ತಾತಯ್ಯನವರ ಆಶೀರ್ವಾದದಿಂದ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗುತ್ತೇನೆಂಬ ಭರವಸೆ ಹೊಂದಿದ್ದು, ದೈವ ಭಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ತಿಳಿಸಿದರು.
ಹೋಬಳಿಯ ಹುಲ್ಲಂಕಲ್ ಗ್ರಾಮದಲ್ಲಿ 291 ನೇ ಕೈವಾರ ತಾತಯ್ಯನವರ ಜಯಂತಿ ಹಾಗೂ ತಾತಯ್ಯನವರ ವಿಗ್ರಹ ಪ್ರತಿಷ್ಠಾನ ಪೂಜೆಯಲ್ಲಿ ಪಾಲ್ಕೊಂಡು ಮಾತನಾಡಿದ ಅವರು ಹುಲ್ಲಂಕಲ್ಲು ಗ್ರಾಮಸ್ಥರು ನನ್ನ ಬಳಿ ಕೈವಾರ ತಾತಯ್ಯನವರ ದೇವಾಲಯ ನಿರ್ಮಿಸುತ್ತಿದ್ದೇವೆ ನಿಮ್ಮ ಸಹಕಾರ ನಮಗೆ ಬೇಕು ಎಂದು ಕೇಳಿದಾಗ ನಾನು ಹಿಂದೆ ಮುಂದೆ ನೋಡದೆ ಪೂರ್ತಿ ದೇವಾಲಯದ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದೇನೆಂದರು.
ಸುಮಾರು 400 ವರ್ಷಗಳ ಹಿಂದೆ ಕೈವಾರದಲ್ಲಿ ಬರಡು ಭೂಮಿಯಲ್ಲಿ ತಾತಯ್ಯನವರು ವಾಸಿಸುತ್ತಿದ್ದಾಗ ಕುಡಿಯಲು ನೀರು ಸಿಗದಿದ್ದಾಗ ಗಂಗೆಯನ್ನು ಪ್ರಾರ್ಥಿಸಿಕೊಂಡಾಗ ಗಂಗಾದೇವಿ ಪ್ರತ್ಯಕ್ಷವಾಗಿ ಅವರಿಗೆ ಕುಡಿಯಲು ನೀರು ಕೊಡುತ್ತಾಳೆ. ತದನಂತರ ಕೈವಾರ ಭಾಗದ ಸುತ್ತಮುತ್ತ ಹಳ್ಳಿಗಳಿಗೆ ಅಲ್ಲಿಂದಲೇ ನೀರು ಸಿಗುತ್ತದೆ. ಇವರ ಜೀವನ ಚರಿತ್ರೆಯನ್ನು ನಮ್ಮ ದೇಶದಲ್ಲೇ ಅಲ್ಲದೆ ವಿದೇಶಗಳಲ್ಲೂ ಸಹ ಓದಿ ತಿಳಿದುಕೊಳ್ಳುತ್ತಿದ್ದಾರೆ. ಇಂತಹ ದೇವರನ್ನು ವಿಶ್ವದಾದ್ಯಂತ ಪ್ರಚಾರ ಮಾಡುತ್ತಿರುವ ಅಪ್ಪಟ ದೈವ ಭಕ್ತರು, ಸಾವಿರಾರು ಉಚಿತ ಮದುವೆಗಳು ಮಾಡುತ್ತಿರುವ ಕರುಣಾಮಯಿ ಡಾ. ಎಂ .ಆರ್ ಜಯರಾಮ್ ಅವರಿಗೆ ನನ್ನ ಸಾವಿರ ಕೋಟಿ ನಮನಗಳನ್ನು ಸಲ್ಲಿಸುತ್ತೇನೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಧರ್ಮಾಧಿಕಾರಿಗಳಾದ ಜಯರಾಮ್ ರವರು ವರ್ತೂರ್ ಪ್ರಕಾಶ್ ರವರನ್ನು ಆಶೀರ್ವದಿಸಿ ಹರಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಬೆಗ್ಲಿ ಸೂರ್ಯ ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಎಸ್ .ವೆಂಕಟೇಶ್, ಬಂಕ್ ಮಂಜುನಾಥ್, ಅರುಣ್ ಪ್ರಸಾದ್, ಯುವ ಮುಖಂಡ ಅಭಿ ಭಾರದ್ವಾಜ್ ನಾಯ್ಡು ,ಈರಪ್ಪ, ನಾರಾಯಣಸ್ವಾಮಿ,ಕೃಷ್ಣಪ್ಪ,ರೆಡ್ಡಿ,ನಾಗರಾಜ್,
ವೆಂಕಟೇಶಪ್ಪ, ನಟರಾಜ್, ಅಂಗಡಿ ವೆಂಕಟೇಶಪ್ಪ, ವೆಂಕಟರಾಯಪ್ಪ, ಗೌರಮ್ಮ, ಸುನಿಲ್, ಮುಳುವಾಗಿಲಪ್ಪ, ಅಂಬರೀಶ್, ಬೀರಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು