• Tue. Apr 23rd, 2024

ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘ ಒತ್ತಾಯ ತಾಂತ್ರಿಕ ವೇತನ ಶ್ರೇಣಿ ನಿಗದಿಗೆ ವೇತನ ಆಯೋಗಕ್ಕೆ ಮನವಿ

PLACE YOUR AD HERE AT LOWEST PRICE

ಕರ್ನಾಟಕ ರಾಜ್ಯ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ಕೋಲಾರ ಹಾರೂ ರಾಜ್ಯ ಸಂಘದ ಪ್ರತಿನಿಗಳು ೭ನೇ ವೇತನ ಆಯೋಗ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ, ತಾಂತ್ರಿಕ ವೇತನ ಶ್ರೇಣಿ ನಿಗದಿಗೆ ಮನವಿ ಮಾಡಲಾಯಿತು.

ರಾಜ್ಯಾಧ್ಯಕ್ಷ ಶ್ರೀಕಂಠ, ಮಾತನಾಡಿ, ೭ನೇ ವೇತನ ಆಯೋಗ ನೌಕರರಿಂದ ವೇತನ ಸಮಸ್ಯೆಗಳಿಗೆ ಸಂಬಂಽಸಿದಂತೆ ಸಲಹೆಗಳನ್ನು ಆಹ್ವಾನಿಸಿರುವ ಹಿನ್ನಲೆಯಲ್ಲಿ ಭೂಮಾಪಕರ ಸಂಘ ಈ ಮನವಿ ಸಲ್ಲಿಸಿದ್ದು, ನಮ್ಮ ಸೇವೆ, ಪರಿಶ್ರಮ ಪರಿಗಣಿಸಿ ತಾಂತ್ರಿಕ ವೇತನ ಶ್ರೇಣಿ ನಿಗದಿಗೆ ಆಗ್ರಹಿಸಿದ ನೌಕರರು, ಸರ್ಕಾರಿ ರಜೆಗಳಿದ್ದರೂ ಪರಿಗಣಿಸದೇ ಪ್ರತಿ ತಿಂಗಳು ೨೩ ಕಡತಗಳ ಮಾಸಿಕ ಗುರಿ ನಿಗಪಡಿಸಿರುವುದರಿಂದ ಈ ನೌಕರಗೆ ಉಂಟಾಗುವ ಮಾನಸಿಕ ಶ್ರಮ ಪರಿಗಣಿಸಿ ಕೇಂದ್ರ ಸರ್ಕಾರದ ಮಾದರಿಯಲ್ಲಿ ಹಾರ್ಡ್‌ಷಿಫ್ ಅಲೋಯನ್ಸ್ ನೀಡಲು ಕೋರಿದರು.

ಕೇರಳ,ತಮಿಳುನಾಡು, ಆಂಧ್ರ,ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ನೀಡುತ್ತಿರುವ ವೇತನಕ್ಕೆ ಸಮಾನವಾಗಿ ವೇತನ ನಿಗ ಮಾಡಿ, ಅಲ್ಲಿನ ರೀತಿ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಮನವಿ ಮಾಡಿದರು.

ಭೂಮಾಪನಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಬಿಇ, ಬಿಟೆಕ್, ಎಂಇ, ಎಂಟೆಕ್, ಎಲ್‌ಎಲ್‌ಬಿ, ಬಿಎಸ್ಸಿ ಮುಂತಾದ ವೃತ್ತಿ ನೈಪುಣ್ಯತೆಗೆ ಪೂರಕವಾದ ಪದವಿ ಹೊಂದಿದ್ದಲ್ಲಿ ಅಂತಹ ನೌಕರರಿಗೆ ಉನ್ನತ ವಿದ್ಯಾರ್ಹತೆ ಪ್ರೋತ್ಸಾಹಧನವನ್ನು ಆರೋಗ್ಯ ಇಲಾಖೆಯಲ್ಲಿ ನೀಡುತ್ತಿರುವಂತೆ ಒದಗಿಸಲು ಕೋರಿದರು.

ನೌಕರರಿಗೆ ಮೊಬೈಲ್,ಟ್ಯಾಬ್ ನೀಡಿ ಮಾಸಿಕ ಮೊಬೈಲ್ ದೂರವಾಣಿ ಭತ್ಯೆ ೫೦೦ ರೂ ನಿಗದಿ ಮಾಡಿ, ಭೂಮಾಪಕರಿಗೆ ನಿಗತ ಪ್ರಯಾಣಭತ್ಯೆ ೪೬೫೦ ರೂಗೆ ಹೆಚ್ಚಿಸಿ, ಇಲಾಖೆಯಲ್ಲಿ ಕರ್ತವ್ಯದಲ್ಲಿ ಮೃತರಾದರೆ ೫ ಲಕ್ಷ ಪರಿಹಾರ ನೀಡಿ, ಹೊರಗುತ್ತಿಗೆ ಬಾಂಡ್ ಜವಾನರನ್ನು ತೆಗೆದು ಡಿ ಗ್ರೂಪ್ ಹುದ್ದೆ ಭರ್ತಿಗೆ ಮನವಿ ಮಾಡಲಾಯಿತು.

ನಗರ ಮಾಪನ ನಿರ್ದೇಶನಾಲಯ ಸ್ಥಾಪನೆ, ಐಟಿ ಸೆಲ್ ಮಾಡಿ, ಮಹಿಳೆಯರ ಸುರಕ್ಷತೆ ಹಿನ್ನಲೆಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಕಚೇರಿ ಕಾರ್ಯಗಳಿಗೆ ಬಳಸಿಕೊಳ್ಳಲು ಮನವಿ ಮಾಡಲಾಯಿತು.

ಮನವಿ ನೀಡಿಕೆ ಸಂದರ್ಭದಲ್ಲಿ ಆಭೂಮಾಪನಾ ಇಲಾಖೆ ಅಪರ ನಿರ್ದೇಶಕ ಸಿ.ಎನ್.ಶ್ರೀಧರ್ ಐಎಎಸ್, ಕರ್ನಾಟಕರಾಜ್ಯ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷರೂ ಹಾಗೂ ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಭೂಮಾಪನಾ ರಾಜ್ಯ ಸಂಘದ ಸಂಚಾಲಕ ರಂಗಸ್ವಾಮಿ, ಜಂಟಿಕಾರ್ಯದರ್ಶಿ ಚೇತನ್ ಮಧುರೆ, ಬೆಂಗಳೂರು ವಿಭಾಗದ ಉಪಾಧ್ಯಕ್ಷ ವೀರಭದ್ರಪ್ಪ, ಪದಾಕಾರಿಗಳಾದ ದೇವರಾಜ್, ಭಾಣುಪ್ರಕಾಶ್, ಡೇವಿಡ್,ರವಿಕುಮಾರ್ ಮತ್ತಿತರರಿದ್ದರು.

ಸುದ್ದಿ ಓದಿ ಹಂಚಿ:

Related Post

ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ
ಕೋಲಾರ ಮೀಸಲು ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರ ಮಾಡುತ್ತೇನೆ ಎಂದ ವರ್ತೂರು ಪ್ರಕಾಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು – ದಲಿತ್ ನಾರಾಯಣಸ್ವಾಮಿ ಅಕ್ರೋಶ

Leave a Reply

Your email address will not be published. Required fields are marked *

You missed

error: Content is protected !!