• Wed. Sep 18th, 2024

PLACE YOUR AD HERE AT LOWEST PRICE

ಕೆಜಿಎಫ್:ಯುಗಾಧಿ ಹಬ್ಬದ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿನ ಬಡ ಕುಟುಂಬಗಳಿಗೆ  ಅನುಕೂಲವಾಗಲಿ ಎಂಬ ಉದ್ದೇಶದಿಂದ 60 ಸಾವಿರಕ್ಕೂ ಹೆಚ್ಚು ಆಹಾರ ಕಿಟ್‍ಗಳನ್ನು ವಿತರಿಸಲಿದ್ದು, ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ತೊಂದರೆ ನೀಡಲು ಯತ್ನಿಸುತ್ತಿದ್ದಾರಾದರೂ ಎಲ್ಲಾ ಕುಟುಂಬಗಳಿಗೆ ಕಿಟ್‍ಗಳನ್ನು ಕಾರ್ಯಕರ್ತರು ತಲುಪಿಸಲಿದ್ದಾರೆ ಎಂದು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಹೇಳಿದರು.

ಅವರು ತಾಲ್ಲೂಕಿನ ವೆಂಗಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೆಂಗಸಂದ್ರ ತಾತೇನಹಳ್ಳಿ,ದಾದೇನಹಳ್ಳಿ, ಮುಸ್ಟೂರು, ಮಲ್ಲಹಳ್ಳಿ ಗ್ರಾಮಗಳಲ್ಲಿ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆಗೊಳಿಸಿರುವ 10 ಗ್ಯಾರೆಂಟಿ ಯೋಜನೆಗಳನ್ನು ವಿವರಿಸಿ ಮಾತನಾಡಿ, ನಾನು ಶಾಸಕಿಯಾದ ನಂತರ ಕಳೆದ 5  ವರ್ಷಗಳಲ್ಲಿ ಪ್ರತಿ ಗ್ರಾಮದಲ್ಲೂ ನನ್ನ ಕೈಲಾದ ಮಟ್ಟಿಗೆ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ.

ಗ್ರಾಮಗಳಲ್ಲಿನ ಎಲ್ಲಾ ಸಮಸ್ಯೆಗಳು ಬಗೆಹರಿದಿದೆ ಎಂದು ಹೇಳಲಾರೆ ಮುಂದಿನ ದಿನಗಳಲ್ಲಿ ಮತದಾರರು ಆರ್ಶೀವಾದ ಮಾಡಿದರೆ ಖಂಡಿತವಾಗಿಯು ಗ್ರಾಮದಲ್ಲಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಪಕ್ಷದ ಮುಖಂಡರು ಗ್ರಾಮಗಳಲ್ಲಿ ಚೆಕ್ ಡ್ಯಾಂ ನಿರ್ಮೀಸುವಂತೆ ಒತ್ತಾಯ ಮಾಡಿದ ಕಾರಣ ಹಲವೆಡೆಗಳಲ್ಲಿ ಚೆಕ್ ಡ್ಯಾಂಗಳನ್ನು ನಿಮೀಸಲಾಗಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಚೆಕ್ ಡ್ಯಾಂಗಳಲ್ಲಿ ನೀರು ನಿಂತ್ತಿದ್ದರಿಂದ ಕೊಳವೆಬಾವಿಗಳಲ್ಲಿ ನೀರಿನ ಸಾಂದ್ರತೆ ಹೆಚ್ಚಾಗಿದೆ ಎಂದರು.

ಕಳೆದ 15 ವರ್ಷಗಳಿಂದ ವಿಕೋಟೆ ಬೇತಮಂಗಲ ರಸ್ತೆಯು ತೀರ ಹದಗೆಟ್ಟಿತ್ತು ರಸ್ತೆ ಅಭಿವೃದ್ದಿಪಡಿಸಲು ಗುಜುರಾತ್ ಮೂಲದ ಗುತ್ತಿಗೆದಾರ 30 ಕೋಟಿ ಗುತ್ತಿಗೆ ಪಡೆದು ರಸ್ತೆಗೆ ಡಾಂಭರಿಕರಣಗೊಳಿಸಲು ವಿಫಲರಾಗಿದ್ದರು ಆಗ ನಾನು ಅಧಿಕಾರಿಗಳ ಬೆನ್ನು ಬಿದ್ದು ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಬೇರೆ ಗುತ್ತಿಗೆದಾರನಿಗೆ ಗುತ್ತಿಗೆ ನೀಡಲಾಗಿ .ಇದೀಗ ರಸ್ತೆ ಪೂರ್ಣಗೊಂಡಿದ್ದು ಸಾರ್ವಜನಿಕರಿಗೆ ಯಾವುದೆ ತೊಂದರೆಯಾಗದಂತೆ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಲಾಗಿದೆ.

ಜಾತಿ ಆದಾಯ ಪ್ರಮಾಣ ಪತ್ರ ಪಹಣಿಗಳನ್ನು ಪಡೆಯಬೇಕಾದರೆ ಬಂಗಾರಪೇಟೆಗೆ ಹೋಗಬೇಕಿತ್ತು, ಸರ್ಕಾರದ ಮೇಲೆ ಒತ್ತಡ ಹೇರಿ ಇಲ್ಲಿಯೇ 10 ಕೋಟಿ ಅನುದಾನದಲ್ಲಿ ತಾಲ್ಲೂಕು ಕಚೇರಿಯನ್ನು ಪ್ರಾರಂಭಿಸಲಾಗಿದೆ ಕಚೇರಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. 2ಕೋಟಿ ವೆಚ್ಚದಲ್ಲಿ ತಾಲ್ಲೂಕು ಪಂಚಾಯ್ತಿ ಕಟ್ಟಡವನ್ನು ನಿರ್ಮೀಸಲಾಗಿದೆ 8 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ನಿರ್ಮೀಸಲಾಗಿದೆ ಎಂದು ಹೇಳಿದರು.

ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಗ್ಯಾಸ್ ಪೆಟ್ರೋಲ್ ಬೆಲೆ ಸಹ ಬಡವರ ಕೈಗೆಟುಕದಂತೆ ಆಗಿದೆ. ತರಕಾರಿಗಳಿಂದ ಹಿಡಿದು ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ.  ಆದ್ದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧವಾಗಿದ್ದು ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಣಿಕೆಯಲ್ಲಿ ನೀಡಲಾಗಿರುವ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದಾಕೃಷ್ಣರೆಡ್ಡಿ, ವಕೀಲ ಪದ್ಮನಾಭರೆಡ್ಡಿ, ಕೆಪಿಸಿಸಿ ಸದಸ್ಯ ದುರ್ಗಪ್ರಸಾದ, ವೆಂಗಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರಪ್ಪ, ಉಪಾಧ್ಯಕ್ಷ ರವಿಕುಮಾರ, ಮುಖಂಡರಾದ ಚಲಪತಿ, ಅಪ್ಪಾಜಿಗೌಡ, ವೆಂಕಟಾಚಲಪತಿ, ಚಂದ್ರಯ್ಯ, ಎಂ.ವಿ.ನಾರಾಯಣಪ್ಪ, ಲಕ್ಷ್ಮಿಪತಿ, ವೆಂಕಟರಾಮಪ್ಪ, ಮುರಳಿ, ಬುಜ್ಜಿ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!