• Sat. Jul 27th, 2024

ದಾನ್‌ಫೌಂಡೇಷನ್‌ನಿ0ದ ಸಾಮಾಜಿಕ ಕ್ರಮದೆಡೆಗೆ ನಮ್ಮ ನಡಿಗೆ ಆಹಾರ ಪದ್ದತಿ ಕುರಿತು ಅರಿವು ನೀಡಲು ವಾಕಥಾನ್‌ಗೆ ಚಾಲನೆ

PLACE YOUR AD HERE AT LOWEST PRICE

ಮುಂದಿನ ಪೀಳಿಗೆಗೆ ಸ್ಥಳೀಯ ಆಹಾರ ಪದ್ದತಿ ಜತೆಗತೆ ನಮ್ಮ ಪರಂಪರೆ ಜತೆಗೆ ಕೌಶಲ್ಯ,ಬುದ್ದಿವಂತಿಕೆಯಿ0ದ ಸರಳತೆ,ಸ್ವಾವಲಂಬನೆಯ ಜೀವನ ವಿಧಾನಕ್ಕೆ ಪ್ರೋತ್ಸಾಹಿಸುವುದೇ ವಾಕಥಾನ್‌ನ ಧ್ಯೇಯವಾಗಿದೆ ಎಂದು ದಾನ್ ಫೌಂಡೇಷನ್‌ನ ಯೋಜನಾ ನಾಯಕ ಎನ್.ವೆಂಕಟೇಶನ್ ತಿಳಿಸಿದರು.

ನಗರದಲ್ಲಿ ಕೋಚಿಮುಲ್, ಕೆನರಾಬ್ಯಾಂಕ್, ಎಸ್‌ಬಿಐ, ಸೆಟ್ರಿಸ್ ಸಂಸ್ಥೆ ಸಹಯೋಗದಲ್ಲಿ ದಾನ್‌ಫೌಂಡೇಷನ್‌ನಿ0ದ ಹೊಸ ಸಾಮಾಜಿಕ ಕ್ರಮದ ಕಡೆಗೆ ನಮ್ಮ ನಡಿಗೆ ಎಂಬ ಉದ್ದೇಶದಿಂದ ಆಯೋಜಿಸಿದ್ದ ಸ್ವಸಹಾಯ ಸಂಘಗಳ ಮಹಿಳೆಯರ ವಾಕಥಾನ್‌ಗೆ ಚಾಲನೆ ನೀಡಿ, ನಂತರ ನಗರದ ಸ್ಕೌಟ್ಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಆರ್ಥಿಕ ಪ್ರಜಾಪ್ರಭುತ್ವ ಐಕ್ಯತೆ, ಸಮಾನತೆ, ನೈತಿಕತೆಯ ಉನ್ನತ ಕ್ರಮದೊಂದಿಗೆ ಸಮಾಜ ಸ್ಥಾಪನೆಗೆ ಪ್ರತಿಯೊಬ್ಬರು ಜವಾಬ್ದಾರರಾಗಬೇಕು ಎಂದು ತಿಳಿಸಿದರು. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ ಮಾತನಾಡಿ, ಆಹಾರ ಪದ್ದತಿ ಕುರಿತು ತಿಳಿಸಿಕೊಟ್ಟು, ಮನೆಯಂಗಳದಲ್ಲಿ ಕೈತೋಟ ಮಾಡಿಕೊಂಡು ಒಳ್ಳೆಯ ರಸಾಯನಿಕ ಮುಕ್ತ ತರಕಾರಿ ಬೆಳೆಯಬಹುದು, ಮಕ್ಕಳಿಗೆ ಜಂಕ್ ಫುಡ್ ನೀಡದೇ ತರಕಾರಿಗಳನ್ನು ತಿನ್ನಿಸುವುದನ್ನು ಕಲಿಸಿರಿ ಸಾವಯವ ಗೊಬ್ಬರಹಾಕಿದ ತರಕಾರಿ ಬಳಕೆಗೆ ಒತ್ತು ನೀಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಕೆ.ತುಳಸಿರಾಮ್, ಸ್ವಸಹಯ ಸಂಘಗಳ ಸದಸ್ಯರು ಸಿರಿಧಾನ್ಯಗಳನ್ನು ಬೆಳೆಯಲು ಒತ್ತು ನೀಡಬೇಕು, ಈ ಕುರಿತು ತರಬೇತಿ ನೀಡಲು ನಾವು ಸಿದ್ದರಿದ್ದೇವೆ, ಸೊಪ್ಪು ತರಕಾರಿ ಸೇವಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದರು.

ಯೋಜನಾ ವ್ಯವಸ್ಥಾಪಕಿ ಹೆಚ್.ಜಿ.ರಾಘವೇಂದ್ರ,ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಯಮುನಾದೇವಿ, ದಾನ್ ಫೌಂಡೇಷನ್ ಸಂಯೋಜಕ ರಮೇಶ್ ಮತ್ತಿತರರು ಮಾತನಾಡಿದರು. ಇದೇ ಸಂದರ್ಭದಲ್ಲಿ ೧೧ ಸ್ವಸಹಾಯ ಸಂಘಗಳಿಗೆ ೮೩.೪೦ ಲಕ್ಷ ರೂ ಸಾಲ ಮಂಜೂರು ಮಾಡಲಾಯಿತು. ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿರುವ ೪ ಮಹಿಳಾ ಸ್ವಸಹಾಯ ಸಂಘಗಳ ಅಧ್ಯಕ್ಷರು,ಕಾರ್ಯದರ್ಶಿ,ಖಜಾಂಚಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಯಲಗಂ ರೈತ ಒಕ್ಕೂಟದ ಕೃಷ್ಣಪ್ಪ, ನಾರಾಯಣಸ್ವಾಮಿ, ಆಂಜನೇಯಪ್ಪ, ದಾನ್ ಪೌಂಡೇಷನ್ ನಿರ್ವಹಿಸುತ್ತಿರುವ ಚಟುವಟಿಕೆಗಳನ್ನು ಹಂಚಿಕೊ0ಡರು.

ಕಾರ್ಯಕ್ರಮದಲ್ಲಿ ನಾರಾಯಣಸ್ವಾಮಿ, ಸುನೀಲ್ ಸೇಟ್ರಿಸ್, ಶ್ರೀಕೃಷ್ಣ, ಸುರೇಶ್, ಅರಾಭಿಕೊತ್ತನೂರು ರಾಮಚಂದ್ರಪ್ಪ, ವೆಂಕಟೇಶಪ್ಪ, ನಾರಾಯಣಸ್ವಾಮಿ, ಶಂಕರಪ್ಪ, ೪ ತಾಲ್ಲೂಕುಗಳ ಒಕ್ಕೂಟದ ನಿರ್ದೇಶಕರು, ಸ್ವಸಹಾಯ ಸಂಘಗಳ ಸದಸ್ಯರು, ದಾನ್ ಫೌಂಡೇಷನ್‌ನ ಸಿಬ್ಬಂದಿ ದೇವರಾಜ್, ವಿಜಯಕುಮಾರ್, ಯೋಗೇಶ್, ಆಂಜಿನಮ್ಮ, ರವಿಚಂದ್ರ, ಶ್ವೇತಾ, ಬಾಬು ಮತ್ತಿತರರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!