• Sat. Apr 27th, 2024

ಸುಂದರಪಾಳ್ಯ ಪಬ್ಲಿಕ್ ಶಾಲೆಗೆ 2 ಕೋಟಿ ಅನುದಾನ:ಶಾಸಕಿ ಡಾ.ರೂಪಕಲಾ.

PLACE YOUR AD HERE AT LOWEST PRICE

ಕರ್ನಾಟಕ ಪಬ್ಲಿಕ್ ಶಾಲೆಗೆ 2 ಕೋಟಿ., ರೂ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲೇ   ಕಾಮಗಾರಿ  ಪೂರ್ಣಗೊಳಿಸಿ ಲೋಕಾರ್ಪಣೆ ಗೊಳಿಸಲಾಗುವುದೆಂದು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಹೇಳಿದರು.
ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಪಬ್ಲಿಕ್  ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಯುವ ಸೌರಭ ಸಾಂಸ್ಕೃತಿಕ  ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಹೋಬಳಿ ಕೇಂದ್ರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಬಡವರು
ಉನ್ನತ ವಿದ್ಯಾಭ್ಯಸ ಪಡೆದುಕೊಳ್ಳಲು ಸಹಕಾರಿಯಾಗಿದ್ದು, ಈ ಕಾಲೇಜಿನಲ್ಲಿ ದಾಖಲಾತಿ ಹೆಚ್ಚಳವಾಗುತ್ತಿದ್ದು, ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು 2 ಕೋಟಿ ರೂ., ಅನುದಾನ ಮಂಜೂರು ಮಾಡಲಾಗಿದೆ ಎಂದರು.
 ವಿದ್ಯಾರ್ಥಿಗಳಲ್ಲಿ ವಿವಿಧ ಪ್ರತಿಭೆಗಳು ಅಡಗಿರುತ್ತವೆ ಅವುಗಳನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಿದರೆ ಮಾತ್ರ
ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜನಪದ ಕಲೆ, ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿ  ಬೆಳೆಸಿ, ಪ್ರೋತ್ಸಾಹಿಸಿದರೆ ಮಾತ್ರ ಮುಂದಿನ ಪೀಳಿಗೆಗೆ
ಕನ್ನಡವನ್ನು ಮತ್ತು ಜನಪದದೊಳಗಿನ ಸಾರಂಶವನ್ನು ಎತ್ತಿಹಿಡಿಯಲು ಸಾಧ್ಯವಾಗುತ್ತದೆ ಎಂದರು.
ಜನಪದ ಮತ್ತು ಕಲೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ ಪೂರ್ವಜರಿಂದಲೂ ಉಳಿಯುತ್ತಾ ಬಂದಿದೆ. ಹಿಂದೆ ಕಲೆಗಳ, ಜನಪದಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಮಕ್ಕಳಲ್ಲಿ ಕಲೆ, ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುತ್ತದೆ ಇಂತಹ ಮಕ್ಕಳನ್ನು ಪ್ರೋತ್ಸಾಹಿಸಬೇಕು, ಅವರು ಹೆಚ್ಚಾಗಿ ಪೊಲ್ಗೋಂಡು ಅವರಲ್ಲಿ ಅಡಗಿರುವ
ಪ್ರತಿಭೆಯನ್ನು ಶಿಕ್ಷಕರೂ ಗುರುತಿಸುವಂತಾಗಬೇಕೆಂದರು.
ಕನ್ನಡ ಸಂಸ್ಕೃತಿ ಇಲಾಖೆಯಿಂದ ಬಂದಿದ್ದ ಅನೇಕ ಕಲಾ ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಬೆಳಗ್ಗೆಯಿಂದ ವಿದ್ಯಾರ್ಥಿಗಳು ಜನಪದ, ಸಂಸ್ಕೃತಿ  ಪರಂಪರೆಯ ಕಲೆಯಗಳನ್ನು ಕಂಡು ಜಾಗೃತರಾದರು.
 ತಲ್ಲಪಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ಎಂ.ವಿಶ್ವನಾಥ್ ,ತಲ್ಲಪ್ಪಲ್ಲಿ ಯಲ್ಲಿ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ತಮ್ಮ ಮಕ್ಕಳನ್ನೂ ಸರ್ಕಾರಿ ಶಾಲೆಯಲ್ಲಿ ಓಧಿಸುತ್ತಿದ್ದು, ಇವರ ಸೇವೆಯನ್ನು ಗುರುತಿಸಿದ ಗ್ರಾಪಂ ಅಧ್ಯಕ್ಷ ಡಾ.ರಾಂಬಾಬು ಅವರು ಶಾಸಕಿ ಎಂ.ರೂಪಕಲಾ ಮೂಲಕ ನೆನಪಿನ ಕಾಣಿಗೆ ನೀಡಿ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರಾಂಬಾಬು, ಉಪಾಧ್ಯಕ್ಷೆ ರತ್ನಮ್ಮ, ಕಾಲೇಜು ಪ್ರಾಂಶುಪಾಲ ಮಂಜುನಾಥ್, ಉಪ ಪ್ರಾಂಶುಪಾಲ ಪರಮೇಶ್, ಪಿಡಿಒ ಏಜಾಜ್, ಶಾಲಾ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್, ಗ್ರಾಪಂ ಸದಸ್ಯರಾದ ರಾಧಕೃಷ್ಣ, ಮುನಿಸ್ವಾಮಿ ರೆಡ್ಡಿ, ಪ್ರಸಾದ್, ಶ್ರೀನಿವಾಸ್, ಅಪ್ರೋಜ್, ವೆಂಕಟ್ರಾಮ್, ಇಲಿಯಾಜ್, ಮುಖಂಡರಾದ ಕೃಷ್ಣಮೂರ್ತಿ, ರಿಜ್ವಾನ್, ಅರ್ಷಬ್, ನಾಗರಾಜ್‍ಗೌಡ, ತಾಪಂ ಮಾಜಿ ಸದಸ್ಯ ಜಯರಾಮ ರೆಡ್ಡಿ, ವೆಂಕಟ್ರಾಮ್, ಗೋಪೇನಹಳ್ಳಿ ಮುರಳಿ, ಎಂಬಿಎ ಕೃಷ್ಣಪ್ಪ, ಕಮಲೇಶ್, ಕೆಜಿಎಫ್ ಮಾಜಿ ನಗರಸಭೆ ಅಧ್ಯಕ್ಷ ರಮೇಶ್ ಜೈನ್, ಕೆಪಿಸಿಸಿ ಸದಸ್ಯ ಶ್ರೀನಿವಾಸ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!