ಬಂಗಾರಪೇಟೆ: ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ಬೇಸತ್ತ ಜನ ಖಾಸಗಿ ಸುದ್ದಿ ವಾಹಿನಿ ನಡೆಸಿದ ಸಮೀಕ್ಷೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವುದರ ಮೂಲಕ ಪರಿವರ್ತನಾ ಯಾತ್ರೆಗೆ ಯಶಸ್ಸು ಸಿಕ್ಕಂತಾಗಿದೆ ಎಂದು ಮಲ್ಲೇಶ್ ಬಾಬು ಅಭಿಪ್ರಾಯ ಪಟ್ಟರು.
ಅವರು ತಾಲ್ಲೂಕಿನ ಕಾರಹಳ್ಳಿ ಗ್ರಾಮದಲ್ಲಿ “ಮನೆ ಮನೆಗೆ ಮಲ್ಲೇಶಣ್ಣ, ರಾಜ್ಯಕ್ಕೆ ಕುಮಾರಣ್ಣ” ಎಂಬ ಶೀರ್ಷಿಕೆಯ ಅಡಿಯಲ್ಲಿ ಆಯೋಜಿಸಲಾಗಿದ್ದ “ಪರಿವರ್ತನಾಯಾತ್ರೆ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ನಾಯಕರ ಆಂತರಿಕ ಭಿನ್ನಮತದಿಂದ ಕಾರ್ಯಕರ್ತರು ತಟಸ್ಥ ನಿಲುವನ್ನು ಹೊಂದಿದ್ದಾರೆ. ಜನರ ಭಾವನೆಗಳಿಗೆ ಸ್ಪಂದಿಸಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2023ರ ಚುನಾವಣೆ ರಾಜ್ಯದಲ್ಲಿ ಕುಮಾರ ಪರ್ವಕ್ಕೆ ಬಹುಮತ ಸಿಗಲಿದೆ ಎಂದರು.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 2000 ರೂ, ಉಚಿತ 10 ಕೆಜಿ ಅಕ್ಕಿ ಎಂದು ಘೋಷಿಸಿದೆ, ಜಾಗತೀಕರಣ ಬೆಳೆದಂತೆ ಕೈಗಾರಿಕೆಗಳು ದುಪ್ಪಟ್ಟು ನಿರ್ಮಾಣವಾಗುತ್ತದೆ.
ಪ್ರಸಕ್ತ ಸಾಲಿನಲ್ಲಿ 14.76,000 ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳು ಆರ್ಥಿಕವಾಗಿ ನಷ್ಟದಲ್ಲಿ ಸಾಗುತ್ತಿದೆ ಎಂದು ವರದಿಯಾಗಿದೆ, ಒಬ್ಬ ವ್ಯಕ್ತಿ ಸರಾಸರಿ 1011 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಾನೆ.
ಈ ಹಂತದಲ್ಲಿ ಹೇಗೆ ಉಚಿತವಾಗಿ ವಿದ್ಯುತ್ ಕೊಡಲು ಸಾಧ್ಯ? ಹಾಗೂ ಸರ್ಕಾರಿ ನೌಕರರ ವೇತನವು ಮಾಸಿಕ 1027 ಕೋಟಿ ಮೀಸಲಿಡಬೇಕು. ಇದನ್ನು ಹೊರತುಪಡಿಸಿ ಮಹಾನಗರ ಪಾಲಿಕೆ, ಗ್ರಾಮ ಪಂಚಾಯಿತಿಗಳು, ಪುರಸಭೆಗಳ ಸಮಗ್ರ ಅಭಿವೃದ್ಧಿಗೆ ತಗಲುವ ವೆಚ್ಚ ಪ್ರಮಾಣ ಹೆಚ್ಚಾಗಿದೆ.
