• Fri. May 3rd, 2024

ಕೋಲಾರ I ದೊಡ್ಡಹಸಾಳದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ – ಕೋಲಾರ ಜನ ಹುಲಿ-ಟಗರಿಗೆ ಹೆದರಲ್ಲ- ಎಂಎಲ್ಸಿ ಇಂಚರ ಗೋವಿಂದರಾಜು

PLACE YOUR AD HERE AT LOWEST PRICE

ಕೋಲಾರ ಕ್ಷೇತ್ರದ ಜನ ಹುಲಿ, ಟಗರಿಗೆ ಹೆದರುವುದಿಲ್ಲ ಎಂದು ಸಿದ್ದರಾಮಯ್ಯ, ವರ್ತೂರು ಪ್ರಕಾಶ್ ವಿರುದ್ಧ ಜೆಡಿಎಸ್ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕೋಲಾರ ತಾಲೂಕಿನ ದೊಡ್ಡಹಸಾಳದಲ್ಲಿ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೆಡಿಎಸ್ ಕಾರ್ಯಕರ್ತರು ಯಾರೂ ಸಹ ಆತಂಕ ಪಡಬೇಕಾಗಿಲ್ಲ. ಹುಲಿ ಟಗರನ್ನು ಎದುರಿಸುವ ಬಲಿಷ್ಠ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಕೈಬಲ ಪಡಿಸಿ ಪಕ್ಷ ಅಧಿಕಾರಕ್ಕೆ ಬರಲು ಸಹಕರಿಸಬೇಕೆಂದು ಕೋರಿದರು.

ರಾಜ್ಯಕ್ಕೆ ಕೆ.ಸಿರೆಡ್ಡಿರಂತಹ ನಾಯಕರನ್ನು ಮೊದಲ ಮುಖ್ಯಮಂತ್ರಿಯಾಗಿ ನೀಡಿದ ಜಿಲ್ಲೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಕಪ್ಪು ಚುಕ್ಕೆಯಂತಾಗಿದ್ದಾರೆ ಎಂದು ಎಂಎಲ್ಸಿ ಇಂಚರ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಇದ್ದ ಗತವೈಭವ ಇಂದು ಮರುಕಳಿಸುತ್ತಿದೆ. ಬಿಜೆಪಿ ಕೋಮು ಸೌಹಾರ್ದತೆ ಕದಡುವ ಪಕ್ಷವಾಗಿದ್ದು, ಕಾಂಗ್ರೆಸ್ ಪಕ್ಷ ಒಡಕಿನ ಪಕ್ಷವಾಗಿದೆ. ಯಾವುದೇ ಗೊತ್ತುಗುರಿಯಿಲ್ಲದ ಪಕ್ಷಗಳಿಂದ ನಿಮ್ಮಗಳ ಅಭಿವೃದ್ಧಿ ಸಾಧ್ಯವಿಲ್ಲ, ಸ್ವಾಭಿಮಾನಿ, ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪಂಚರತ್ನ ಯೋಜನೆ ಮೂಲಕ ಪಣತೊಟ್ಟಿರುವುದು ಜೆ.ಡಿ.ಎಸ್.ಪಕ್ಷದಿಂದ ಮಾತ್ರ ಸಾಧ್ಯವೆಂದರು.

ಸಮಾವೇಶದ ಅಧ್ಯಕ್ಷತೆವಹಿಸಿದ್ದ ಜೆಡಿಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿದರು.

ಪಕ್ಷದ ತಾಲೂಕು ಕಾರ್ಯದರ್ಶಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ, ಜಮೀರ್ ಅಹ್ಮದ್, ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಮುಖಂಡರಾದ ವಕ್ಕಲೇರಿ ರಾಮು, ಬಾಲಾಜಿ ಚನ್ನಯ್ಯ, ಬಾಬು ಮೌನಿ, ಎಲ್.ಖಲೀಲ್, ಮುಕ್ಕಡ್ ವೆಂಕಟೇಶ್, ಮುದುವಾಡಿ ಮಂಜು, ಕುರುಬರ ಸಂಘದ ಮಾಜಿ ನಿರ್ದೇಶಕ ಅಶೋಕ್, ಚಂಬೆ ರಾಜೇಶ್, ಕಲ್ಲಹಳ್ಳಿ ಹರೀಶ್, ರಾಜೇಶ್, ತಿರುಮಲೇಶ್, ಶಶಿ, ದೊಡ್ಡಹಸಾಳ ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಕೆಂಪಣ್ಣ ಇದ್ದರು.

ಸುದ್ದಿ ಓದಿ ಹಂಚಿ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!