ಕೆಜಿಎಫ್:ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಮಕ್ಕಳ ಬೆಳವಣಿಗೆಗಾಗಿ ವಿತರಿಸಬೇಕಾಗಿದ್ದ ಮಕ್ಕಳ ಪೌಷ್ಠಿಕ ಆಹಾರದ ಪ್ಯಾಕೇಟ್ ಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೇತಮಂಗಲ ಗ್ರಾಮದ ಹಳೆ ಬಡಾವಣೆಯಲ್ಲಿ ಕೋಲಾರ ತಾಲ್ಲೂಕಿನಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ವಿತರಿಸಬೇಕಾದ ಪೌಷ್ಠಿಕ ಆಹಾರದ ಸುಮಾರು 255 ಪ್ಯಾಕೇಟ್(625ಕೆ.ಜಿ)ಗಳನ್ನು ಮನೆಯಲ್ಲಿ ಮಾರಾಟ ಮಾಡುತ್ತಿರುವಾಗ ಪ್ರಕರಣ ಬೆಳಕಿಗೆ ಬಂದಿದೆ.
ಅಂಗಡಿ ಮಾಲೀಕರೊಬ್ಬರು ಕೋಲಾರ ಹಾಗೂ ಇತರೆ ಕಡೆಯಿಂದ ತಂದು 1 ಪ್ಯಾಕೇಟ್ 30ರೂಗಳಂತೆ ಹಸುಗಳ ಆಹಾರಕ್ಕಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿದ್ದು, ಸ್ಥಳದಲ್ಲಿಯೇ ಒಬ್ಬ ವ್ಯಕ್ತಿ 500ರೂಗಳಿಗೆ ಮಕ್ಕಳ ಪೌಷ್ಠಿಕ ಆಹಾರದ ಪಾಕೆಟ್ ಗಳನ್ನು ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.
ಖಾಸಗಿ ಅಂಗಡಿ ಮಾಲೀಕ ಪೌಷ್ಠಿಕ ಆಹಾರವನ್ನು ಕಡಿಮೆ ಬೆಲೆಗೆ ತಂದು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣ ಬೆಳೆಕಿಗೆ ಬರುತ್ತಿದ್ದಂತೆ ಮಗನ ಬದಲಿಗೆ ತಾಯಿ ರಾಧ ಎಂಬುವವರು ಸ್ವಯಂ ಪ್ರೇರಿತರಾಗಿ ತಮ್ಮದೆ ತಪ್ಪು ಎಂದು ಒಪ್ಪಿಕೊಂಡ ಪ್ರಸಂಗ ನಡೆದಿದೆ.
ಕೆಜಿಎಫ್ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ನಾಗರತ್ನ ಸ್ಥಳಕ್ಕೆ ಭೇಟಿ ನೀಡಿ ಪೌಷ್ಠಿಕ ಆಹಾರದ ಪಾಕೆಟ್ ಗಳನ್ನು ವಶಕ್ಕೆ ಪಡೆದು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಬೇತಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಡಿಪಿಒ ನಾಗರತ್ನ.
ಬೇತಮಂಗಲದಲ್ಲಿ ಸಿಕ್ಕಿರುವ ಮಕ್ಕಳ ಪೌಷ್ಠಿಕ ಆಹಾರ ಕೋಲಾರ ತಾಲ್ಲೂಕಿನಲ್ಲಿ ವಿತರಿಸಬೇಕಾದವುಗಳಾಗಿದೆ. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ, ಆಹಾರ ಪಾಕೆಟ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಭಟ್ರಕುಪ್ಪ ಅರುಣ್ ಕುಮಾರ್.
ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ಸೇರಬೇಕಾದ ಆಹಾರ ಪದಾರ್ಥ ಹಾಗೂ ಹಾಲಿನ ಪೌಂಡರ್ ಸಹ ಕಳ್ಳರ ಪಲಾಗುತ್ತಿದೆ, ಮಕ್ಕಳಿಗೆ ತಲುಪಬೇಕಾದ ಆಹಾರ ತಲುಪದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪೋಷಕರಿಂದ ಮಾಹಿತಿ ಪಡೆದು ತನಿಖೆ ನಡೆಸಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಭಟ್ರಕುಪ್ಪ ಅರುಣ್ ಕುಮಾರ್ ಒತ್ತಾಯಿಸಿದ್ದಾರೆ.