ನಿಮ್ಮ ಆರ್ಶೀವಾದ ನನಗಿದ್ದರೆ ನಾನು ಬೆವರು ಹರಿಸುವ ಶ್ರಮಜೀವಿಗಳ ಧ್ವನಿಯಾಗಿ ಶಾಸನ ಸಭೆಯಲ್ಲಿ ಪ್ರತಿನಿಧಿಸುತ್ತೇನೆ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದು ಜೆಡೆಎಸ್ ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್ ತಿಳಿಸಿದರು.
ತಾಲ್ಲೂಕಿನ ಬೆಳಮಾರನಹಳ್ಳಿ ಗ್ರಾಮ ಪಂಚಾಯ್ತಿಯ ಸೊಣ್ಣೇನಹಳ್ಳಿ ಗ್ರಾಮದಲ್ಲಿ ವಿವಿಧ ಪಕ್ಷಗಳಿಂದ ಜೆಡಿಎಸ್ ಪಕ್ಷ ಸೇರಿದ ಹಲವು ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ನಾನು ನಿಮ್ಮ ಮನೆಯ ಮಗನಾಗಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಬಂಡೆ ಕೆಲಸ, ಮಣ್ಣು ಕೆಲಸ, ಜಮೀನು ಕೆಲಸದಲ್ಲಿ ಬೆವರು ಹರಿಸುವ ಜನರ ಬವಣೆಗಳನ್ನು ಅರಿತ್ತಿದ್ದೇನೆ. ಕ್ಷೇತ್ರದ ಜನ ನನಗೆ ಆರ್ಶೀವಾದ ಮಾಡಿದರೆ ನಾನು ಬೆವರು ಹರಿಸುವ ಶ್ರಮಜೀವಿಗಳ ಹಾಗೂ ರೈತ ಸಮಾಜದ ಪ್ರತಿನಿಧಿಯಾಗಿ ಶಾಸನಸಭೆಯಲ್ಲಿ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಅತಿ ಮುಖ್ಯವಾಗಿದೆ, ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಮಹಿಳಾ ಸಂಘಗಳ ಸಾಲ ಮನ್ನಾ ಯೋಜನೆ, ಉಚಿತ ಆರೋಗ್ಯ, ಉಚಿತ ಶಿಕ್ಷಣ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಜನರಿಗೆ ನೀಡಲು ಪಕ್ಷ ಸಿದ್ದತೆ ಮಾಡಿಕೊಂಡಿದೆ ಎಂದರು.
ಕ್ಷೇತ್ರದಲ್ಲಿಜೆಡಿಎಸ್ ಗೆಲುವು ಶ್ರಮಿಕರ ಗೆಲುವು, ರೈತರ ಗೆಲುವು, ಜೆಡಿಎಸ್ ಗೆಲುವು ನಿಮ್ಮೆಲ್ಲರ ಗೆಲುವು , ನಿಮ್ಕ ಕ್ಷೇತ್ರದಲ್ಲಿ ನಿಮ್ಮದೇ ಅಧಿಕಾರ, ನಾನು ಸ್ಥಳೀಯನಾಗೇ ಇರುವೆ, ಸ್ಥಳೀಯ ಸಮಸ್ಯೆಗಳಿಗೆ, ನೋವುಗಳಿಗೆ, ದುಖಃ ದುಮ್ಮಾನಗಳಿಗೆ ದ್ವನಿಯಾಗಿ ಸ್ಪಂಧಿಸುವೆ ಎಂದು ಭರವಸೆ ನೀಡಿದರು.
ವಾಲ್ಮೀಕಿ ಸಮಾಜದ ಮುಖಂಡ ಬಾಲಗೋವಿಂದು ಮಾತನಾಡಿ, ಸಿಎಂಆರ್ ಶ್ರೀನಾಥ್ ರವರ ನಿಸ್ವಾರ್ಥ ಸೇವೆಯನ್ನು ಮನ್ನಿಸಿ ಇಂದು ಹಲವಾರು ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ, ಕ್ಷೇತ್ರದ ಜನತೆ ಸಿಎಂಆರ್ ಶ್ರೀನಾಥ್ ರವರನ್ನು ಆಶೀವಾರ್ಧಿಸಿ ಶಾಸನಸಭೆಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸೊಣ್ಣೇನಹಳ್ಳಿ ಗ್ರಾಮದ ಮುಖಂಡರಾದ ಶ್ರೀನಿವಾಸ್, ಚೌಡಪ್ಪ, ಚಂದ್ರಶೇಖರ್, ಜೆಡಿಎಸ್ ಮುಖಂಡ ಜೆಟ್ ಅಶೋಕ್, ತಾರಕ್ ಮಂಜು, ಕುವೆಂಪುನಗರ ಆನಂದ್ ಕುಮಾರ್, ಮುದ್ದಣ್ಣ, ನಾಗರಾಜ್, ಹರೀಶ್ ಮತ್ತು ಇತರರು ಉಪಸ್ಥಿತರಿದ್ದರು.