PLACE YOUR AD HERE AT LOWEST PRICE
ಮುಂಬರುವ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಂಕೋಲಾರ ಜಿಲ್ಲಾ ಮೆಕಾನಿಕ್ ಅಸೋಸಿಯೇಷನ್ ಹಾಗೂ ಲಿಮ್ರಾಸ್ ಫ್ರೂಟ್ಸ್ ಸೆಂಟರ್ ಬಲ ನೀಡುತ್ತದೆ ಎಂದು ಎಲ್.ಎಫ್.ಸಿ. ಗ್ರೂಪ್ ಮಾಲೀಕ ಇಲಿಯಾಸ್ ಪಾಷ ತಿಳಿಸಿದರು.
ಕೋಲಾರ ನಗರದ ಕ್ಲಾಕ್ ಟವರ್ ಸಮೀಪದ ಎಲ್.ಎಫ್.ಸಿ. ಆವರಣದಲ್ಲಿ ಸಭೆ ನಡೆಸಿದ ಉಭಯ ಸಂಘಟನೆಗಳ ಮುಖಂಡರುಗಳ ಸಭೆಯಲ್ಲಿ ಅವರು ಮಾತನಾಡಿದರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮಗಳು ಬಡವರ ಹಾಗೂ ದುಡಿಯುವ ಶ್ರಮಿಕರ ಪರವಾಗಿದೆ. ರಾಜ್ಯದ ಅಹಿಂದ ಸಮುದಾಯಗಳ ನೇತಾರರಾದ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುವುದರಿಂದ ಕೋಲಾರ ಅಭಿವೃದ್ದಿಯತ್ತ ಸಾಗುವ ವಿಶ್ವಾಸವಿದೆ ಎಂದು ಹೇಳಿದರು.
ಸಿದ್ದರಾಮಯ್ಯನವರು ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಅಹಿಂದ ಸಮಾಜಕ್ಕೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ ದೇಶದಲ್ಲಿ ಇಂದು ಅಲ್ಪಸಂಖ್ಯಾತರ ಪರವಾದ ದೊಡ್ಡ ಧ್ವನಿಯಾಗಿದ್ದಾರೆ, ಜಿಲ್ಲೆಯ ಶ್ರಮಜೀವಿಗಳ ಸಂಘಟನೆಗಳಾದ ವಾಹನಗಳ ಮೆಕಾನಿಕ್ ಅಸೋಸಿಯೇಷನಹ್ ಮತ್ತು ಲಿಮ್ರಾಸ್ ಫ್ರೂಟ್ ಸೆಂಟರ್ ಗ್ರೂಪ್ಸ್ನ ಎಲ್ಲಾ ಪದಾಧಿಕಾರಿಗಳು ಸಭೆ ನಡೆಸಿ ಈ ನಿರ್ಣಯ ತೆಗೆದುಕೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮೆಕಾನಿಕ್ ರ‍್ಮುಗಂ, ನಯಾಜ್, ನದೀಮ್, ಬೇಕರಿ ಬಾಬು, ಯೂನಸ್ ಖಾನ್, ಆಖಿಲ್ ಅಹ್ಮದ್, ಬಾಷಾಬಾಯ್, ಸೀಪೂರ್ ಅಕ್ರಮ್. ಶಫಿ ಹಾಗೂ ಇಮ್ಯಾನ್ ಖಾನ್ ಇದ್ದರು.