ಬಂಗಾರಪೇಟೆ:ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಸೀಸನ್ 7 ರ ಆಡಿಷನ್ ರಾಜ್ಯಾದ್ಯಂತ ನಡೆಸಿದ್ದು, ಅದರಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಮಂಜುನಾಥ್ ಮತ್ತು ಜ್ಯೋತಿ ಎಂಬುವರ ಮಗ ಚಂದನ್ ಆಯ್ಕೆಯಾಗಿದ್ದು ತಾಲ್ಲೂಕಿಗೆ ಹೆಮ್ಮೆ ತಂದುಕೊಡುವಂತಾಗಿದೆ.
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸೀಸನ್ 7 ಈ ವಾರ ಪ್ರಸಾರವಾಗಲಿದೆ. ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋನ ಏಳನೇ ಸೀಸನ್ ಜೀ5 ಕನ್ನಡ ಮನರಂಜನಾ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.ಈ ಕುರಿತು ಡ್ಯಾನ್ಸ್ ರಿಯಾಲಿಟಿ ಶೋನ ಪ್ರೋಮೋಗಳನ್ನು ಜೀ 5 ಚಾನೆಲ್ ಬಿಡುಗಡೆ ಮಾಡಿದೆ.
6 ರಿಂದ 60 ವರ್ಷ ವಯಸ್ಸಿನ ನೃತ್ಯ ಉತ್ಸಾಹಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರಾಥಮಿಕ ಆಡಿಷನ್ ನಂತರ ಅವರು ನ್ಯಾಯಾಧೀಶರ ಮುಂದೆ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಾರೆ ಮತ್ತು ತೀರ್ಪುಗಾರರಿಂದ ಅವರು ಪಡೆಯುವ ಅಂಕಗಳ ಆಧಾರದ ಮೇಲೆ ಹಾಗೂ ಮತದಾನದ ಆಧಾರದ ಮೇಲೆ ಮುಂದಿನ ಸುತ್ತುಗಳಿಗೆ ಮುಂದುವರಿಯುತ್ತಾರೆ.
ಕನ್ನಡ ದೂರದರ್ಶನದಲ್ಲಿ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ನೃತ್ಯ ಉತ್ಸಾಹಿಗಳು ಭಾಗವಹಿಸಲಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗೆ ನಾಲ್ವರು ತೀರ್ಪುಗಾರಾಗಿ ಅರ್ಜುನ್ ಜನ್ಯ, ಚಿನ್ನಿ ಪ್ರಕಾಶ್, ಡಾ.ಶಿವರಾಜ್ ಕುಮಾರ್ ಮತ್ತು ರಕ್ಷಿತಾ ಪ್ರೇಮ್ ಇರಳಿದ್ದಾರೆ.