• Sat. Mar 2nd, 2024

ರಾಜ್ಯ ಸರಕಾರವು ಸವಿತಾ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ ಕೇವಲ ೫ ಕೋಟಿ ಅನುದಾನ ನೀಡಿರುವುದು “ಹಸಿದವನಿಗೆ ಅರೆಕಾಸಿನ ಮಜ್ಜಿಗೆ” ನೀಡಿದಂತೆ : ಇಂಚರ ಗೋವಿಂದರಾಜು

PLACE YOUR AD HERE AT LOWEST PRICE

ರಾಜ್ಯ ಸರಕಾರವು ಸವಿತಾ ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿ ಕೇವಲ ೫ ಕೋಟಿ ರೂ ಅನುದಾನ ನೀಡಿರುವುದು “ಹಸಿದವನಿಗೆ ಅರೆಕಾಸಿನ ಮಜ್ಜಿಗೆ” ನೀಡಿದಂತೆ, ಸರ್ಕಾರ ಸವಿತಾ ಸಮಾಜವನ್ನ ನಿರ್ಲಕ್ಷಿಸುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಆರೋಪಿಸಿದರು.

ಕೋಲಾರ ನಗರದ ಗೋಲ್ಡನ್ ಪ್ಯಾಲೇಸ್‌ನಲ್ಲಿ ಮಂಗಳವಾರ ನಡೆದ ಜೆಡಿಎಸ್ ಸವಿತಾ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಸವಿತಾ ಸಮಾಜಕ್ಕೆ ಅನ್ಯಾಯ ಮಾಡಿದೆ, ನಾನು ತನ್ನ ಎಂಎಲ್ಸಿ ಅನುದಾನದಿಂದ ಈಗಾಗಲೇ ೫ ಲಕ್ಷ ನೀಡಿದ್ದೇನೆ. ನನ್ನ ಅವಧಿ ಇನ್ನೂ ೩ ವರ್ಷವಿದ್ದು ಪ್ರತಿ ವರ್ಷವೂ ತಲಾ ೫ ಲಕ್ಷರೂ ನೀಡಲಾಗುವುದೆಂದು ಘೋಷಿಸಿದರು.

ಸವಿತಾ ಮಹರ್ಷಿಗಳ ಜಯಂತಿಗೆ ನಾನು ಬಿಟ್ಟರೆ ಯಾವ ಶಾಸಕರೂ ಇರಲಿಲ್ಲ. ನಿಮ್ಮ ಜತೆಗೆ ಯಾರು ಇರುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಬೇರೆಯವರಂತೆ ರಾಜಕಾರಣ ಮಾಡಿ ಏನನ್ನೂ ಸಂಪಾದಿಸಲು ನಾವು ಬಂದಿಲ್ಲ ಆದರೆ ಕೆಲವರು ೪೦ ವರ್ಷ ತಮ್ಮ ಕುಟುಂಬ ಪೋಷಣೆಗಾಗಿ ಭ್ರಷ್ಟಾಚಾರದೊಂದಿಗೆ ರಾಜಕಾರಣ ಮಾಡಿದ್ದಾರೆ. ೧೫ ವರ್ಷಗಳಿಂದ ನಮ್ಮನ್ನು ಶೋಷಣೆ ಮಾಡಿಕೊಂಡು ಬಂದಿರುವ ಶಾಸಕರಿಗೆ ತಕ್ಕ ಪಾಠ ಕಲಿಸಲು ನಿಮ್ಮ ಮನೆ ಮಗ ಸಿಎಂಆರ್ ಶ್ರೀನಾಥ್ ಅವರ ಕೈ ಹಿಡಿಯಿರಿ. ನಾನು ಅವರು ಸೇರಿ ಕ್ಷೇತ್ರದ ಅಭಿವೃದ್ಧಿಗೆ ಪಣತೊಡಲಾಗುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಮಾತನಾಡಿ, ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಸವಿತಾ ಸಮಾಜವಾಗಿದ್ದು, ಗ್ರಾಮೀಣ ಭಾಗದಲ್ಲಿ ಬಡವರು ಹಾಗೆಯೇ ಉಳಿದಿದ್ದಾರೆ ಎಂದ ಅವರು, ಕಾಂಗ್ರೆಸ್‌ನವರಿಗೆ ಅವರ ಮೇಲೆ ಅವರಿಗೇ ಗ್ಯಾರೆಂಟಿ ಇಲ್ಲದೆ ಮನೆಮನೆಗೆ ಗ್ಯಾರೆಂಟಿ ಕಾರ್ಡ್ ಕೊಡಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ ಮಾತನಾಡಿ, ಸಿದ್ದರಾಮಯ್ಯ ಬರ್ತಾರೆ ಗೆಲ್ತಾರೆ ಅಂತ ಹೋದ ಕಡೆಯಲ್ಲ ಹೇಳೋ ಬದಲು ಕ್ಯಾಸೆಟ್ ಒಂದು ರೆಡಿ ಮಾಡಿಕೊಡ್ತೇವೆ ಹಾಕಿಕೊಂಡು ಓಡಾಡಿ ಎಂದು ಶಾಸಕ ಕೆ.ಶ್ರೀನಿವಾಸಗೌಡರನ್ನು ವ್ಯಂಗ್ಯವಾಡಿದ ಅವರು, ಈ ಚುನಾವಣೆ ಬಳಿಕ ಕ್ಷೇತ್ರದಲ್ಲಿ ಇಂಗುತಿoದ ಮಂಗನoತಾಗುತ್ತೀರಿ ಎಂದು ವ್ಯಂಗ್ಯವಾಡಿದರು.