ಹಾಗಾದರೆ ಮಾಸಿಕವಾಗಿ ಎಷ್ಟು ಹಣ ಕ್ರೂರೀಕರಣವಾಗಬೇಕು? ಎಂಬ ಕನಿಷ್ಠ ಪರಿಕಲ್ಪನೆಯೂ ಸಹ ಕಾಂಗ್ರೆಸ್ ಪಕ್ಷದವರಿಗಿಲ್ಲ. ರಾಜ್ಯವನ್ನು ಬಿಕಾರಿ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೇಸ್ ಪ್ರಣಾಳಿಕೆಯನ್ನು ವಿಮರ್ಷೆ ಮಾಡಿದರು.
ಪಕ್ಷದ ನಾಯಕ ಸಿರಾಜ್ ಮಾತನಾಡಿ ಮುಸ್ಲಿಂ ಸಮುದಾಯದ ಶೇಕಡ 80ರಷ್ಟು ನಾಯಕರು ಈ ಬಾರಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿ ಬೆಂಬಲಿಸಿದ ಕಾರಣ ಸ್ಥಳೀಯ ಶಾಸಕರು ದೂರವಾಣಿ ಕರೆಮಾಡಿ ಬೆದರಿಕೆ ಹಾಕುತ್ತಿದ್ದರು.
ಈ ವಿಷಯಕ್ಕೆ ಸಂಬಂಧಪಟ್ಟಂತೆ ರಾಜ್ಯನಾಯಕರಿಗೆ ಮಾಹಿತಿಯನ್ನು ರವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ರಾಜ್ಯ ಘಟಕದ ಅಧ್ಯಕ್ಷರಾದ ಇಮ್ರಾನ್ ಪಾಷಾ ಸಿರಹೀಂ ಕಾಂಪೌಂಡಿನಲ್ಲಿ ನೊಂದ ಯುವಕರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ದರು.
ಅವರ ಮಾತುಗಳಲ್ಲಿ ವ್ಯತ್ಯಾಸವಿದ್ದರೆ ಅದು ಅವರ ವೈಯುಕ್ತಿಕ ಹೇಳಿಕೆಯಾಗಿದೆಯೇ ಹೊರತು ಮಲ್ಲೇಶ್ ಬಾಬು ಹಾಗೂ ನನ್ನ ಹೇಳಿಕೆ ಆಗಿರುವುದಿಲ್ಲ. ಈ ವಿಚಾರದಲ್ಲಿ ಶಾಸಕರು ತಮ್ಮ ಕುತಂತ್ರ ರಾಜಕಾರಣ ಮಾಡಲು ಮುಂದಾಗಿದ್ದಾರೆ.
ನಮ್ಮದೇ ಸಮುದಾಯದವರಿಂದ ದೂರು ಕೊಟ್ಟು ಅನಗತ್ಯವಾಗಿ ನಮ್ಮ ವಿರುದ್ಧ ಎಫ್ಐಆರ್ ದಾಖಲು ಮಾಡಿಸಿರುತ್ತಾರೆ. ಇವರ ಒಡೆದಾಳುವ ನೀತಿಗೆ 2023ರ ಚುನಾವಣೆಯಲ್ಲಿ ಕ್ಷೇತ್ರದ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಯಲ್ಲಪ್ಪ, ಯುವ ಘಟಕದ ಅಧ್ಯಕ್ಷ ವಿಶ್ವನಾಥ್, ಅಲ್ಪಸಂಖ್ಯಾತ ಮುಖಂಡರಾದ ಚಾಂದ್ ಪಾಷಾ, ಮುಖಂಡರಾದ ರಾಮಪ್ಪ, ಮರಗಲ್ ಮುನಿಯಪ್ಪ, ರಾಮಚಂದ್ರ, ಮಂಜು, ಮದು, ಪ್ರವೀಣ್, ಪ್ರಭು, ಹನುಮಂತು, ಚಂದ್ರು, ಅಕಾಶ್, ಬೇಟ್ಟಪ್ಪ, ಗೋವಿಂದ ಮೊದಲಾದವರು ಉಪಸ್ಥಿತರಿದ್ದರು.