ಕೆಜಿಎಫ್:ತಾಲ್ಲೂಕಿನ ಕಾಲುವಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸಿಲೀಂಡರ್ ಸ್ಪೋಟಕ್ಕೆ ಮನೆ ಬಿದ್ದುಹೋಗಿ ಮನೆಯ ಯಜಮಾನ ವೆಂಕಟೇಶಪ್ಪ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಕೆಜಿಎಫ್ ತಾಲ್ಲೂಕಿನ ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿಗೆ ಸೇರಿದ ಕಾಲುವಲಹಳ್ಳಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಸಿಲೀಂಡರ್ ಸ್ಪೋಟಗೊಂಡು ಮನೆ ಕುಸಿದು ಮನೆಯ ಯಜಮಾನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸಿಲೀಂಡರ್ ಸ್ಪೋಟದ ರಭಸಕ್ಕೆ ಮನೆ ಕುಸಿದಿದ್ದು ಮನೆಯಲ್ಲಿದ್ದ ವಸ್ತುಗಳು ಚಲ್ಲಾಪಿಲ್ಲಿಯಾಗಿದ್ದವು. ಮನೆಯಲ್ಲಿದ್ದ 6ತಿಂಗಳ ಮಗುವು ಮತ್ತು ಇಬ್ಬರು ಹೆಣ್ಣು ಮಕ್ಕಳು ಅಪಾಯದಿಂದ ಪಾರಾಗಿದ್ದರು.
ಮುಂಜಾನೆ ಅಡುಗೆ ಮನೆಯಲ್ಲಿ ಲೈಟ್ ಹೊತ್ತಿಸಿದ ವೇಳೆ ಅಡುಗೆ ಅನಿಲ ಸೋರಿಕೆಯಿಂದ ಸಿಲೀಂಡರ್ ಸ್ಪೋಟಗೊಂಡು ಮನೆಯ ಯಜಮಾನ ವೆಂಕಟೇಶಪ್ಪ ಗಾಯಗೊಂಡು ಸ್ಥಳೀಯರ ನೆರವಿನಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲ್ಪಟ್ಟು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಮನೆಯ ಯಜಮಾನ ವೆಂಕಟೇಶಪ್ಪ ಮೃತಪಟ್ಟಿದ್ದಾರೆ. ಆಂಡರ್ ಸನ್ ಪೇಟೆ ಪೋಲೀಸ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.