• Sat. Apr 27th, 2024

PLACE YOUR AD HERE AT LOWEST PRICE

ಕೋಲಾರ ತಾಲ್ಲೂಕಿನ ಹೋಳೂರು ಹೋಬಳಿ ಬ್ಯಾಲಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಆಹಾರಧಾನ್ಯಗಳನ್ನು ಶೇಖರಣೆ ಮಾಡಿರುವುದನ್ನು ಪರಿಶೀಲಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಮೂರು ಜನರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ ಎಂದು ಕೋಲಾರ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ನಾರಾಯಣ ಐಪಿಎಸ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋಲಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರಿಗೆ ಮಾ.೯ರಂದು ರಾತ್ರಿ ಸುಮಾರು ೮-೩೦ ಗಂಟೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ರವರ ಮಾರ್ಗದರ್ಶನದಲ್ಲಿ ಕೋಲಾರ ತಾಲ್ಲೂಕು ಗ್ರಾಮಾಂತರ ಪ್ರದೇಶದ ಆಹಾರ ನಿರೀಕ್ಷಕರಾದ ಗೋವಿಂದಪ್ಪ ಹಾಗೂ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಅರಕ್ಷಕ ನಿರೀಕ್ಷಕರಾದ ಎಂ.ಜೆ.ಲೋಕೇಶ್ ಹಾಗೂ ಸಿಬ್ಬಂದಿಯವರು ಜಂಟಿ ಕಾರ್ಯಾಚರಣೆ ನಡೆಸಿ ಕೋಲಾರ ತಾಲ್ಲೂಕು ಹೋಳೂರು ಹೋಬಳಿ ಬ್ಯಾಲಹಳ್ಳಿ ಗ್ರಾಮದ ಶ್ರೀನಾಥ ಬಿನ್ ರಾಮಕೃಷ್ಣಪ್ಪರವರ ತೋಟದ ಮನೆಗೆ ದಿಢೀರ್ ಬೇಟಿ ನೀಡಿರುತ್ತಾರೆ.

 

ಬೇಟಿ ಸಮಯದಲ್ಲಿ ತೋಟದ ಮನೆ ಮತ್ತು ಅಂಗಳದಲ್ಲಿ ಅನಧಿಕೃತವಾಗಿ ಅಕ್ಕಿ, ಕಡಲೇಬೇಳೆ, ತೊಗೆರಿಬೇಳೆ, ಬೆಲ್ಲ, ಮತ್ತು ಮೈದಾ ಹಿಟ್ಟನ್ನು ಶೇಖರಣೆ ಮಾಡಿರುವುದು ಕಂಡು ಬಂದಿರುತ್ತದೆ. ಸದರಿ ಆಹಾರ ಧಾನ್ಯಗಳ ಚೀಲಗಳ ಮೇಲೆ ಕೆ.ಜಿ.ಎಫ್ ಶಾಸಕಿ ರೂಪಕಲಾ ಎಂ ಶಶಿಧರ್ ರವರ ಭಾವಚಿತ್ರಗಳಿದ್ದು, ಸದರಿ ಚೀಲಗಳನ್ನು ಪರಿಶೀಲಿಸಲಾಗಿ ಪ್ರತಿ ಚೀಲದಲ್ಲಿ ನಾಲ್ಕು ಕೆ.ಜಿ.ಅಕ್ಕಿ, ಒಂದು ಕೆ.ಜಿ.ಬೆಲ್ಲ, ೯೦೦ ಗ್ರಾಂ ತೊಗರಿಬೇಳೆ, ೯೦೦ ಗ್ರಾಂ ಕಡಲೇ ಬೇಳೆ, ಒಂದು ಕೆ.ಜಿ. ಮೈದಾ ಇದ್ದು ಇಂತಹ ೩೦೬೬ ಚೀಲಗಳು ಕಂಡು ಬಂದಿರುತ್ತದೆ. ಇದರ ಜೊತೆಗೆ ತೊಗರಿಬೇಳೆ ೨೧೨.೦೨ ಕ್ವಿಂಟಾಲ್, ಬೆಲ್ಲ ೯೫.೬೦ ಕ್ವಿಂಟಾಲ್, ಮೈದಾ ೧೫೧ ಕ್ವಿಂಟಾಲ್, ಅಕ್ಕಿ ೨೫೨ ಕ್ವಿಂಟಾಲ್ ಅನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿರುತ್ತದೆ.

ಈ ಸಂಬoಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೋಲಾರ ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮದ ವಾಸಿ ಶ್ರೀನಾಥ್, ಕೆ.ಜಿ.ಎಫ್. ಶಾಸಕಿ ರೂಪಕಲಾ ಎಂ. ಶಶಿಧರ್ ಹಾಗೂ ದಾಸ್ತಾನು ಇರಿಸಲಾಗಿದ್ದ ಜಮೀನಿನ ಮಾಲೀಕರ ವಿರುದ್ಧ ಮೊಕದಮ್ಮೆ ಸಂಖ್ಯೆ ೧೨೫/೨೦೨೩ ಕಲಂ ೩,೭ ಅಗತ್ಯ ವಸ್ತುಗಳ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಕೋಲಾರ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ನಾರಾಯಣ ಐಪಿಎಸ್ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : *ಯಾರೇ ತೊಂದರೆ ನೀಡಿದರು ಬಡವರಿಗೆ ಆಹಾರಕಿಟ್‍ ಸೇರಲಿವೆ:ರೂಪಕಲಾ.*

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!