• Thu. May 2nd, 2024

ಅರಾಭಿಕೊತ್ತನೂರು ಶಾಲೆಯ ವಿದ್ಯಾಗಣಪತಿಗೆ ಸಂಕಷ್ಟಹರ ಪೂಜೆ,ಪಂಚಾಮೃತ ಅಭಿಷೇಕ

PLACE YOUR AD HERE AT LOWEST PRICE

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ವಿದ್ಯಾಗಣಪತಿ ದೇವಾಲಯದಲ್ಲಿ ಅಂಗಾರಕ ಸಂಕಷ್ಟ ಗಣಪತಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ಗಣಪತಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಮಾಡಲಾಗಿದ್ದು, ಆಗಮಿಕರಾದ ಕೋಲಾರದ ಫಣಿಕುಮಾರ್ ಪೂಜೆಯನ್ನು ನಡೆಸಿಕೊಟ್ಟರು.

ಈ ತಿಂಗಳ ಸಂಕಷ್ಟಗಣಪತಿ ಪೂಜೆಯನ್ನು ಶಾಲೆಯ ದೈಹಿಕ ಶಿಕ್ಷಕಿ ಕೆ.ಲೀಲಾ ನಡೆಸಿಕೊಟ್ಟಿದ್ದು, ತಾಲ್ಲೂಕಿನ ಮಾರ್ಜೇನಳ್ಳಿಯ ಎಂ.ಜಿ.ಎನ್ ಕ್ಯಾಟರಿಂಗ್‌ನ ನಾಗಭೂಷಣ್ ಉಚಿತವಾಗಿ ಪ್ರಸಾದದ ವ್ಯವಸ್ಥೆ ಮಾಡಿದ್ದರು.
ಪೂಜೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಮಾತನಾಡಿ, ಮಕ್ಕಳಲ್ಲಿ ಕಲಿಕಾ ಶ್ರದ್ಧೆ ಹೆಚ್ಚಲು ವಿನಾಯಕ ಕರುಣಿಸಲಿ, ಶಾಲೆಯ ಆವರಣದಲ್ಲಿ ಸುಂದರ ವಿದ್ಯಾಗಣಪತಿ ದೇವಾಲಯ ನಿರ್ಮಿಸುವ ಮೂಲಕ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕಾರ್ಯವಾಗಿದೆ ಎಂದರು.

ದೇವಾಲಯಕ್ಕೆ ವಿಗ್ರಹ ಕೊಡುಗೆಯಾಗಿ ನೀಡಿದ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ದೇವಾಲಯವನ್ನು ನಿರ್ಮಿಸಿಕೊಟ್ಟ ಗ್ರಾ.ಪಂ ಸದಸ್ಯ ಎ.ಎಸ್.ನಂಜುಂಡೇಗೌಡರ ಸಹಕಾರವನ್ನು ಸ್ಮರಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎ.ಮಹೇಂದ್ರ, ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್, ಎಂಜಿಎಂ ಕ್ಯಾಟರಿಂಗ್ಸ್‌ನ ನಾಗಭೂಷಣಗೌಡ, ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ಶ್ವೇತಾ,ಸುಗುಣಾ, ವೆಂಕಟರೆಡ್ಡಿ ಫರೀದಾ, ಶ್ರೀನಿವಾಸಲು, ಚೈತ್ರಾ, ಡಿ.ಚಂದ್ರಶೇಖರ್, ಎಸ್‌ಡಿಎಂಸಿ ಸದಸ್ಯೆ ಜಮುನಾ, ಶಾಲೆಯ ನೇತ್ರಮ್ಮ, ದಾಕ್ಷಾಯಣಮ್ಮ ಹಾಗೂ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!