• Sat. Jul 13th, 2024

PLACE YOUR AD HERE AT LOWEST PRICE

ಕೋಲಾರ ನಗರದ ಕೀಲುಕೋಟೆ, ಅಂತರಗಂಗೆ ರಸ್ತೆಯಲ್ಲಿ ವಾಸವಾಗಿರುವ ಸುಮಾರು ೨೩ ವರ್ಷ ವಯಸ್ಸುಳ್ಳ ಶರಣ್ ಕುಮಾರ್ ಎನ್. ಅವರ ಎರಡೂ ಕಿಡ್ನಿಗಳು ಕಾರ್ಯನಿರ್ವಹಿಸದ ಕಾರಣ ಚಿಕಿತ್ಸೆಗಾಗಿ ದಾನಿಗಳಿಂದ ಆರ್ಥಿಕ ಸಹಾಯ ಮಾಡುವಂತೆ ಅವರ ತಂದೆ ಗಾರೆಮೇಸಿ ನಾರಾಯಣಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕೋಲಾರ ನಗರದ ಕೀಲುಕೋಟೆ, ಅಂತರಗಂಗೆ ರಸ್ತೆಯಲ್ಲಿ ವಾಸವಾಗಿರುವ ಗಾರೆ ಕೆಲಸ ನಿರ್ವಹಿಸುತ್ತಿರುವ ನಾರಾಯಣಸ್ವಾಮಿ ರವರ ಮಗ ಸುಮಾರು ೨೩ ವರ್ಷ ವಯಸ್ಸುಳ್ಳ ಶರಣ್ ಕುಮಾರ್ ಎನ್. ರವರು ತಮ್ಮ ಮನೆಯ ಹತ್ತಿರ ಹಸು ಮೇಯಿಸುವ ಸಂದರ್ಭದಲ್ಲಿ ಹಾವು ಕಚ್ಚಿ ಒಂದು ವರ್ಷ ಮೇಲೆ ಇದರ ಪ್ರಭಾವದಿಂದ ಎರಡೂ ಕಿಡ್ನಿಗಳು ಕಾರ್ಯನಿರ್ವಹಿಸದ ಕಾರಣ ಪ್ರತಿ ನಿತ್ಯ ಇವರಿಗೆ ಡಯಾಲಿಸಿಸ್ ಸೂಚಿಸಲಾಗಿದೆ.

ಕೋಲಾರ ಜಾಲಪ್ಪ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗಾಗಿ ಸುಮಾರು ೫ ಸಾವಿರ ರೂಗಳು ತಗಲುತ್ತದೆ. ಆದರೆ ಇವರಿಗೆ ಕಿಡ್ನಿ ಕೊಡಲು ಅವರ ತಾಯಿ ಉಮಾ ಮುಂದೆ ಬಂದಿದ್ದು, ಇದಕ್ಕೆ ಸಂಬಂಧಪಟ್ಟ ಎಲ್ಲಾ ಪರೀಕ್ಷೆಗಳು ಮುಗಿದಿದ್ದು ಉಮಾ ರವರ ಕಿಡ್ನಿಯು ಅವರ ಮಗನಿಗೆ ಹೊಂದಾಣಿಕೆ ಆಗುತ್ತಿರುವುದರಿಂದ ಅವರು ಕಿಡ್ನಿಯನ್ನು ದಾನ ಮಾಡಲು ಮುಂದಾಗಿರುತ್ತಾರೆ.

ಆದರೆ ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್‌ಗೆ ಇವರ ಹತ್ತಿರ ಆರ್ಥಿಕ ಮುಗ್ಗಟ್ಟು ಎದುರಾಗುವುದರಿಂದ ಹಾಗೂ ಮುಂದಿನ ಚಿಕಿತ್ಸೆಗೆ ಇವರಿಗೆ ಆರ್ಥಿಕ ಸಹಾಯದ ಅಗತ್ಯತೆ ಇರುವುದರಿಂದ ಇದಕ್ಕೆ ತಗಲುವ ವೆಚ್ಚವಾದ ಸುಮಾರು ೭ ರಿಂದ ೧೦ ಲಕ್ಷ ರೂಗಳೆಂದು ಅಂದಾಜಿಸಲಾಗಿದ್ದು, ಈ ಆರ್ಥಿಕ ಮುಗ್ಗಟ್ಟನ್ನು ನೀಗಿಸಲು ದಾನಿಗಳಿಂದ ಸಹಾಯಹಸ್ತ ಚಾಚಿದ್ದಲ್ಲಿ ಶರಣ್ ಕುಮಾರ್ ರವರ ಆರೋಗ್ಯ ಮೊದಲಿನಂತಾಗುವುದು ಎಂದು ಆಶಯ ವ್ಯಕ್ತಪಡಿಸುತ್ತಾ ಎಲ್ಲಾ ದಾನಿಗಳಿಂದ ಆರ್ಥಿಕ ಸಹಾಯವನ್ನು ನೀಡಬೇಕೆಂದು ಗಾರೆ ಕೆಲಸದ ನಾರಾಯಣಸ್ವಾಮಿ ಮೊಬೈಲ್ ಮತ್ತು ಫೋನ್‌ ಪೇ ಸಂಖ್ಯೆ ೭೬೧೯೬೭೮೧೫೦ ರ ಮೂಲಕ ಕೋರಿದ್ದಾರೆ.

 

Leave a Reply

Your email address will not be published. Required fields are marked *

You missed

error: Content is protected !!