• Fri. Mar 1st, 2024

ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಂಗಾರಪೇಟೆ ತಾಲ್ಲೂಕಿನ ಬಲಮಂದೆ ಪ್ರೌಢ ಶಾಲೆಯ ಬೇಬಿ ಜಿಲ್ಲೆಗೆ ಪ್ರಥಮ ರಾಜ್ಯ ಮಟ್ಟದಲ್ಲಿ ೯ನೇ ಸ್ಥಾನ

PLACE YOUR AD HERE AT LOWEST PRICE

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಜ್ಯಾದ್ಯಂತ ಮಾರ್ಚ್ ೧೯ ರಂದು ಅಯೋಜಿಸಿದ್ದ ನೀರು ಮತ್ತು ನೈರ್ಮಲ್ಯ, ಆರೋಗ್ಯ ವಿಷಯವಾಗಿ ರಾಜ್ಯ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ಬಲಮಂದೆ ಸರ್ಕಾರಿ ಪ್ರೌಢ ಶಾಲೆ ಬೇಬಿ ಕೋಲಾರ ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯ ಮಟ್ಟದ ೯ನೇ ಸ್ಥಾನ ಪಡೆದಿದ್ದಾರೆ.

ಕೋಲಾರ ಜಿಲ್ಲೆಗೆ ಎರಡನೇ ಸ್ಥಾನ ಮತ್ತು ರಾಜ್ಯಕ್ಕೆ ೧೫ನೇ ಸ್ಥಾನವನ್ನು ಕೋಲಾರದ ಚಿನ್ಮಯ ವಿದ್ಯಾಲಯದ ದೀಪ್ತಿ ಪಡೆದಿದ್ದಾರೆ. ಮೂರನೇ ಸ್ಥಾನವನ್ನು ಬಲಮಂದೆ ಸರ್ಕಾರಿ ಪ್ರೌಢಶಾಲೆಯ ಸಂದ್ಯ.ಎಸ್, ನಾಲ್ಕನೇ ಸ್ಥಾನವನ್ನು ಚಿಕ್ಕ ಕುಂತೂರು ಸರ್ಕಾರಿ ಪ್ರೌಢ ಶಾಲೆಯ ಗಂಗೋತ್ರಿ, ಐದನೇ ಸ್ಥಾವನ್ನು ಕ್ಯಾಸಂಬಳ್ಳಿ ಸರ್ಕಾರಿ ಪ್ರೌಢ ಶಾಲೆಯ ರಾಮಚರಣ್, ಆರನೇ ಸ್ಥಾನವನ್ನು ಶ್ರೀನಿವಾಸಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಜಬಿಯಾ ತಾಜ್ ಪಡೆದುಕೊಂಡಿದ್ದಾರೆ

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನ, ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು. ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಜಿಲ್ಲಾ ಸಂಯೋಜಕರು, ಪದಾಧಿಕಾರಿಗಳು, ಮಾರ್ಗದರ್ಶಕ ಶಿಕ್ಷಕರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್ ಅಭಿನಂದನೆ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

You missed

error: Content is protected !!