ಕೆಜಿಎಫ್:ಕಮ್ಮಸಂದ್ರ ಗ್ರಾಮದ ಪುರಾತನ ಶ್ರೀ ವೇಣುಗೋಪಾಲ ಸ್ವಾಮಿ ದೇಗುಲ ಅಭಿವೃದ್ಧಿಗೆ ಗ್ರಾಮಸ್ಥರ ಬೇಡಿಕೆಯಂತೆ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಡಾ.ರಮೇಶ್ ಬಾಬು ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಅವರು ತಾಲ್ಲೂಕಿನ ಬೇತಮಂಗಲ ಹೋಬಳಿಯ ಕಮ್ಮಸಂದ್ರ ಗ್ರಾಮಸ್ಥರ ಮನವಿ ಮೇರೆಗೆ ಕಮ್ಮಸಂದ್ರಕ್ಕೆ ಭೇಟಿ ನೀಡಿ ದೇವಾಲಯದ ಕಾಮಗಾರಿಯನ್ನು ವೀಕ್ಷಣೆ ಮಾಡಿ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ರಮೇಶ್ ಬಾಬು ಮಾತನಾಡಿ, ಈ ಭಾರಿ ಕೆಜಿಎಫ್ ಕ್ಷೇತ್ರದಲ್ಲಿ ಒಗ್ಗಟಿನಿಂದ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ, ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಸರಕಾರ ರಚನೆಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಗ್ರಾಮಗಳ ಅಭಿವೃದ್ಧಿ, ರೈತರ ಸಾಲ ಮನ್ನಾ, ಮಹಿಳಾ ಸಬಲೀಕರಣ, ನಿರುದ್ಯೋಗ ಯುವಕರಿಗೆ ಉದ್ಯೋಗ, ಉನ್ನತ ಶಿಕ್ಷಣ, ಗ್ರಾಪಂ ಮಟ್ಟದಲ್ಲಿ ಆಸ್ಪತ್ರೆ ಸೇರಿದಂತೆ ಕುಮಾರಸ್ವಾಮಿ ಅನೇಕ ಯೋಜನೆಗಳನ್ನು ರಾಜ್ಯದ ಜನರಿಗಾಗಿ ಜಾರಿಗೆ ತರಲಿದ್ದಾರೆಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಚಲಪತಿ, ಗ್ರಾಮದ ಮುಖಂಡರಾದ ಡೈರಿ ಶಿವಣ್ಣ, ಕ್ಯಾಸಂಬಳ್ಳಿ ಮನೋಹರ್ ರೆಡ್ಡಿ, ವೆಂಗಸಂದ್ರ ಮಂಜುನಾಥ್, ನಾರಾಯಣಸ್ವಾಮಿ, ಕೃಷ್ಣಂರಾಜು ಮೊದಲಾದವರಿದ್ದರು.