• Tue. Apr 30th, 2024

PLACE YOUR AD HERE AT LOWEST PRICE

ಕೋಲಾರ ತಾಲೂಕು ಬಿಸಿಯೂಟ ಮಾತೆಯರು ಕೋಲಾರ ಉಪ ವಿಭಾಗ ಅಽ॑ಕಾರಿ ವೆಂಕಟಲಕ್ಷ್ಮಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಹಲವು ಬೇಡಿಕೆಗಳ ಮನವಿ ಪತ್ರವನ್ನು ರವಾನಿಸಿ ೧೭ರ ಬಜೆಟ್ ನಲ್ಲಿ ಬೇಡಿಕೆಗಳು ಈಡೇರಿಸಬೇಕೆಂದು ಒತ್ತಾಯಿಸಲಾಯಿತು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮುನಿಯಪ್ಪ ರವರಿಗೆ ಹಾಗೂ ಬಿಸಿಯೂಟ ಮಾತೆಯರ ತಾಲೂಕು ಅಕ್ಷರ ದಾಸೋಹ ನಿರ್ದೇಶಕ ಸುಬ್ರಮಣ್ಯರವರೆಗೂ ಮನವಿ ಪತ್ರ ಸಲ್ಲಿಸಲಾಯಿತು.

ನಿವೃತ್ತಿಯ ನಂತರ ಜೀವನ ಸಾಗಿಸಲು ೨ ಲಕ್ಷ ರೂ. ಇಡಿ ಗಂಟು ಹಾಗೂ ಕನಿಷ್ಠ ವೇತನ ೧೦೫೦೦ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿಯನ್ನು ಪ್ರಾರಂಭಿಸಬೇಕು. ಇನ್ನು ಹಲವು ಪ್ರಮುಖ ಬೇಡಿಕೆ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಅಕಾರಿಗಳ ಮೂಲಕ ರವಾನಿಸಲಾಯಿತು.

ಕೋಲಾರ ತಾಲೂಕು ಬಿಸಿಊಟ ಮಾತೆಯರಾದ ಕೋಲಾರ ಮಮತಾ ವಕ್ಕಲೇರಿ ನಾಗವೇಣಮ್ಮ, ಸುಗುಟೂರು ಶೋಭಮ್ಮ, ಜಯಂತಿ, ಆಶಾ, ರಾಧಮ್ಮ, ಮಂಜುಳಾ, ಆರತಿ, ಪದ್ಮಮ್ಮ, ರಾಜಮ್ಮ, ಸುನಂದಮ್ಮ, ರಮಾದೇವಿ, ವಿಜಯಲಕ್ಷ್ಮಿ, ವಿಜಯಮ್ಮ, ಚಿನ್ನಾಪುರ ಭಾಗ್ಯ, ಅಮನಲ್ಲೂರು ವೀಣಮ್ಮ ಚೋಳಘಟ್ಟ ಯಶೋಧ ನಾಗರತ್ನಮ್ಮ ಈ ಹೋರಾಟವನ್ನು ಬೆಂಬಲಿಸಿದ ರೈತನಾಯಕ ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಯುವ ಘಟಕ ಅಧ್ಯಕ್ಷ ಕಲ್ವ ಮಂಜಲಿ ರಾಮು ಶಿವಣ್ಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಕೋಲಾರ ತಾಲೂಕ ಅಧ್ಯಕ್ಷ ಜಗನ್ನಾಥ್‌ರೆಡ್ಡಿ, ದೊಡ್ಡ ಕುರುಬರಹಳ್ಳಿ ಶಂಕರಪ್ಪ, ಚಂದ್ರಪ್ಪ ಇನ್ನು ಮುಂತಾದವರು ಭಾಗವಹಿಸಿದ್ದರು.

ಸುದ್ದಿ ಓದಿ ಹಂಚಿ:

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!