• Sat. Apr 27th, 2024

ಮಹಿಳೆಗೆ ಏಕೆ ದೇವಾಲಯಕ್ಕೆ ಪ್ರವೇಶ ನಿಷಿದ್ಧ: ಕೋಲಾರದಲ್ಲಿ ಜಸ್ಟೀಸ್ ಕೆ.ಚಂದ್ರು ಪ್ರಶ್ನೆ.

PLACE YOUR AD HERE AT LOWEST PRICE

ಮಹಿಳಾ ದೇವರನ್ನು ಪೂಜಿಸುತ್ತೇವೆ. ಆದರೆ, ಕೆಲ ದೇಗುಲಗಳಲ್ಲಿ ಮಹಿಳೆಯರಿಗೆ ಏಕೆ ಪ್ರವೇಶ ನೀಡುವುದಿಲ್ಲ, ಮಹಿಳೆಯರನ್ನು ಏಕೆ ಅರ್ಚಕರನ್ನಾಗಿ ಮಾಡುವುದಿಲ್ಲ’ ಎಂದು ಮದ್ರಾಸ್‌ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಕೆ.ಚಂದ್ರು ಕೋಲಾರದಲ್ಲಿ ಪ್ರಶ್ನಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಅಖಿಲ ಭಾರತ ವಕೀಲ ಒಕ್ಕೂಟ, ಕಸಾಪ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ  ನ್ಯಾಯಮೂರ್ತಿ ಕೆ.ಚಂದ್ರು ಹಾಗೂ ವಿಶ್ವ ಕುಂದಾಪುರ ರವರ ಕೃತಿ ಬಿಡುಗಡೆ ಮತ್ತು ಮಹಿಳೆಯರಿಗೆ ಶೀಘ್ರ ನ್ಯಾಯಕ್ಕಾಗಿ ಸುಧಾರಣೆಗಳು ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ದೇಗುಲದ ಪೂಜಾರಿ ಅಥವಾ ಅರ್ಚಕರಾಗಬಾರದೆಂದು, ದೇಗುಲ ಪ್ರವೇಶ ಮಾಡಬಾರದೆಂದು ಯಾವುದೇ ಕಾನೂನಿನಲ್ಲಿ ಇಲ್ಲ. ಮಹಿಳೆಯರು ಪೂಜೆ, ಆಚರಣೆ ಮಾಡುತ್ತಿದ್ದ ಉಲ್ಲೇಖ ವೇದಗಳಲ್ಲಿದೆ. ಲಿಂಗ, ಜಾತಿ, ಧರ್ಮ ತಾರತಮ್ಯ ಮಾಡದೆ ಎಲ್ಲರೂ ಸಮಾನರು ಎಂಬುದಾಗಿ ಸಂವಿಧಾನದಲ್ಲಿ ಅಂಬೇಡ್ಕರ್‌ ಬರೆದಿದ್ದಾರೆ. ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ’ ಎಂದರು.

‘ಧರ್ಮದ ಹೆಸರಿನಲ್ಲಿ ಶೋಷಣೆಗೆ ಕರ್ನಾಟಕ ಪ್ರಯೋಗಾಲಯ ಆಗಿದೆ. ಹಿಜಾಬ್‌, ಹಲಾಲ್, ಆಜಾನ್‌ ಬಗ್ಗೆ ತಕರಾರು ತೆಗೆಯುತ್ತಿದ್ದಾರೆ. ಕರ್ನಾಟಕದಲ್ಲಿ ಸಮಾಜ‌ ಒಳಗೊಳ್ಳುವಿಕೆಯೇ ಕಾಣುತ್ತಿಲ್ಲ’ ಎಂದು ಟೀಕಾ ಪ್ರಹಾರ ನಡೆಸಿದರು.

‘ಹಿಜಾಬ್ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಪರೀಕ್ಷೆ ಬರೆಯಲೂ ಬಿಡಲಿಲ್ಲ. ಇದು ಸಂವಿಧಾನ ವಿರೋಧಿ ಕ್ರಮ. ಸಮಾಜದಲ್ಲಿ ವಿಷಕಾರಿ ಚಿಂತನೆಗಳ ಬೀಜ ಬಿತ್ತುವ ಕಳವಳಕಾರಿ ವಿದ್ಯಮಾನಗಳು ನಡೆಯುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಎನ್ ನಾಗಮೋಹನ್ ದಾಸ್ ಮಾತನಾಡಿ ನಾಗರೀಕತೆ ಬೆಳೆದಂತೆ ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ಸಾಧಿಸಲು ಸಾಧ್ಯವಾಗಲಿಲ್ಲ. ಮಹಿಳೆ ಪ್ರವೇಶ ಮಾಡದ ಕ್ಷೇತ್ರ ಭಾರತದಲ್ಲಿ ಇಲ್ಲ ಆದರೂ ಮಹಿಳೆಯರು ನ್ಯಾಯಾಲಯದ ಹೊರಗೆ ಮತ್ತು ಒಳಗೆ ಹೋರಾಟವನ್ನು ಮಾಡಬೇಕಾದ ಸಂದರ್ಭ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಜಾರಿಯಾಗಿ 73 ವರ್ಷಗಳಾದರೂ ಮಹಿಳೆ  ರಾಷ್ಟ್ರಪತಿಯಾಗಿ ಪ್ರಧಾನಮಂತ್ರಿಯಾಗಿ ಮುಖ್ಯಮಂತ್ರಿಯಾದರೂ ಶೋಷಣೆ ದಬ್ಬಾಳಿಕೆ ಕಡಿಮೆಯಾಗಿಲ್ಲ ಇದರ ವಿರುದ್ದ ಧ್ವನಿ ಎತ್ತಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಮಹಿಳೆ ಬೆಳೆದಿದ್ದಾಳೆ.  ಮಹಿಳೆಗೆ ಮಾನಸಿಕ ಕಿರುಕುಳ, ಅಸಮಾನತೆ, ತೊಲಗಿಸಿ  ಬುದ್ಧಿಶಕ್ತಿಗೆ ಅನುಗುಣವಾಗಿ ಸಮಾಜಿಕ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ ನೀಡಬೇಕಾಗಿದೆ.

ಇದರ ಜೊತೆಗೆ ಘನತೆಯುಕ್ತ ಬದುಕಿಗೆ ದಾರಿ ಮಾಡಕೊಟ್ಟು ಹೆಣ್ಣು ಮತ್ತು ಗಂಡು ಸಮಾನರು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡುವಂತಾಗಬೇಕು. ಅಸಮಾನತೆ ಮತ್ತು ಶೋಷಣೆ ತಡೆಯಲ್ಲು ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಎಂಎಲ್ಸಿ ಇಂಚರ ಗೋವಿಂದರಾಜು, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್ ಹೊಸಮನಿ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು, ಮಾಜಿ ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯ ಮಧುಸೂದನ್, ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಷ್, ಸಮಾಜಸೇವಕ ಲಕ್ಷ್ಮಣಗೌಡ, ಪುಸ್ತಕಗಳ ಲೇಖಕರಾದ ವಿಶ್ವ ಕುಂದಾಪುರ, ಸತೀಶ್, ಡಾ.ಭಾರತೀದೇವಿ, ಸಂಘಟಕರಾದ  ಎಸ್ ಸತೀಶ್, ಶಿವಪ್ಪ, ಧನರಾಜ್, ರತ್ನಮ್ಮ, ಶಾಂತಮ್ಮ ಮುಂತಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!