ಬೆಂಗಳೂರು ಅಂತಾರಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ ದಿಕ್ಕಾರ. “ಪಾಲಾರ್” ಸಿನಿಮಾ ಸೆಲೆಕ್ಟ್ ಮಾಡದ ಜೂರಿ ಸದಸ್ಯರಿಗೆ ಗೆ ದಿಕ್ಕಾರ. ಬಡವರ ದಲಿತರ ಕಥೆಗಳನ್ನು ತುಳಿಯುತ್ತುರುವ ಕನ್ನಡ ಚಿತ್ರರಂಗಕ್ಕೆ ದಿಕ್ಕಾರ.ದಲಿತ ವಿರೋಧಿ ಸರ್ಕಾರಕ್ಕೆ ದಿಕ್ಕಾರ ಎಂದು ನಿರ್ಧೇಶಕ ನವೀನ್ ಸೂರಂಜೆ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಅಸಮದಾನ ವ್ಯಕ್ತಪಡಿಸಿರುವ ಅವರು ಕನ್ನಡದಲ್ಲೇ ಮೊದಲಬಾರಿ ನೇರ ದಲಿತರ ಕಥೆ ಪಾಲಾರ್ ಸಿನಿಮಾ ಬಂದಿದ್ದು ಸಿನಿಮಾ ನೋಡಿದ ಪ್ರತಿ ಒಬ್ಬರಿಗೂ ಇಷ್ಟ ಆಗಿತ್ತು.
ಎಲ್ಲಾ ಕಡೆ ಪಾಸಿಟಿವ್ ರಿವ್ಯೂ ಬಂದಿತ್ತು. ಪ್ರೆಸ್ಸ್, ಮೀಡಿಯಾ ಮತ್ತು ಕ್ರಿಟಿಕ್ಸ್ ಸಹ ಪಾಲಾರ್ ಸಿನಿಮಾ ಚೆನ್ನಾಗಿದೆ ಅವಾರ್ಡ್ ಬರುತ್ತೆ ಅಂತಿದ್ರು..ಆದರೆ ಇಲ್ಲಿರುವ “ಕರ್ನಾಟಕ ಸರ್ಕಾರದ” ಕನ್ನಡ ಚಲನಚಿತ್ರ ಅಕಾಡೆಮಿ ಮತ್ತು ಅದರ ಸದಸ್ಯರು.
BANGALORE INTERNATIONAL FILM FESTIVAL ಗೆ “ದಲಿತರ ಬಗ್ಗೆ ಕಥೆ ಇರುವ , ದಲಿತರೇ ಸ್ವಂತವಾಗಿ ಸಿನಿಮಾ ನಿರ್ದೇಶನ ಮಾಡಿರುವ, ದಲಿತರೇ ನಿರ್ಮಾಣ ಮಾಡಿರುವ, ದಲಿತರೇ ಹೆಚ್ಚಾಗಿ ನಟಿಸಿರುವ ಪಾಲಾರ್ ಸಿನಿಮಾ ತಿರಸ್ಕರಿಸಿದ್ದಾರೆ.
ಆ ಮೂಲಕ ನಮ್ಮ ಪಾಲಾರ್ ಸಿನಿಮಾಗೆ ಇಲ್ಲಿಯೂ ಅಸ್ಪೃಶ್ಯತೆ ಆಚರಣೆಗೆ ಮುಂದಾಗಿದ್ದಾರೆ”. ಸೆಲೆಕ್ಟ್ ಆದ ಸಿನಿಮಾಗಳಲ್ಲಿ ಎಸ್ಟು ಸಿನಿಮಾಗಳ ಹೆಸರು ನಿಮಗೆ ಗೊತ್ತು? Ok ಬಿಡಿ ನಾವು ಇನ್ನು ಮುಂದೆ ಕಮಲ, ಕರು, ಹಸು, ದೇವರ ಸಿನಿಮಾ ಮಾಡಿ ಅಂತ ಹೇಳ್ತೀವಿ.
ಬಾಬಾ ಸಾಹೇಬರ ಫೋಟೋ ಸಿನಿಮಾಗಳಲ್ಲಿ ತೋರಿಸಿದರೆ ನಿಮಗೆ ಉರಿ ಅಂತ ಗೊತ್ತು. ಇನ್ನು ಮುಂದೆ ದಲಿತರು ಬೇರೆ ಅವರ ಸಿನಿಮಾಗಳು ನೋಡುವುದನ್ನು ನಿಲ್ಲಿಸುತ್ತವೆ. ದಲಿತರ ಬಗ್ಗೆ ಅದೆಷ್ಟೋ ವರ್ಷಗಳ ನಂತರ ಬಂದ ಪಾಲಾರ್ ಸಿನಿಮಾ ಸೆಲೆಕ್ಟ್ ಮಾಡುವಷ್ಟು ಯೋಗ್ಯತೆ ನಿಮಗಿಲ್ಲ.
ಥೂ.. ನೀವು ಇಂತಹ ಕಥೆಗಳು, especially ದಲಿತರ ಕಥೆಗಳು ಬರಬಾರದು ಅಂತ ನಮ್ಮ ಸಿನಿಮಾ ಕೊಲ್ಲಿದ್ರಿ. ಆ ದಲಿತರ ರಕ್ತದ ಕಲೆ ನಿಮ್ಮನ್ನು ಬಿಡುವುದಿಲ್ಲ. ಮತ್ತೊಮ್ಮೆ ನಿಮಗೆ ದಿಕ್ಕಾರ.Down Down BIFFESDown Down GovernmentDown Down KCA.
ಈ ಸರ್ಕಾರಕ್ಕೆ ಕಾಶ್ಮೀರಿ ಫೈಲ್ಸ್ ಬೇಕು, ನಾಯಿ ಬಗ್ಗೆ ಕಾಲ್ಪನಿಕ ಕಥೆ ಚಾರ್ಲಿ ಬೇಕು.. ಅದಿಕ್ಕೆಲ್ಲಾ ಟಾಕ್ಸ್ ಫ್ರೀ ಬೇರೆ ಮಾಡ್ತಾರೆ. ಜಾತಿ ಭೇದ ಭಾವ ಮಾಡೋದು ಈಗ ನೀವೇ ಅಂತ ಗೊತ್ತಾಯ್ತು ಬಿಡಿ ಎಂದು ಅಸಮದಾನ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಪ್ರತಿ ಒಬ್ಬ ದಲಿತರಿಗೂ ಈ ಮೆಸ್ಸೇಜ್ ತಲುಪಿಸಿ. ಯಾಕಂದ್ರೆ ನಾವೇ ಅಲ್ವಾ ಬೆಳಿಗ್ಗೆ ಎದ್ದು ನಟರ ಕಟ್ ಔಟ್ ಕಟ್ಟಿ ಹಾಲು ಹಾಕಿ ಮೆರೆಸಿ ಹೀರೋಗಳನ್ನು ಮಾಡಿದ್ದು. ಈಗ ನೋಡಿ ನಮ್ಮ ದಲಿತರ ಕಥೆ ಯಾರಿಗೂ ಬೇಡವಾಯಿತು ಎಂದೂ ಅಸಮದಾನ ವ್ಯಕ್ತಪಡಿಸಿದ್ದಾರೆ.