• Sun. May 19th, 2024

ಅರಾಭಿಕೊತ್ತನೂರು ಕ್ಲಸ್ಟರ್‌ನ ತಾಲ್ಲೂಕು ಮಟ್ಟದ ಕಲಿಕಾ ಹಬ್ಬದ ಸಮಾರೋಪ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಿ, ಸಂಭ್ರಮದ ಕಲಿಕೆಗೆ ಸಹಕಾರಿ-ಪ್ರದೀಪ್‌ಕುಮಾರ್

PLACE YOUR AD HERE AT LOWEST PRICE

 

ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದರ ಜತೆಗೆ ಸಂಭ್ರಮದಿAದ ಕಲಿಕೆಗೆ ಮಾರ್ಗದರ್ಶನ ನೀಡುವ ಕಲಿಕಾ ಹಬ್ಬ ಪಠ್ಯ,ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೆಚ್ಚುಸುವಲ್ಲಿ ಸಹಕಾರಿಯಾಗಿದೆ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ತಿಳಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯನಡೆದ ತಾಲ್ಲೂಕು ಮಟ್ಟದ ಕ್ಲಸ್ಟರ್ ವ್ಯಾಪ್ತಿಯ ಕಲಿಕಾ ಹಬ್ಬದ ಸಮಾರೋಪದಲ್ಲಿ ಅವರು ಮಾತನಾಡುತ್ತಿದ್ದರು. ಎರಡು ದಿನಗಳ ಕಲಿಕಾ ಹಬ್ಬ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚುಸುವಲ್ಲಿ ಪರಿಣಾಮಕಾರಿಯಾಗಿದೆ, ತರಗತಿ ಕೋಣೆಯಲ್ಲಿ ಒತ್ತಡಮುಕ್ತವಾಗಿ ಸಂಭ್ರಮದಿAದ ಕಲಿಯಬಹುದು ಎಂಬುದನ್ನು ಸಾಕ್ಷೀಕರಿಸಿದೆ. ಪಠ್ಯ ಕಲಿಕೆಗೆ ನಿರಾಸಕ್ತಿ ತೋರುವ ಮಕ್ಕಳಲ್ಲಿ ಸಡಗರದಿಂದ ಕಲಿಯಲು ಆಸಕ್ತಿ ಹೆಚ್ಚಿಸಲು ಪ್ರೋತ್ಸಾಹ ನೀಡುವಲ್ಲಿ ಯಶಸ್ವಿಯಾಗಿದ್ದು, ಮಕ್ಕಳಲ್ಲಿ ಜೀವನ ಕೌಶಲ್ಯ ವೃದ್ದಿಗೂ ಸಹಕಾರಿಯಾಗಿದೆ ಎಂದರು.

ಕಲಿಕಾ ಹಬ್ಬದಲ್ಲಿ ೪ ನೇ ತರಗತಿಯಿಂದ ೯ನೇ ತರಗತಿವರೆಗಿನ ೧೫ ಶಾಲೆಗಳ ಒಟ್ಟು ೧೨೦ ಮಕ್ಕಳು ಪಾಲ್ಗೊಂಡಿದ್ದಾರೆ, ಹಾಡು-ಆಡು, ವೈಜ್ಞಾನಿಕ ಮಾಹಿತಿ ನೀಡುವ ಮಾಡು-ಆಡು, ಸೃಜನಶೀಲತೆ ಬೆಳೆಸುವ ಕಾಗದ-ಕತ್ತರಿ, ಜ್ಞಾನಾಭಿವೃದ್ದಿಗೆ ಊರು ಸುತ್ತೋಣ ಎಂಬ ನಾಲ್ಕು ಹಂತಗಳಲ್ಲಿ ಕಲಿಕಾ ಹಬ್ಬ ನಡೆದಿದ್ದು, ಮಕ್ಕಳು ಅತ್ಯಂತ ಸಂಭ್ರಮದಿAದ ಪಾಲ್ಗೊಂಡಿದ್ದರು. ಇದು ಮಕ್ಕಳಲ್ಲಿ ನವಚೈತನ್ಯ ಮೂಡಿಸಲು ಸಹಕಾರಿಯಾಗಿದೆ ಎಂದರು.

ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸೌಮ್ಯಲತಾ ಮಾತನಾಡಿ, ತರಗತಿ ಕೋಣೆಯಲ್ಲೂ ಹಬ್ಬದ ವಾತಾವರಣದಲ್ಲಿ ಪ್ರತಿದಿನ ಮಕ್ಕಳು ಕಲಿಯುವಂತೆ ಮಾಡಿದ್ದೇವೆ ಎಂಬ ಸಂದೇಶವನ್ನು ಸಮುದಾಯಕ್ಕೆ ತಲುಪಿಸಲು ಈ ಕಾರ್ಯಕ್ರಮ ಯಶಸ್ವಿಯಾಗಿದೆ, ಒತ್ತಡದ ಕಲಿಕೆ ಬೇಡ ಸಂತಸದ ಕಲಿಕೆ ಬೇಕು ಎಂಬುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಅದು ಈಡೇರಿಸುವಲ್ಲಿ ಕಲಿಕಾ ಹಬ್ಬ ಸಫಲವಾಗಿದೆ ಎಂದ ಅವರು, ಕೋವಿಡ್ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಆದ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ಸರ್ಕಾರ ಜಾರಿಗೆ ತಂದ `ಕಲಿಕಾ ಚೇತರಿಕೆ’ಯ ಭಾಗವೇ ಕಲಿಕಾ ಹಬ್ಬವಾಗಿದ್ದು, ಮಕ್ಕಳು ಅತ್ಯಂತ ಸಂತಸದಿAದ ಪಾಲ್ಗೊಂಡಿದ್ದಾರೆ ಎಂದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎ.ಮಹೇಂದ್ರ, ಸಂಪನ್ಮೂಲ ವ್ಯಕ್ತಿಗಳಾಗಿದ್ದ ಪುಷ್ಪ, ಎನ್.ನಾರಾಯಣಸ್ವಾಮಿ, ವೆಂಕಟರೆಡ್ಡಿ, ಶಿಕ್ಷಕರಾದ ಸಿದ್ದೇಶ್ವರಿ,
ಗೋಪಾಲಕೃಷ್ಣ, ಶ್ವೇತಾ, ಸುಗುಣಾ, ಫರೀದಾ, ಲೀಲಾ, ಚೈತ್ರಾ, ವಿವಿಧ ಶಾಲೆಗಳ ಶಿಕ್ಷಕರಾದ ಇಬ್ರಾಹಿಂ, ಪದ್ಮಾವತಿ, ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!