PLACE YOUR AD HERE AT LOWEST PRICE
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ನವ ಭಾರತ ನಿರ್ಮಾಣಕ್ಕಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಿಜೆಪಿಯೇ ಭರವಸೆ ಎಂಬ ಸಂಕಲ್ಪದೊಂದಿಗೆ ಮನೆ ಮನೆಗೂ ಬೇಟಿ
ನೀಡಿ ಸದಸ್ಯತ್ವವನ್ನು ಮಾಡಲಾಗುತ್ತಿದೆ ಎಂದು ಕೆಜಿಎಫ್ ವಿಸ್ತಾರಕ್ ಲೋಕಿತ್ ನಾಯ್ಡು ಹೇಳಿದರು.
ಬೇತಮಂಗಲದ ಹೊಸ ಬಡಾವಣೆಯಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರೊಂದಿಗೆ ಮನೆ-ಮನೆಗೂ ಬೇಟಿ ನೀಡಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸಿ, ಬಿಜೆಪಿಯೇ ಭರವಸೆ ಎಂಬ ಸ್ಟಿಕ್ಕರ್‌ಗಳನ್ನು ಪ್ರತಿಯೊಂದು ಮನೆ ಮೇಲೆ ಅಂಟಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ವಿಜಯ ಸಂಕಲ್ಪ ಅಭಿಯಾನ ಅಡಿಯಲ್ಲಿ ತಾಲೂಕಿನ ಪ್ರತಿ ಬೂತ್ ಮಟ್ಟದಲ್ಲಿ ಇತ್ತೀಚಿಕೆ ಬೂತ್ ಅಭಿಯಾನ
ಕೈಗೊಂಡಿದ್ದೆವು, ಇದೀಗ ಮನೆ-ಮನೆಗೂ ಬೇಟಿ ನೀಡಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸಿ ಕರ ಪತ್ರ ವಿತರಿಸಿ,
ಸ್ಟಿಕ್ಕರಿಂಗ್ ಅಂಟಿಸಲಾಗುತ್ತಿದೆ ಎಂದರು.
ಪ್ರತಿ ಮನೆಗೂ ಬೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅಭಿಮಾನದಿಂದ ಅವರ ವಾಹನಗಳ ಮೇಲೆ ಸ್ಟಿಕ್ಕರಿಂಗ್
ಅಂಟಿಸಲು ಕೋರಿದ್ದು ಪಕ್ಷದ ಕಾರ್ಯಕರ್ತರಲ್ಲಿ ಮತ್ತಷ್ಟು ಖುಷಿ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಆರ್.ಹೇಮಾರೆಡ್ಡಿ, ಯುವ ಮೋರ್ಚಾ ಅಧ್ಯಕ್ಷ ಅರುಣ್
ಹೀರೆಮಠ್, ಎಸ್ಸಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ, ಹೋಬಳಿ ಅಧ್ಯಕ್ಷ ಸತೀಶ್, ಖಜಾಂಚಿ ಪ್ರವೀಣ್ ರೆಡ್ಡಿ, ಅಶ್ವಥ್ ಮೊದಲಾದವರಿದ್ದರು.