• Sat. Apr 27th, 2024

PLACE YOUR AD HERE AT LOWEST PRICE

ರಂಝಾನ್ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲೇ ಸಾರ್ವತ್ರಿಕ ಚುನಾವಣೆ ಸನಿಹವಾಗಿದ್ದು, ಹಲವು ರೀತಿಯ ಕಾನೂನಾತ್ಮಕ ಸವಾಲುಗಳನ್ನು ಸಾರ್ವಜನಿಕರು ಹಾಗೂ ಅಧಿಕಾರಿಗಳು ಎದುರಿಸುವಂತಾಗಿದೆ. ಯಾರೇ ಫುಡ್ ಕಿಟ್ ಹಂಚಿದರೂ ಇದು ಎಲ್ಲಿಂದ ಬಂತು ಎಂಬ ಗೊಂದಲ ಜನರ ಮದ್ಯೆ ಹರಿದಾಡುತ್ತಿರುವುದು ಸಾಮಾನ್ಯವಾಗಿದೆ.

ಯುಗಾದಿ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕೆಲಸ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಫುಡ್ ಕಿಟ್‌ಗಳನ್ನು ಹಂಚಿಕೆ ಮಾಡಲು ದಾಸ್ತಾನು ಮಾಡಲಾಗಿದ್ದ ಶೆಡ್‌ಗಳು ಹಾಗೂ ಮನೆಗಳ ಮೇಲೆ ಅಧಿಕಾರಿಗಳು ಸೂಕ್ತ ಮಾಹಿತಿಯನ್ನಾಧರಿಸಿ, ಸದರಿ ಫುಡ್‌ಕಿಟ್‌ಗಳು ಚುನಾವಣಾ ಹಿನ್ನಲೆಯಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಮುಟ್ಟುಗೋಲು ಹಾಕಿಕೊಳ್ಳುತ್ತಿರುವುದು ನಡೆಯುತ್ತಿದೆ.

ಇದೀಗ ಕೋಲಾರದ ಶಹೀನ್ ಷಾ ನಗರದ ಇನಾಯತ್ ಎಂಬುವ ವ್ಯಾಪಾರಿಯ ಮನೆಯಲ್ಲಿ ಇಳಿಸಲಾಗುತ್ತಿದ್ದ ಸುಮಾರು ೩೦ ಲಕ್ಷ ಬೆಲೆ ಬಾಳುವ ೨೫೦೦ ಫುಡ್‌ಕಿಟ್‌ಗಳನ್ನು ಚುನಾವಣೆ ಹಿನ್ನಲೆಯಲ್ಲಿ ದಾಸ್ತಾನು ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ಎಲ್ಲಾ ದವಸಗಳನ್ನು ಕೋಲಾರ ತಹಶೀಲ್ದಾರ್ ಹರ್ಷವರ್ಧನ್ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಲಾರಿ ಹಾಗೂ ಆಹಾರ ಧಾನ್ಯಗಳನ್ನು ಸುರಕ್ಷಿತವಾದ ಸ್ಥಳದಲ್ಲಿ ಇರಲಾಗಿದೆ. ನಗರ ಪೊಲೀಸ್ ವೃತ್ತ ನಿರೀಕ್ಷಕ ಗೊರವನಕುಂಟೆ ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಸೂಕ್ತ ರಕ್ಷಣೆಯೊಂದಿಗೆ ಆಹಾರ ಪದಾರ್ಥಗಳನ್ನು ಸಾಗಿಸಿದರು.

ಇನ್ನೂ ದಾಸ್ತಾನು ಮಾಡುತ್ತಿದ್ದ ಮನೆಯ ಮಾಲೀಕ ಇನಾಯತ್ ಹೇಳುವ ಪ್ರಕಾರ, ಆಹಾರ ಧಾನ್ಯಗಳನ್ನು ಹಬ್ಬದ ವೇಳೆ ವಿತರಿಸಲು ಪ್ರತಿವರ್ಷ ಶಹೀನ್ ಷಾ ನಗರದ ನಾಲ್ಕು ಮಸೀದಿಗಳಲ್ಲಿ ರಂಝಾನ್ ವೇಳೆ ಸಮುದಾಯದ ಜನರು ವರ್ಷ ಪೂರ್ತಿ ಉಳಿಸುವ ತಮ್ಮ ಲಾಭದ ಒಂದು ಭಾಗವನ್ನು ಬಡವರಿಗಾಗಿ ದಾನದ ರೂಪದಲ್ಲಿ ಮಸೀದಿಯಲ್ಲಿ ಶೇಖರಿಸಲಾಗುತ್ತದೆ ಅದರೊಂದಿಗೆ ಪ್ರತಿಕುಟುಂಬದವರು ತಿಂಗಳಿಗೆ ಒಂದು ನೂರು ರೂಪಾಯಿಗಳನ್ನು ಮಸೀದಿಯಲ್ಲಿ ರಂಝಾನ್ ಹಬ್ಬಕ್ಕಾಗಿ ಇಡಲಾಗುತ್ತದೆ.