ಪ್ರಾಸ್ತಾವಿಕವಾಗಿ ಪ್ರೊಫೆಸರ್ ಗೋವಿಂದಪ್ಪ ಮಾತನಾಡಿ, ಈಗಾಗಲೇ ಅನೇಕ ಜಾತಿಗಳಿರುವ ೨ಎಗೆ ಸವಿತಾ ಸಮಾಜವನ್ನು ಸೇರಿಸಿದ್ದು, ನಾವೆಲ್ಲರೂ ಹೋರಾಟದ ಮೂಲಕ ಕೂಗು ಹಾಕದಿದ್ದರೆ ತೊಂದರೆಯಲ್ಲೇ ಮುಂದುವರೆಯಬೇಕಾಗುತ್ತದೆ ಎಂದ ಅವರು, ಈವರೆಗೂ ಯಾರೂ ಸಹ ನಿಮ್ಮನ್ನು ಸಂಘಟಿಸಿ ಸಮಾವೇಶ ಮಾಡಿಲ್ಲ, ಜೆಡಿಎಸ್ ಪಕ್ಷ ಮನೆ ಬಾಗಿಲಿಗೆ ಬಂದಿದ್ದು ಅದನ್ನು ಗೌರವಿಸಿ ಕೈಹಿಡಿದರೆ ಸಮಾಜಕ್ಕೂ ಒಳಿತು ಎಂದು ಹೇಳಿದರು.

ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ ಹೋದ ಕಡೆಯಲ್ಲೆಲ್ಲಾ ಸಮಸ್ಯೆಗಳನ್ನು ಈಗಾಗಲೇ ಪಟ್ಟಿ ಮಾಡಿಕೊಂಡು ಬರುತ್ತಿದ್ದು, ನಾನು ಶಾಸಕನಾದರೆ ಸರಕಾರದ ೧ ರೂಪಾಯಿಯೂ ಪೋಲಾಗದಂತೆ ಕ್ಷೇತ್ರದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿಸುತ್ತೇನೆ.ನಿಮ್ಮ ಮನೆ ಮಗನಾಗಿ ದುಡಿಯಲು ನಾನು ಸಿದ್ದನಿದ್ದೇನೆ. ತಮ್ಮ ಒಂದು ಮತ ನೀಡಿ ಬೆಂಬಲಿಸಿ. ಭರವಸೆಗಳಿಗಷ್ಟೇ ನಾನು ಸೀಮಿತವಲ್ಲ. ಈಡೇರಿಸುವುದೇ ನನ್ನ ಕಾಯಕ. ಲಂಚಮುಕ್ತ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಒಳ್ಳೆಯ ಅಧಿಕಾರಿಗಳಿಂದ ಉತ್ತಮ ಸೇವೆ ಮಾಡಿಸಬೇಕು ಎನ್ನುವುದೇ ನನ್ನ ಉದ್ದೇಶ ಎಂದರು.

ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಕರೆ ಮೂಲಕ ಮಾತನಾಡಿ, ಮತಯಾಚಿಸಿದರು. ಇದೇ ವೇಳೆ ಜೆಡಿಯು ಹಿರಿಯ ಮುಖಂಡ ಶ್ರೀರಾಮ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾರ್ಯಕ್ರಮಕ್ಕೂ ಮುನ್ನಾ ಎಪಿಎಂಸಿ ಮಾರುಕಟ್ಟೆ ಬಳಿಯಿಂದ ೫೦ ನಾದಸ್ವರ-ಡೋಲುಗಳ ಕಲಾವಿದರು, ಸವಿತಾ ಸಮಾಜದ ಸಾವಿರಾರು ಮಂದಿಯೊoದಿಗೆ ಮೆರವಣಿಗೆ ನಡೆಸಲಾಯಿತು.

ಇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್,ತಾಲೂಕು ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ, ಮುಖಂಡ ಸಿಎಂಆರ್ ಹರೀಶ್, ಜೆಟ್ ಅಶೋಕ್, ಖಲೀಲ್ ಅಹಮದ್, ಇಮ್ರಾನ್ ಪಾಷ, ಮುಕ್ಕಡ್ ವೆಂಕಟೇಶ್, ಭೋವಿ ಸಂಘದ ಮುನಿಯಪ್ಪ, ರಫೀಕ್, ದೇವರಾಜ್, ಕೀಲುಕೋಟೆ ವೆಂಕಟೇಶ್, ರಫೀಕ್, ಸವಿತಾ ಸಮಾಜದ ರವಿ, ಮಂಗಸoದ್ರ ನಾಗೇಶ್, ಅಂಬರೀಶ್, ಶ್ರೀಧರ್, ಗೋವಿಂದರಾಜು, ನಾರಾಯಣಸ್ವಾಮಿ, ನಾದಸ್ವರ ಕೆಂಪರಾಜ್, ಯಲವಾರ ನಾರಾಯಣಸ್ವಾಮಿ, ಶಂಕರಪ್ಪ, ಮುನಿರಾಜು,ಶಿವು, ಮುಂತಾದವರು ಇದ್ದರು

 

 

Leave a Reply

Your email address will not be published. Required fields are marked *

You missed

error: Content is protected !!