• Fri. Mar 1st, 2024

ಎಂ.ರಾಮಕೃಷ್ಣ ಪಿಡಿಒಗಳ ರಾಜ್ಯ ಕ್ಷೇತ್ರಮಾಭಿವೃದ್ಧಿ ಸಂಘದ ವಿಭಾಗೀಯ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

PLACE YOUR AD HERE AT LOWEST PRICE

 

ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಬೆಂಗಳೂರು ವಿಭಾಗೀಯ ಉಪಾಧ್ಯಕ್ಷರಾಗಿ ಕೋಲಾರದ ಪಿಡಿಒ ಎಂ.ರಾಮಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ನೋಂ) ಬೆಂಗಳೂರು ಇದರ ಚುನಾವಣಾ ದಿನಾಂಕದಿoದ ಮುಂದಿನ ಮೂರು ವರ್ಷಗಳ ಅವಧಿಗೆ ರಾಜ್ಯ ಸಮಿತಿ ನಿರ್ದೇಶಕರ ಚುನಾವಣೆಯು ನಡೆದಿದ್ದು. ಬೆಂಗಳೂರು ವಿಭಾಗೀಯ ಉಪಾಧ್ಯಕ್ಷರ ಹುದ್ದೆಗೆ ಪಿಡಿಒ ಎಂ.ರಾಮಕೃಷ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜ್ಯ ಸಮಿತಿಯ ೧೬ ಜನರ ಕಾರ್ಯಕಾರಿ ನಿರ್ದೇಶಕರ ಮಂಡಳಿಯಲ್ಲಿ ಪಿ.ರಾಮಕೃಷ್ಣ ಒಬ್ಬರಾಗಿದ್ದು, ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ತಮ್ಮ ಅವಿರೋಧ ಆಯ್ಕೆಗೆ ಸಹಕರಿಸಿದ ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಪಿಡಿಒಗಳು ಹಾಗೂ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ರಾಮಕೃಷ್ಣ, ಜಿಲ್ಲೆಯ ಪಿಡಿಒಗಳ ವೃತ್ತಿಗೆ ಸಂಬoಧಿಸಿದ ಯಾವುದೇ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂಧಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!