪ್ರತಿನಿತ್ಯ ಎಲ್ಲಾ ಸಮುದಾಯಗಳ ಜನರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇನೆ ಅದುವೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆಯೆಂದರು.

Leave a Reply

Your email address will not be published. Required fields are marked *

You missed

error: Content is protected !!