ಈ ಹಣವನ್ನು ರಂಝಾನ್ ಹಬ್ಬದ ದಿನಗಳಲ್ಲಿ ಫುಡ್ ಕಿಟ್ ರೂಪದಲ್ಲಿ ಬಡವರಿಗೆ ವಿತರಿಸಲಾಗುತ್ತಿದೆ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲಾ ಅಥವಾ ಚುನಾವಣೆಗೆ ಸೇರಿದ್ದೂ ಅಲ್ಲ, ಈ ಆಹಾರ ಧಾನ್ಯಗಳನ್ನು ಖರೀದಿ ಮಾಡಲು ಹಣ ಎಲ್ಲಿಂದ ಬಂತು ಹಾಗೂ ಎಲ್ಲಿಂದ ಇಷ್ಟೆಲ್ಲಾ ಖರೀದಿ ಮಾಡಲಾಗಿದೆ ಎಂಬುದಕ್ಕೆ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.

ಇನ್ನು ಮಾಜಿ ನಗರಸಭಾ ಸದಸ್ಯ ಬಿ.ಎಂ.ಮುಬಾರಕ್ ಮಾತನಾಡಿ, ಇಷ್ಟೆಲ್ಲಾ ದವಸ ದಾನ್ಯಗಳು ಬಡವರ ಬೆವರಿನ ಫಲದ್ದು, ಇದು ಯಾವುದೇ ಶ್ರೀಮಂತನ ಹಣದಿಂದ ಖರೀದಿ ಮಾಡಿಲ್ಲ, ಎಲ್ಲವೂ ಬಡ ಕೂಲಿ ಜನರು, ತಮ್ಮ ತಿಂಗಳ ಆದಾಯದ ಒಂದು ಭಾಗವನ್ನು ಬಡವರಿಗಾಗಿ ತೆಗೆದಿಡುವ ಹಾಗೂ ಬಡವರೇ ತಮ್ಮ ಅನುಕೂಲಕ್ಕಾಗಿ ಕ್ರೂಡೀಕರಿಸಿದ ರಂಝಾನ್ ಫುಡ್ ಕಿಟ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೂರು ದಿನಗಳಲ್ಲೇ ನೀಡುವ ಭರವಸೆ ನೀಡಿದ್ದಾರೆ. ಕಾಯುತ್ತೇವೆ ಎಂದು ಹೇಳಿದರು.

ಇನ್ನೂ ತಾಲ್ಲೂಕು ಡಂಡಾಧಿಕಾರಿ ಹರ್ಷವರ್ಧನ್ ಮಾತನಾಡಿ, ಭಾನುವಾರ ಮದ್ಯಾಗ್ನ ತಮಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಆಹಾರ ಧಾನ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ವಾಪಸ್ಸು ನೀಡಲಾಗುವುದು ಎಂದು ತಿಳಿಸಿದರು.

ಈ ವಿಷಯ ಕೆಲವೇ ನಿಮಿಷಗಳಲ್ಲಿ ಇಡೀ ಷಹೀನ್ ಷಾ ನಗರದಲ್ಲಿ ಹರಡಿ ಒಂದು ಸಾವಿರಕ್ಕೂ ಹೆಚ್ಚು ಜನ ಜಮಾಯಿಸಿದರು. ಇದರಿಂದ ಸ್ವಲ್ಪ ಸಮಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತಾದರೂ, ಸೂಕ್ತ ಸಮಯಕ್ಕೆ ಪೊಲೀಸರು ಆಗಮಿಸಿ ಜನರನ್ನು ಚದುರಿಸುವಲ್ಲಿ ಯಶಸ್ವಿಯಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!