ಬಂಗಾರಪೇಟೆ: ರಾಜ್ಯದ್ಯಂತ ಅಂಬೇಡ್ಕರ್ ನಿಗಮ ಹಾಗೂ ಖಾಸಗಿ ಬ್ಯಾಂಕುಗಳು, ರಾಜ್ಯ ಹಾಗೂ ಕೇಂದ್ರ ಬ್ಯಾಂಕುಗಳಲ್ಲಿ ದಲಿತರು ಮಾಡಿರುವ ಸಾಲಗಳನ್ನು ಈ ಕೂಡಲೇ ಸರ್ಕಾರ ಮನ್ನಾ ಮಾಡಬೇಕೆಂದು ಕರ್ನಾಟಕ ದಲಿತ ಸಮಾಜ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಅವರು ಆಗ್ರಹಿಸಿದ್ದಾರೆ.
ಅವರು ಇಂದು ತಾಲೂಕು ಕಚೇರಿ ಮುಂದೆ ಉಪ ತಹಸಿಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡುತ್ತಾ, ದಲಿತರು ಸಾಲಗಳನ್ನು ಕಟ್ಟಲಿಕ್ಕೆ ಸಾಧ್ಯವಾಗದೆ ತನ್ನ ಕುಟುಂಬಗಳನ್ನು ಪೋಷಣೆ ಮಾಡಲು ಮತ್ತು ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಲು ಹೆಣಗಾಡುತ್ತಿಸ್ದಾರೆ.
ದಲಿತರಿಗೆ ಸಂಸಾರವನ್ನು ನಿರ್ವಹಿಸುವುದೇ ಕಷ್ಟಕರವಾಗಿರುವಾಗ ಸರ್ಕಾರದಿಂದ ಪಡೆದಿರುವ ಸಾಲಗಳನ್ನು ತೀರಿಸಲು ಅಶಕ್ತರಾಗಿದ್ದಾರೆ. ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಜನಪರವಾಗಿದೆ ಎನ್ನಲಾಗುತ್ತಿದೆ. ಸರ್ಕಾರ ಈ ಕೂಡಲೇ ರಾಜ್ಯದ್ಯಂತ ದಲಿತರ ಸಾಲಗಳನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ದೇವಗಾನಹಳ್ಳಿ ನಾಗೇಶ್, ಮುನಿಸ್ವಾಮಿ, ಆಟೋ ಕರ್ಣ, ಗೌತಮ್, ಮುರಳಿ, ಪಳನಿ, ಮಂಜು ಇನ್ನೂ ಮುಂತಾದವರು ಭಾಗವಹಿಸಿದ್ದರು.