• Fri. Apr 26th, 2024

*ಬೇತಮಂಗಲದಲ್ಲಿ ನಡೆದ ಹಸಿ ಕರಗ.*

PLACE YOUR AD HERE AT LOWEST PRICE

ಕೆಜಿಎಫ್:ಶ್ರೀ ವಿಜೇಂದ್ರ ಸ್ವಾಮಿಯ ಬ್ರಹ್ಮರಥೋತ್ಸದ ಪ್ರಯುಕ್ತ ನಡೆಯುವ ಶ್ರೀ ದ್ರೌಪತಾಂಭ ಧರ್ಮರಾಯ ಸ್ವಾಮಿಯ ಕರಗ ಮಹೋತ್ಸವ ಹಿನ್ನಲೆ ಹಸಿ ಕರಗ ವಿಜೃಂಭಣೆಯಿಂದ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ನಡೆಯಿತು.

ಬೇತಮಂಗಲದ ಹಳೆ ಬಡಾವಣೆಯಲ್ಲಿ ನೆಲೆಸಿರುವ ಶ್ರೀ ದ್ರೌಪತಂಭ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದು, ರಾತ್ರಿ 8 ಗಂಟೆ ಸುಮಾರಿಗೆ ಪಾಲಾರ್ ಕೆರೆಯ ನದಿಯ ಕೋಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಸಿ ಕರಗವನ್ನು ಹೊರ ತರಲಾಯಿತು.

ಕರಗ ಪೂಜಾರಿ ಕೃಷ್ಣಮೂರ್ತಿ ಹಾಗೂ ಇಬ್ಬರು ವೀರ ಕುಮಾರರು ಕರಗವನ್ನು ಹಿಡಿದು ತಮಟೆ ಶಬ್ಧಕ್ಕೆ ನೃತ್ಯ ಮಾಡುವ ಮೂಲಕ ನೆರೆದಿದ್ದ ಭಕ್ತರನ್ನು ರಂಜಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಸಿ ಕರಗ ಸಂಚಾರ ನಡೆಸಿ ಸಾರ್ವಜನಿಕರಿಂದ ಪೂಜೆ ಸ್ವೀಕರಿಸಿದರು.

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!