• Fri. Mar 29th, 2024

PLACE YOUR AD HERE AT LOWEST PRICE

ಶ್ರೀನಿವಾಸಪುರ:ರಾಜ್ಯ ಬಜೆಟ್‍ನಲ್ಲಿ ಮಾವು ಬೆಳೆಗಾರರಿಗೆ ಹೆಚ್ಚಿನ ಆದ್ಯತೆ ನೀಡಿ ಮಾರುಕಟ್ಟೆ ಔಷಧಿ ಹಾಗೂ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ 300 ಕೋಟಿ ಅನುದಾನ  ಮೀಸಲಿಡಬೇಕೆಂದು ರೈತಸಂಘದಿಂದ ಉಪ ತಹಸೀಲ್ದಾರ್  ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.

ಈ ವೇಳೆ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ವಿಶ್ವ ವಿಖ್ಯಾತಿ ಮಾವಿನ ನಗರಿ ಶ್ರೀನಿವಾಸಪುರ ವ್ಯಾಪ್ತಿಯಲ್ಲಿ ಅತಿ ಹೆಚ್ಚಾಗಿ ಮಾವು ಬೆಳೆದು ದೇಶ ವಿದೇಶಗಳಿಗೆ ರಫ್ತು ಮಾಡುವ ಮಾವು ಬೆಳೆಗಾರರಿಗೆ ಬಜೆಟ್‍ನಲ್ಲಿ ಅನುದಾನ ನೀಡದೇ ಇರುವುದು ವಿಷಾಧಕರ ಸಂಗತಿ ಎಂದು ಅಸಮಧಾನ ವ್ಯಕ್ತಪಡಿಸಿದರು.

ಇತ್ತೀಚೆಗೆ ಹವಾಮಾನ ವೈಫರೀತ್ಯ ಮತ್ತು ಮುಂಗಾರು ಮಳೆ ಆರ್ಭಟಕ್ಕೆ ಮಾವಿನ ಫಸಲು ಸರಿಯಾಗಿ ಬರುತ್ತಿಲ್ಲ. ಹೆಚ್ಚುತ್ತಿರುವ ರೋಗಗಳ ನಿಯಂತ್ರಣಕ್ಕೆ ಔಷಧಿ ಖರೀದಿ ಮಾಡಲು ರೈತರು ಪರದಾಡುವಂತಾಗಿದ್ದು, ಪ್ರಧಾನಮಂತ್ರಿ ಫಸಲ್ ಭಿಮಾ ವಿಮಾ ಕಂಪನಿ ಸಹ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದರು.

ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಮಾವು ಮಾರುಕಟ್ಟೆಯ ಜಾಗದ ಸಮಸ್ಯೆಯಿಂದ ಅಭಿವೃದ್ಧಿಯಾಗಿಲ್ಲ. ಕುಡಿಯುವ ನೀರಿಗೆ ಮತ್ತು ಊಟಕ್ಕೆ ಪರದಾಡುವಂತಾಗಿದೆ. ಕೂಲಿಗಾಗಿ ಬರುವ ಕಾರ್ಮಿಕರಿಗೆ ಮಾರುಕಟ್ಟೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ತೊಂದರೆಯಾಗಿದೆ.

ಮಾವು ಬೆಲೆ ಕುಸಿತವಾದಾಗ ಫಸಲನ್ನು ಸಂರಕ್ಷಣೆ ಮಾಡಲು ಮಾವು ಸಂಸ್ಕರಣಾ ಘಟಕವಿಲ್ಲ ಹಾಗೂ ಮಾವು ಆಧಾರಿತ ಕೈಗಾರಿಕೆಗಳಿಲ್ಲದೆ ಬೆಲೆ ಇಲ್ಲದಾಗ ಮಾವನ್ನು ರಸ್ತೆಗಳಲ್ಲಿ ಸುರಿಯಬೇಕಾದ ಪರಿಸ್ಥಿತಿಯಿದೆ. ಈ ಬಜೆಟ್‍ನಲ್ಲಾದರೂ ಮಾವು ಬೆಳೆಗಾರರಿಗೆ 300 ಕೋಟಿ ಅನುದಾನವನ್ನು ಮೀಸಲಿಟ್ಟು ಮಾವು ಬೆಳೆಗಾರರ ರಕ್ಷಣೆಗೆ ಸರ್ಕಾರ ನಿಲ್ಲಬೇಕೆಂದು ಒತ್ತಾಯ ಮಾಡಿದರು.

ಉಪ ತಹಸೀಲ್ದಾರ್ ಮನವಿ ಸ್ವೀಕರಿಸಿದರು. ಈ ವೇಳೆ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮುಖಂಡರಾದ ಷೇಕ್ ಶಫೀಉಲ್ಲಾ, ಆಲವಟ್ಟ ಶಿವ, ಸಂತೋಷ್, ಹರೀಶ್, ವೆಂಕಟೇಶ್, ಗಂಗಾಧರ್, ಯಲ್ದೂರು ಮೋಹನ್ ಗೌಡ, ಸಹದೇವಣ್ಣ, ವೆಂಕಟ್ ಮುಂತಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!