• Fri. Apr 26th, 2024

ಕೋಲಾರ I ತಾವು ಓದಿದ ಶಾಲೆಗೆ ಸದನದಲ್ಲಿ ಅನುದಾನ ಕೇಳಿದ ವಿಧಾನಪರಿಷತ್‌ ಸದಸ್ಯ ಇಂದರ ಗೋವಿಂದರಾಜು

PLACE YOUR AD HERE AT LOWEST PRICE

ನೂತನ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡಕ್ಕೆ ಹೆಚ್ಚುವರಿ ೫೦ಲಕ್ಷ ಬಿಡುಗಡೆಗೆ
ಸದನದಲ್ಲಿ ಎಂಎಲ್‌ಸಿ ಗೋವಿಂದರಾಜು ಮನವಿಗೆ ಸ್ಪಂದನೆ-ಸಚಿವರ ಭರವಸೆ

ಕೋಲಾರ ನಗರದ ನೂತನ ಸರ್ಕಾರಿ ಪ್ರೌಢಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿರೂ ಬಯಲು ಸೀಮೆಯಡಿಯ ಅನುದಾನದ ಜತೆಗೆ ಇನ್ನು ೫೦ ಲಕ್ಷ ರೂ. ಬಿಡುಗಡೆ ಮಾಡುವಂತೆ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾಡಿದ ಮನವಿಗೆ ಶಿಕ್ಷಣ ಸಚಿವರು ಸ್ಪಂದಿಸಿ ಅನುದಾನ ನೀಡುವ ಭರವಸೆ ನೀಡಿದರು.

ವಿಧಾನಪರಿಷತ್‌ನಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಥಮಿಕ, ಪ್ರೌಢಶಾಲಾ ಕಟ್ಟಡಗಳ ಶಿಥಿಲಾವಸ್ಥೆ, ಕಟ್ಟಡಗಳ ಕೊರತೆ ಕುರಿತಂತೆ ಸರ್ಕಾರದ ಗಮನ ಸೆಳೆದ ಗೋವಿಂದರಾಜು ಅವರಿಗೆ ಶಿಕ್ಷಣ ಸಚಿವರು ಈ ಭರವಸೆ ನೀಡಿದರು.
ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳ ಸಂಖ್ಯೆ ಎಷ್ಟು, ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಬಗ್ಗೆ, ಶಿಥಿಲಗೊಂಡಿರುವ ಶಾಲೆಗಳನ್ನು ನವೀಕರಣಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ನವೀಕರಣಕ್ಕಾಗಿ ಮತ್ತು ನೂತನ ಕಟ್ಟಡಕ್ಕಾಗಿ ಎಷ್ಟು ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ, ಪ್ರಸ್ತುತ ಎಷ್ಟು ಶಾಲೆಗಳನ್ನು ನವೀಕರಣಗೊಳಿಸಲಾಗುತ್ತಿದೆ ಎಂದು ಸಚಿವರನ್ನು ಪ್ರಶ್ನಿಸಿದರು.

ಶಿಥಿಲಾವಸ್ಥೆಯ ಕೊಠಡಿಗಳನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಬೇಕಾಗಿದೆ ಎಂಬುದಾಗಿ ಏರು ಧ್ವನಿಯಲ್ಲಿ ಮಾತನಾಡಿದ ಗೋವಿಂದರಾಜು, ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧೭ ಶಾಲೆಯಲ್ಲಿ ೧೭೧೮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದರಲ್ಲಿ ೮೪ ಶಿಕ್ಷಕರಿದ್ದು, ಒಟ್ಟು ೯೮ ಕೊಠಡಿಗಳ ಪೈಕಿ ಸುರಕ್ಷತೆಯ ಕೊಠಡಿಗಳ ಸಂಖ್ಯೆ ೪೯, ಉಪಯೋಗಕ್ಕೆ ಯೋಗ್ಯವಲ್ಲದ ಕೊಠಡಿಗಳು ೨೩ ಎಂಬುದಾಗಿ ಸರಿಯಾದ ಉತ್ತರ ಇದು ಎಂಬುದಾಗಿ ಸಚಿವರಿಗೆ ನೇರವಾಗಿ ಹೇಳಿದರು.

ನಾನು ಓದಿದಂತ ನೂತನ ಸರ್ಕಾರಿ ಪ್ರೌಢ ಶಾಲೆ ಕೋಲಾರದ ಮಧ್ಯಭಾಗದಲ್ಲಿದೆ ಅಲ್ಲಿರುವಂತ ಕಟ್ಟಡ ಪೂರ್ಣವಾಗಿ ಕೆಡವಿ ನೂತನ ಕಟ್ಟಡ ಕಟ್ಟಬೇಕಾಗಿರುವ ಹಿನ್ನೆಲೆಯಲ್ಲಿ ಬಯಲು ಸೀಮೆ ಅಭಿವೃದ್ಧಿ ಮಂಡಳಿಯಿಂದ ನನ್ನ ಅನುದಾನದಲ್ಲಿ ಬಂದಂತ ಒಂದು ಕೋಟಿ ಹಣವನ್ನು ಈ ಶಾಲೆಯ ಮರು ನಿರ್ಮಾಣಕ್ಕಾಗಿ ಬಳಸಿಕೊಂಡಿದ್ದೇನೆ.

ಇದಕ್ಕೆ ಹೆಚ್ಚಿನ ಅನುದಾನದ ಅವಶ್ಯಕತೆ ಇರುವುದರಿಂದ ಸರ್ಕಾರ ಇನ್ನು ರೂ. ೫೦ ಲಕ್ಷ ರೂಪಾಯಿಗಳ ಅನುದಾನ ನೀಡಿದರೇ ನೂತನ ಕಟ್ಟಡ ಕಟ್ಟಬಹುದು ಇಷ್ಟು ಹಣ ಸಾಲದೇ ಬಂದರೆ ನನ್ನ ಅನುದಾನದಲ್ಲಿ ನೀಡಲು ಸಿದ್ದನಿದ್ದೇನೆ. ಆದಕಾರಣ ಸಚಿವರು ಈ ಕೂಡಲೇ ೫೦ ಲಕ್ಷ ರೂಪಾಯಿ ಅನುದಾನ ಬಿಡಗಡೆ ಮಾಡುವುದಾಗಿ ಸದನಕ್ಕೆ ತಿಳಿಸಬೇಕೆಂದು ಪಟ್ಟು ಹಿಡಿದರು, ಅದಕ್ಕೆ ಉತ್ತರಿಸಿದ ಸಚಿವರು ಅದನ್ನು ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದರು.

ಸುದ್ದಿ ಓದಿ ಹಂಚಿ:

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!