• Thu. Mar 28th, 2024

PLACE YOUR AD HERE AT LOWEST PRICE

ಕೆಜಿಎಫ್‍ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ  ಡಿಎಆರ್ ಆವರಣದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ವೈದ್ಯಕೀಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.

ಬೆಂಗಳೂರಿನ ಪೂರ್ವಿಕಾ ಬಯೋ ಸೈನ್ಸ್ ಮತ್ತು ಕೆಜಿಎಫ್ ಸಂಭ್ರಮ್ ಆಸ್ಪತ್ರೆಯ ಸಹಯೋಗದಲ್ಲಿ ಖ್ಯಾತ ಹೃದಯತಜ್ಞ ಡಾ||ಎಸ್.ಅರಿವಳಗನ್ ಮತ್ತು ಡಾ||ಸಂಗೀತಾರ ನೇತೃತ್ವದಲ್ಲಿ ಪೊಲೀಸರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಅವರು ಭಾಗವಹಿಸಿ, ಮೋದಲಿಗೆ ತಾವೇ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ  ನೀಡಿದರು.

ಈ ವೇಳೆ ಡಾ|| ಎಸ್.ಅರಿವಳಗನ್ ಮಾತನಾಡಿ, ಪೊಲೀಸ್ ಕೆಲಸ ಬಹಳ ಒತ್ತಡದ ಕೆಲಸ, ಅಂತಹದರಲ್ಲಿ ಪೊಲೀಸರು ಆರೋಗ್ಯದ ಕಡೆ ಗಮನ ಕೊಡುವುದು ಕಷ್ಟಕರ. ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ಆರೋಗ್ಯ ಕ್ಷೇಮಾಭಿವೃದ್ದಿಯ ಹಿತದೃಷ್ಠಿಯಿಂದ ಈ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಆರೋಗ್ಯ  ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದರು.

ಶಿಬಿರದಲ್ಲಿ ಕೆಜಿಎಫ್ ಎಸ್.ಪಿ.ಡಾ.ಧರಣಿದೇವಿ ಭಾಗವಹಿಸಿದ್ದರು. ನೂರಾರು ಮಂದಿ ಪೊಲೀಸರು ಭಾಗವಹಿಸಿದ್ದು, ಸಕ್ಕರೆ, ರಕ್ತದೊತ್ತಡ, ಇಸಿಜಿ, ಎಕೋ, ದಂತ, ಇತರೆ ಪರೀಕ್ಷೆಗಳನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಪೂರ್ವಿಕಾ ಬಯೋ ಸೈನ್ಸ್ ವತಿಯಿಂದ ಉಚಿತವಾಗಿ ಔಷಧಿಗಳನ್ನು ವಿತರಣೆ ಮಾಡಲಾಯಿತು.

 

 

Leave a Reply

Your email address will not be published. Required fields are marked *

You missed

error: Content is protected !!