ಕೋಲಾರ: ಕಳೆದ ಹದಿನೈದು ವರ್ಷಗಳಿಂದ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷ ವಹಿಸಿದಂತಹ ಜವಾಬ್ದಾರಿಗಳನ್ನು ಪ್ರಮಾಣಿಕವಾಗಿ ಮಾಡಿಕೊಂಡು ಬಂದಿದ್ದೇನೆ. ಪಕ್ಷಕ್ಕಾಗಿ ನಾನು ಮಾಡಿದ ಸೇವೆಯನ್ನು ಗುರುತಿಸಿ ಟಿಕೇಟ್ ನೀಡುತ್ತದೆಂಬ ಭರವಸೆಯಿದ್ದು, ಬಂಗಾರಪೇಟೆ ಮೀಸಲು ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಪ್ರಕಾಶನ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ಹಾಗೂ ಯುವಮೋರ್ಚಾ ಸಾಮಾಜಿಕ ಜಾಲತಾಣ ಜಿಲ್ಲಾ ಉಸ್ತುವಾರಿ ಹೊಲ್ಲಂಬಳ್ಳಿ ಶಿವು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದುö,ಹೋರಾಟಗಳ ಮೂಲಕ ವಿದ್ಯಾರ್ಥಿಗಳ ಧ್ವನಿಯಾಗಿದ್ದರು. ನಂತರದಲ್ಲಿ ಸ್ವಯಂ ಸೇವಕ ಸಂಘದ ವಿವಿಧ ಭಾಗಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದರು.
ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ಪಕ್ಷ ವಹಿಸಿದಂತಹ ಎಲ್ಲ ಚುಟವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಪಕ್ಷದ ಏಳಿಗೆಗಾಗಿ ದುಡಿದಿದ್ದುö, ಹಲವಾರು ಜಿಲ್ಲೆಗಳಲ್ಲಿ ಪೂರ್ಣಾವಧಿ ಕಾರ್ಯಕರ್ತನಾಗಿ ಪಕ್ಷ ಬೆಳವಣಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೇನೆ ಎಂದು ವಿವರಿಸಿದರು.
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಎನ್‌ಜಿಒ ಮೂಲಕ ಹಾಗೂ ಕೊರೊನಾ ವಾರಿಯಸ್ ಆಗಿ ಜಿಲ್ಲೆಯ ಹಾಗೂ ಬಂಗಾರಪೇಟೆ ಕ್ಷೇತ್ರದ ಜನರಿಗೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಬಂದಿದ್ದುö, ಪಕ್ಷದ ಹಿರಿಯ ನಾಯಕರು ನನ್ನ ಸೇವೆಯನ್ನು ಗುರುತಿಸಿ ಟಿಕೆಟ್ ನೀಡುತ್ತಾರೆಂಬ ನಂಬಿಕೆಯಿAದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿ ಟಿಕೆಟ್ ಪಡೆಯಬೇಕಾದರೆ ಹಣಬಲ, ಜಾತಿಬಲವಿರಬೇಕಾಗುತ್ತದೆ. ಆದರೆ, ಪಕ್ಷಕ್ಕಾಗಿ ಕೆಲಸ ಮಾಡಿದಂತಹ ಸಣ್ಣ ಕಾರ್ಯಕರ್ತನನ್ನೂ ಗುರುತಿಸಿ ಅಕಾರ ನೀಡುವಂತಹ ಪಕ್ಷ ಇದ್ದರೆ ಅದು ಬಿಜೆಪಿ ಪಕ್ಷ ಮಾತ್ರವಾಗಿದೆ ಎಂದು ಹೊಲ್ಲಂಬಳ್ಳಿ ಶಿವು ಹೇಳಿದರು.
ಬಂಗಾರಪೇಟೆ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ಹಿರಿಯರು ಹಾಗೂ ಮಾರ್ಗದರ್ಶಕರ ಬಳಿ ಚರ್ಚಿಸಿದಾಗ ಬೆಂಬಲ ವ್ಯಕ್ತಪಡಿಸಿದ್ದುö, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದ್ದಾರೆ. ಯುವಕರಿಗೆ ಆದ್ಯತೆ ನೀಡುವುದಾಗಿ ತಿಳಿಸಿರುವುದರಿಂದ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಹೇಳಿದರು.