ಕೋಲಾರ: ಸುಮಾರು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಇಂದಿನ ವಿಧಾನ ಪರಿಷತ್ ಸದಸ್ಯರಾಗುವರೆಗೂ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಮತ್ತು ಯಾದವ ಸಮುದಾಯದ ಹಿರಿಯ ನಾಯಕ ನಾಗರಾಜ್ ಯಾದವ್ ರವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಮಾನ ನೀಡಬೇಕೆಂದು ಕರ್ನಾಟಕ ಯಾದವ ಯುವ ವೇದಿಕೆ ರಾಜ್ಯ ಕಾರ್ಯದರ್ಶಿ ಮಾಲೂರು ಎಮ್ ಎನ್ ಮನೋಹರ್ ಯಾದವ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮನೋಹರ್ ಯಾದವ್, ನಾಗರಾಜ್ ಯಾದವ್ ರವರು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಗಿ ಪಕ್ಷ ನಿಷ್ಟೆಯಿಂದ ಪಕ್ಷದ ಕಾರ್ಯಕ್ರಮಗಳನ್ನು ರಾಜ್ಯದ ಮೂಲೆ ಮೂಲೆಯಿಂದ ಸಂಘಟನೆ ಮಾಡುತ್ತಾ ಸುಮಾರು 4ವರ್ಷಗಳಿಂದ ಮಾದ್ಯಮದ ಮುಖ್ಯ ವಾಹಿನಿಗಳಲ್ಲಿ ಸುಮಾರು 4500 ಹೆಚ್ಚು ಸಂವಾದ ಗಳನ್ನು ಮಾಡಿ ಕಾಂಗ್ರೆಸ್ ಪಕ್ಷವನ್ನು ಸಾರ್ವಜನಿಕ ವಲಯದಲ್ಲಿ ಆತ್ಮವಿಶ್ವಾಸ ಮೂಡಿಸುವ ಉತ್ತಮ ವಾಗ್ಮಿ ಎಂದೇ ನಾಗರಾಜ್ ಯಾದವ್ ರವರು ಹೆಸರಾಗಿದ್ದಾರೆ.
2013ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಗಿ ರಾಜ್ಯದ ಜನತೆ ಮತ್ತು ಬೇರೆ ರಾಜ್ಯದ ಪ್ರತಿನಿಧಿಗಳು ಬೆಂಗಳೂರು ಸಾರಿಗೆಯತ್ತ ಮುಖ ಮಾಡಿ ನೋಡುವಂತೆ ಸಾಧನೆಗೈದಿದ್ದ ಅನೇಕ ವಿಚಾರಗಳು ನಮ್ಮ ಮುಂದಿದೆ.
ಯಾದವ ಸಮುದಾಯವು ರಾಜಕೀಯವಾಗಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುಖ್ಯ ವಾಹಿನಿಗೆ ಮುಂದೆ ಬರಲು ನಾಯಕತ್ವದ ಕೊರತೆ ಇದ್ದು ಅದನ್ನು ಪೂರೈಸಲು ವಿಧಾನ ಪರಿಷತ್ ಸದಸ್ಯರು ವಿಚಾರವಂತರು ಉತ್ತಮ ವಾಗ್ಮಿಗಳಾದ ನಾಗರಾಜ್ ಯಾದವ್ ರವರಗೆ ಈ ಬಾರಿ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ.