• Thu. Apr 25th, 2024

PLACE YOUR AD HERE AT LOWEST PRICE

ಮಾಲೂರು : ರಾಜ್ಯದಲ್ಲಿ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಪ್ರತಿತಿಂಗಳು ಕನಿಷ್ಠ ವೇತನ ನೀಡಿ ನಿವೃತ್ತಿ ಯಾದಗ ಹಿಡಿಗಂಟುಕೊಡುಬೇಕು ಎಂದು ಸಾಮ್ರಾಟ್ ಅಶೋಕ್ ಕಟ್ಟಡ ಕಾರ್ಮಿಕ ಸಂಘದ ಕೋಲಾರ ಜಿಲ್ಲಾಧ್ಯಕ್ಷ ಎಂ. ರವಿಂದ್ರಕುಮಾರ್ ಒತ್ತಾಯಿಸಿದ್ದಾರೆ.

ಅವರು ಪತ್ರಿಕೆಹೇಳಿಕೆ ನೀಡಿ ಮಾತನಾಡಿ ರಾಜ್ಯದಲ್ಲಿ ಪ್ರತಿ ಗ್ರಾಮ ಪಂಚಾತಿ ವ್ಯಾಪ್ತಿಯಲ್ಲಿಕೆಲವು ಕಡೆ ಕೊಳಚೆ ಹಾಗೂ ಆಲಮಾರಿ ಗ್ರಂಥಾಲಯಗಳನ್ನು ಸ್ಥಾಪಿಸಿ ಎಸ್ ಎಸ್ ಎಲ್ ಸಿ ಪಾಸ್ ಆಗಿರುವವರನ್ನು ರೋಸ್ಟರ್ ಪದ್ಧತಿಯಲ್ಲಿ ಗ್ರಂಥಾಲಯ ಮೇಲ್ವಿಚಾರಕರಾಗಿ ನೇಮಕಾತಿ ಮಾಡಿಕೊಂಡು ಆರಂಭ ದಲ್ಲಿ ಎಂಟು ಗಂಟೆಗಳ ಅವಧಿ ಕರ್ತವ್ಯ ನಿರ್ವಹಿಸಬೇಕು ಗೌರವ ಧನ ರೂ 700 ರಿಂದ ಹಂತ ಹಂತವಾಗಿ ಎಚ್ಚಿಸುತ್ತಾಬರುತಿದ್ದು ಅಷ್ಟೇ ಕೆಲಸದ ಭಾರವನ್ನು ನೀಡುತ್ತಿದ್ದಾರೆ,ಸಾರ್ವಜನಿಕ ಶಿಕ್ಷಣಇ ಲಾಖೆ ಯ ಅಂಗ ಸಂಸ್ಥೆಯಾದ ಸಾರ್ವಜನಿಕ ಗ್ರoಥಾಲಯಇಲಾಖೆ ಯಡಿ ಗ್ರಾಮ ಪಂಚಾಯತಿ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿತ್ತು.

ಬೆಲೆ ಏರಿಕೆಗೆ ಅನುಗುಣವಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಿ ಎಂದು ಮೇಲ್ವಿಚಾರಕರು ಪ್ರತಿಭಟನೆ ಹೋರಾಟ ಮಾಡಿದರು ಮಾಹಿತಿ ಗಾಗಿ ಅಂದಿನ ಸರ್ಕಾರ ಇಲಾಖೆಯ ನಿರ್ದೇಶಕರಿಗೆ ಉಸ್ತುವಾರಿ ವಹಿಸಿದಾಗ ಆ ಪುಣ್ಯತ್ಮರು ಗ್ರಾಮ ಪಂಚಾಯತಿಯ ಮೇಲ್ವಿಚಾರಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸದೆ ಅವರ ಕೆಲಸದ ವೇಳೆಯನ್ನು ಎಂಟು ಗಂಟೆ ಯಿಂದ ನಾಲ್ಕು ಗಂಟೆಗೆ ಇಳಿಸಿ ವೇತನ ತಾರುತಮ್ಯ ಮಾಡಿದರು ಆದರೆ ಕೆಲಸದ ಒತ್ತಡ ಮಾತ್ರ ಹೆಚ್ಚಾಯಿತು ಒಬ್ಬ ಮೇಲ್ವಿಚಾರಕ ದಿನದ ನಾಲ್ಕು ಗಂಟೆ ಮಾತ್ರ ಅರೆಕಾಲಿಕ ಕೆಲಸ ಮಾಡಿದರೆ ಉಳಿದ ಸಮಯದಲ್ಲಿ ಬೇರೆಯವರು ಯಾವ ಕೆಲಸ ಕೊಡುತ್ತಾರೋ ಅದನ್ನು ಮಾಡಬೇಕು, ಹೀಗೇ ಇಡೀ ದಿನ ಕಳೆಯಬೇಕಿತ್ತು.

ಗ್ರಂಥಾಲಯ ಮೇಲ್ವಿಚಾರಕರ ರಾಜ್ಯ ಸಂಘದ ಅಲವು ದಿನಗಳ ಹೋರಾಟ ಫಲವಾಗಿ ವೇತನ ವನ್ನು ಹನ್ನೆರಡು ಸಾವಿರಕ್ಕೆ ಏರಿಕೆ ಮಾಡಿ ಗ್ರಾಮಪಂಚಾಯತಿ ಗ್ರಂಥಾಯಗಳನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾವಣೆ ಮಾಡಿ ಕೆಲಸದ ಸಮಯ ವನ್ನು ನಾಲ್ಕು ಗಂಟೆ ಯಿಂದ ಆರು ಗಂಟೆಗೆ ಹೆಚ್ಚಿಸಿ ಕೆಲಸದ ಭಾರವು ಅಧಿಕ ಮಾಡ ಲಾಗಿದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಹೋಗಿ ಶಾಲೆಗಳಲ್ಲಿ ಸದ್ಯಸತ್ವ ಮಾಡಿಸಬೇಕು ಸದಸ್ಯಆದವರಿಗೆ ಪುಸ್ತಕ ನೀಡಬೇಕು ವಾಪಸ್ಸು ಕೊಡದಿದ್ದರೆ ಅವರ ಊರುಗಳಿಗೆ ಹೋಗಿ ಪುಸ್ತಕ ವಾಪಾಸ್ ಪಡೆಯ ಬೇಕು ಹೋಗಲು ಟಿಎ -ಡಿಎ,ತಮ್ಮ ಕೈ ಯಿಂದಲೇ ಬರಸಬೇಕು ಪ್ರತಿ ದಿನ ಬೆಳೆಗ್ಗೆ ಸಂಜೆ ಬಯೋಮೆಟ್ರಿಕ್ ಮೂಲಕ ಹಾಜರಾತಿ ಕೊಡಬೇಕು ಎಂದು ಜಾರಿಗೆ ತರಲಾಯಿತು.

ಅದು ಗ್ರಾಮ ಪಂಚಾಯತಿ ಕಾರ್ಯಲಯ ದಲ್ಲಿ ಬೆಳಗ್ಗೆ ಸಂಜೆ ಆಗಿತ್ತು ಈಗ ಗ್ರಂಥಾಲಯದ ಮೇಲ್ವಿಚಾರಕರ ಮೊಬೈಲ್ ನಲ್ಲೆ ಬಯೋ ಮೆಟ್ರಿ ಕ್ ಲೋಕೇಶನ್ ಫಿಕ್ಸ್ ಮಾಡಿ ಹಾಜರಿತಿ ನೀಡುವಂತೆ ಆದೇಶ ಮಾಡಿದ್ದೂ ಸ್ಮಾರ್ಟ್ ಫೋನ್ ಖರೀದಿ ಮಾಡ ಬೇಕಾದರೆ ಕನಿಷ್ಠ 15 ರಿಂದ 20 ಸಾವಿರ ಆಗುತ್ತದೆ ಮೂರು ರಿಂದ ಆರು ತಿಂಗಳಿಗಳು ಆದರೂ ವೇತನ ಆಗದೆ ಪ್ರತಿ ನಿತ್ಯ ಓಡಾಡಲು ಬಸ್ ಗೆ ಸಾಲ ಸೋಲ ಮಾಡಬೇಕು ಮೂರು ತಿಂಗಳಿಗೆ ಆರು ತಿಂಗಳಿಗೆ ಬಂದ ವೇತನ ದಲ್ಲಿ ಸಾಲ ತೀರೀಸಬೇಕು ಮಕ್ಕಳ ವಿದ್ಯಾಬ್ಯಾಸ, ಮನೆ ಬಾಡಿಗೆ, ಅರೋಗ್ಯ ತಪಾಸಣೆಗೆ ಬರುವ ವೇತನ ಸಾಕಾಗಲ್ಲ ಇಂತಹ ಸಮಯದಲ್ಲಿ ಸರ್ಕಾರಿ ಖಾಯಂ ನೌಕರರಿಗಿಂತ ಹೆಚ್ಚು ಕೆಲಸ ಕೊಡುತಿರುವ ಸರ್ಕಾರ ಮತ್ತು ಇಲಾಖೆ ಗ್ರಂಥಾಲಯ ಮೇಲ್ವಿಚಾರಕರನ್ನು ಕಾರ್ಮಿಕ ಕಾಯಿದೆಯಡಿ ಸರ್ಕಾರಿ ನೌಕರರೆಂದು ಪರಿಗಣಿಸಲಿ ಅವರಂತೆ ಕೆಲಸ ಕೊಡಲಿ ಓದುವ ಬೆಳಕು,ಸೇರಿದಂತೆ ಅಲವಾರು ಯೋಜನೆಗಳನ್ನು ಗೌರವಧನ ನೌಕರರಿಂದ ದುಡಿಸುತಿರುವುದು ಎಷ್ಟರ ಮಟ್ಟಿಗೆ ಸರಿ .

ಐವತ್ತುರಿಂದ ಎಪ್ಪತ್ತು ಸಾವಿರ ದವರಿಗೂ ವೇತನ ಪಡೆಯುವ ಸರ್ಕಾರಿ ಶಾಲಾ ಶಿಕ್ಷಕರು ತರಬೇತಿ ಮೇಲೆ ತರಬೇತಿ ಪಡೆದಿರುವ ರಿಂದಲೇ ಆಗದ ಮಕ್ಕಳ ಬೇಸಿಗೆ ಶಿಬಿರ ವನ್ನು ತುರ್ತುತಾಗಿ ಯೂಟೂಬ್ ನಲ್ಲಿ ಒಂದು ದಿನ ತರಬೇತಿ ನೀಡಿ ಒಂದೇ ದಿನದಲ್ಲಿ ಬೇಸಿಗೆ ಶಿಬಿರ ಮಾಡಿ ಪ್ರತಿದಿನ ಮಾಹಿತಿ ನೀಡ ಬೇಕು ಸಂಪನ್ಮೂಲವಿಲ್ಲದೆ, ಶಿಕ್ಷಕ ಮಾತೆ ಕೇಳದ ಮಕ್ಕಳು ಮೇಲ್ವಿಚಾರಕರ ಮಾತು ಕೇಳುತ್ತಾರ ಪೋಷಕರು ಮಕ್ಕಳ ನ್ನು ಕರ ತಂದು ಬಿಡುವರೆ ? ಶಾಲಾ ಅವಧಿಯಲ್ಲಿ ಮಕ್ಕಳನ್ನು ಗ್ರಂಥಾಲಯಕ್ಕೆ ಕಳುಹಿಸಲು ಹಿಂದೆ ಮುಂದೆ ನೋಡುತಿದ್ದ ಶಿಕ್ಷಕರು ಈ ತರಹದ ಸಹಕಾರ ನೀಡುತ್ತಾರೆಯೇ ?.

ಕಾರ್ಯಕ್ರಮಗಳನ್ನು ಮಾಡಬೇಕಾದರೆ ಶಿಕ್ಷಣ ಇಲಾಖೆಯ ಜತೆಗೆ ಮೇಲ್ವಿಚಾರಕರನ್ನು ಸೇರಿಸಿ ಶಿಕ್ಷಕರ ಜೊತೆ ತರಬೇತಿ ನೀಡಿ ಅವರಂತೆ ಪರಿಗಣಿಸಬೇಕು ಅಧಿಕಾರಿಗಳು ದಿನಕೊಂದು ಯೋಜನೆ ಆದೇಶ ಮಾಡಿದರೆ ಹೇಗೆ, ಮೇಲ್ವಿಚಾರಕರನ್ನು ಗೌರವ ಧನ ನೌಕರರಿಂದ ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು,ಪಿ ಎಫ್, ಇ ಎಸ್ ಐ ನೀಡಬೇಕು ನಿವೃತ್ತಿ ಯಾದಗ ಹಿಡಿಗಂಟು ನೀಡಿಬೇಕು ಸುಮಾರು ವರ್ಷಗಳಿಂದ ಮೇಲ್ವಿಚಾರಕರಾಗಿ ಸೇವೆ ಮಾಡುತ್ತಿರುವ ನೌಕರರ ನಿವೃತ್ತಿ ಆದರೂ ಎಷ್ಟೋ ಮಂದಿ ಅನಾರೋಗ್ಯ ದಿಂದ ಮೃತ ರಾದರು ಅವರಿಗೆ ಯಾವುದೇ ಪರಿಹಾರಸಿಗಲಿಲ್ಲ ಬಿ. ಎ, ಪದವಿ ಮಾಡಿರುವವರು ಇದ್ದಾರೆ ಕೇವಲ ಪ್ರತಿಷ್ಠೆ ಗಾಗಿ ಸಮಾಜದಲ್ಲಿ ಗೌರವಕ್ಕಾಗಿ ಎಷ್ಟೋ ಮಂದಿ ಸೇವೆ ಮಾಡುತ್ತಿದ್ದಾರೆ ಅನಾರೋಗ್ಯದಿಂದ ಸಾವನ್ನು ಅಪ್ಪಿದ ಮೇಲ್ವಿಚಾರಕರನ್ನೇ ಅವಲಂಬಿ ಸೀರುವ ಕುಟುಂಬಗಳು ಬೀದಿ ಪಾಲಗೂಸ್ಥಿತಿಯಲ್ಲಿವೆ ರಾಜ್ಯ ಸರ್ಕಾರ ಪರಿಶೀಲನೆ ಮಾಡಿ ಕಾರ್ಮಿಕ ಕಾಯಿದೆಯಡಿ ಮೇಲ್ವಿಚಾರಕರ ರಕ್ಷಣೆಗೆ ಸೇವೆಗೆ ತಕ್ಕ ವೇತನ, ಅರೋಗ್ಯ ಭತ್ಯೆ, ಸೇವೆಯಲ್ಲಿ ಮರಣ ಹೊಂದಿದ ಮೇಲ್ವಿಚಾರಕರ ಕುಟುಂಬದವರಿಗೆ ಉದ್ಯೋಗ, ವಯೋನೀವೃತ್ತಿ ವೇತನ ನೀಡ ಬೇಕು ಎಂದು ಒತ್ತಾ ಯಿಸಿದ್ದಾರೆ .

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!