• Sat. Jul 27th, 2024

PLACE YOUR AD HERE AT LOWEST PRICE

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನವಭಾರತ ನಿರ್ಮಾಣಕ್ಕಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಬಿಜೆಪಿಯ ಭರವಸೆ ಎಂಬ ಸಂಕಲ್ಪದೊಂದಿಗೆ ಮನೆ ಮನೆಗೂ ಭೇಟಿ ನೀಡಿ ಸದಸ್ಯತ್ವವನ್ನು ಮಾಡಲಾಗುತ್ತಿದೆ ಎಂದು  ಕಮ್ಮಸಂದ್ರ ಗ್ರಾಪಂ ಅದ್ಯಕ್ಷ ಹಾಗೂ ಬಿಜೆಪಿ ಟಿಕೇಟ್ ಆಕಾಂಕ್ಷಿ ಬಿ. ಸುರೇಶ್  ಹೇಳಿದರು.
ಕೆಜಿಎಫ್ ತಾಲ್ಲೂಕು ಹುಲ್ಕೂರು ಗ್ರಾಪಂ ವ್ಯಾಪ್ತಿಯ ವೆಂಕಟಾಪುರ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಮನೆ ಮನೆಗೂ ಬೇಟಿ ನೀಡಿ ಸದಸ್ಯತ್ವ ಮಾಡಿ ಪ್ರತಿ ಮನೆಗೂ ಕಂಬಳಿ ವಿತರಿಸಿ ಪ್ರತಿ ಮನೆಯ ಬಾಗಿಲಿಗೂ ಪಕ್ಷದ ಗುರುತಿನ ಸ್ಟಿಕರ್‌ಗಳನ್ನು ಅಂಟಿಸುವುದರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕು ಮಟ್ಟದಲ್ಲಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಮಾಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ರವರು ಮಾಡಿರುವ ಸಾದನೆಗಳ ಬಗ್ಗೆ ವಿವರಿಸಿದ ಅವರು, ನಾನು ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದು ಮುಂದಿನ ದಿನಗಳಲ್ಲಿ ಪಕ್ಷವು ಟಿಕೇಟ್ ನೀಡಿದರೆ ಚುನಾವಣೆಯಲ್ಲಿ ಸ್ಪರ್ದಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಜಯರಾಮರೆಡ್ಡಿ, ಮುಖಂಡರಾದ ಶಿವಾ ರೆಡ್ಡಿ, ಗಂಗಾಧರ್, ಭಾಸ್ಕರ್, ವೆಂಕಟೇಶ್, ನಾಗರಾಜ್, ವೆಂಕಟರಮಣ, ವೇಣು, ಗಣೇಶ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!